ಹಾಸನ: ವಿಶ್ವ ಸಾಹಿತ್ಯದ ದೈತ್ಯ, ದಿವ್ಯ, ಭವ್ಯ ಪ್ರತಿಭೆಯಾದ ಕುವೆಂಪು ಅವರು ಕನ್ನಡಿಗರ ಎದೆಯಲ್ಲಿ ಬಿತ್ತಿದ ಕನ್ನಡ ಪ್ರಜ್ಞೆಯು ವಿಶ್ವಮಾನವ ಪ್ರಜ್ಞೆಯ ಭಾಗವಾಗಿ, ಕುವೆಂಪು ಅವರ ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಚರಿತ್ರೆಯಲ್ಲಿ ದಟ್ಟವಾಗಿ ಮೂಡಿಬಂದಿದೆ. ಅವರ ಒಟ್ಟು ಸಾಹಿತ್ಯದಲ್ಲೇ ಕನ್ನಡಪ್ರಜ್ಞೆಯ ವಿರಾಟ್ ದರ್ಶನ ಲಭಿಸುತ್ತದೆ ಎಂದು ಮೈಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಹೇಳಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಟೈಮ್ಸ್ ಪಿ.ಯು. ಕಾಲೇಜು ವತಿಯಿಂದ ನಗರದ ಸತ್ಯಮಂಗಲದಲ್ಲಿರುವ ಟೈಮ್ಸ್ ಗುರುಕುಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಕುವೆಂಪು ಮತ್ತು ಕನ್ನಡ ಪ್ರಜ್ಞೆ’ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.

ಕನ್ನಡ ಬದುಕಿನ ಅನಾವರಣ, ಪ್ರಕೃತಿಯ ವರ್ಣನೆ, ಭಾಷೆಯ ಸಾರಸತ್ವ, ಜನಜೀವನದ ದರ್ಶನದಲ್ಲಿ ಕನ್ನಡ ಪ್ರಜ್ಞೆಯ ಕೇಂದ್ರಿತ ನೆಲೆಗಳಿವೆ. ಈ ನೆಲೆಗಳು ನಮ್ಮ ಭಾಷೆ ಮತ್ತು ಸಂಸ್ಕೃತಿಯ ಮೂಲಕ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುತ್ತವೆ ಎಂದು ಅಭಿಪ್ರಾಯಪಟ್ಟರು.

ಕುವೆಂಪು ಅವರಿಗೆ ಕನ್ನಡವೇ ಧರ್ಮ ಮತ್ತು ಕರ್ಮ ಎರಡೂ ಆಗಿತ್ತು. ನಮ್ಮ ಸಮಾಜವನ್ನು ಕನ್ನಡ ಸಮಾಜ ಎಂದು ಕರೆದು, ಅದರ ಹುಳುಕುಗಳನ್ನು ವಿಮರ್ಶಿಸಿ, ಅದಕ್ಕೆ ತಮ್ಮ ಬರಹ ಮತ್ತು ಭಾಷಣದ ಮೂಲಕ ಚಿಕಿತ್ಸೆ ಕೊಟ್ಟರು. ಕನ್ನಡ ಭಾಷೆಯ ಹಾಗೂ ಕನ್ನಡ ಸಾಹಿತ್ಯದ ಮೂಲಕ ಕರ್ನಾಟಕ ಸಂಸ್ಕೃತಿಯ ಸಮಾಜದ ವಿಕಾಸಕ್ಕೆ ಶ್ರಮಿಸಿದರು ಎಂದರು.

ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಕನ್ನಡ ಪ್ರಜ್ಞೆ ಎನ್ನುವುದು ಕುವೆಂಪು ಅವರ ಅಂತರ್ಮುಖಿ ಮತ್ತು ಬಹಿರ್ಮುಖಿ ಎರಡೂ ದಿಸೆಗಳಲ್ಲೂ ಹಾಸುಹೊಕ್ಕಾಗಿತ್ತು. ಕುವೆಂಪು ಯಾವುದೇ ಜಾತಿ, ಧರ್ಮ, ಪಂಗಡಕ್ಕೆ ಅಂಟಿಕೊಳ್ಳಲಿಲ್ಲ. ಅವರು ಬರೆದಂತೆ ನಡೆದವರು, ನಡೆದಂತೆ ಬರೆದವರು ಎಂದು ಹೇಳಿದರು.

ಕುವೆಂಪು ಕನ್ನಡ ನಾಡು ನುಡಿಗಾಗಿ ಬದುಕಿ ಬಾಳಿದವರು. ಕರ್ನಾಟಕದಲ್ಲಿ ಡಾ.ರಾಜ್ಕುಮಾರ್ ಹಾಗೂ ಕುವೆಂಪು ಅವರು ಕನ್ನಡ ನಾಡು ನುಡಿಗಾಗಿ ಅವಿಶ್ರಾಂತವಾಗಿ ದುಡಿದ ಮಹಾನ್ ಅಜಾತಶತ್ರುಗಳು. ಇವರಿಂದ ನಾವೆಲ್ಲರೂ ಕನ್ನಡ ಪ್ರಜ್ಞೆಯನ್ನು ಬೆಳಿಸಿಕೊಳ್ಳಬೇಕಿದೆ ಎಂದರು.

ಟೈಮ್ಸ್ ಗುರುಕುಲ ಮತ್ತು ಟೈಮ್ಸ್ ಪಿ.ಯು.ಕಾಲೇಜಿನ ಅಧ್ಯಕ್ಷ ಎ.ಬಿ.ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಆಶಯ ನುಡಿಗಳನ್ನಾಡಿದರು.

ಸಾಹಿತಿ ಗೊರೂರು ಅನಂತರಾಜು, ಕದಂಬ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಚ್.ಗಣೇಶ್, ಎವಿಕೆ. ಕಾಲೇಜಿನ ಉಪನ್ಯಾಸಕ ಪ್ರಕಾಶ್, ಮೈಸೂರಿನ ಅದಮ್ಯ ರಂಗ ಶಾಲೆಯ ಸ್ಥಾಪಕ ಹಾಗೂ ರಂಗಕರ್ಮಿ ಚಂದ್ರು ಮಂಡ್ಯ, ಕವಯತ್ರಿಯರಾದ ಗಿರಿಜಾ ನಿರ್ವಾಣಿ, ಮಂಜುಳಾ ಪ್ರಸಾದ್, ಪದ್ಮಾವತಿ ವೆಂಕಟೇಶ್, ಪ್ರಭಾಮಣಿ, ಪ್ರಾಂಶುಪಾಲ ಶೈಲರಾಯ್, ಉಪನ್ಯಾಸಕ ಪ್ರಮೋದ್, ಕನ್ನಡ ಉಪನ್ಯಾಸಕ ಅರವಿಂದ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-36-1496556269

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.