ಹಾಸನ: ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಾಲ್ಕು ದಶಕಗಳಿಂದ ಬಣ್ಣದ ಲೋಕದಲ್ಲಿ ಅವಿಶ್ರಾಂತವಾಗಿ ದುಡಿಯುತ್ತಿರುವ ಚಿತ್ರ ಕಲಾವಿದ ಬಿ.ಎಸ್.ದೇಸಾಯಿ ಅವರು ನಾಡು ಕಂಡ ಅದ್ಭುತ ಪ್ರತಿಭೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಅಭಿಪ್ರಾಯಪಟ್ಟರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕಲಾವಿದ, ಚಿತ್ರಕಲಾ ಶಿಕ್ಷಕ ಬಿ.ಎಸ್.ದೇಸಾಯಿ ಅವರಿಗೆ ವಿವಿಧ ಸಂಘನೆಗಳ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಸಾಯಿಯವರು ಹಾಸನ ಜಿಲ್ಲೆಯ ಹೆಮ್ಮೆ. ಉತ್ತರ ಕರ್ನಾಟಕದಿಂದ ಬಂದು ಹಾಸನದಲ್ಲಿ ನೆಲೆನಿಂತಿದ್ದು, ಹಾಸನವನ್ನೇ ಹೊದ್ದು ಇಲ್ಲಿನ ಸಾವಿರಾರು ಮಕ್ಕಳ ಬಣ್ಣದ ಲೋಕಕ್ಕೆ ಮೆರಗು ನೀಡಿ ಚಿತ್ರಕಲಾ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಸಾಹಿತಿ ಚಲಂ ಹಾಡ್ಲಹಳ್ಳಿ ಮಾತನಾಡಿ, ದೇಸಾಯಿಯವರು ನಮ್ಮ ನಡುವಿನ ಸಾಧಕ ಪ್ರತಿಭೆ. ಹಾಸನಕ್ಕೆ ಬಂದಾಗ ಅವರ ಬದುಕು ಅಷ್ಟೊಂದು ಸುಲಭವಾಗಿರಲಿಲ್ಲ. ಸಾಕಷ್ಟು ಏಳುಬೀಳುಗಳನ್ನು ಅನುಭವಿಸುತ್ತಾ ಸಾಧನೆ ಮಾಡಿದ್ದಾರೆ. ಕೇವಲ ಚಿತ್ರಕಲೆಗೆ ಸೀಮಿತವಾಗದೇ ಸಾಹಿತ್ಯ, ಸಾಂಸ್ಕೃತಿಕ, ಪ್ರಾಕೃತಿಕ, ಸಾಮಾಜಿಕವಾಗಿ ಅನೇಕ ಚಳವಳಿಗಳಲ್ಲಿ ಸಕ್ರಿಯವಾಗಿ ಎಲ್ಲರೊಂದಿಗೆ ಒಳಗೊಳ್ಳುವಿಕೆ ನಮಗೆಲ್ಲಾ ಆದರ್ಶವಾಗಿದೆ. ಹುಣಸಿನಕೆರೆ ಉಳಿವಿಗಾಗಿ ಹೋರಾಟದ ನೇತೃತ್ವ ವಹಿಸಿ ಸಾಮುದಾಯಿಕ ಕೈಂಕರ್ಯ ಮಾಡಿದ್ದಾರೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ, ಪ್ರೈಡ್ ವಿಜ್ಞಾನ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿ ಸುರೇಶ್ ಗುರೂಜಿ, ಎ. ವಿಜಯಕುಮಾರ್, ಮಲ್ನಾಡ್ ಕಾಲೇಜಿನ ಹಿರಿಯ ಉಪನ್ಯಾಸಕ ಜಿ.ಮಂಜುನಾಥ್, ಎವಿಕೆ ಕಾಲೇಜಿನ ಉಪನ್ಯಾಸಕ ಪ್ರಕಾಶ್, ಜಿಲ್ಲಾ ತರಬೇತಿ ಆಯುಕ್ತ ಎಂ.ಎಸ್. ಪ್ರಕಾಶ್, ಹಿರಿಯ ಗೈಡ್ ಕ್ಯಾಪ್ಟನ್ ಎಚ್.ಜಿ. ಕಾಂಚನಮಾಲ, ಗೈಡ್ ಆಯುಕ್ತೆ ಜಯಾ ರಮೇಶ್, ಸ್ಕೌಟ್ ಆಯುಕ್ತ ಸ್ಟೀಫನ್ ಪ್ರಕಾಶ್, ಜಿಲ್ಲಾ ಸಹಾಯಕ ಆಯುಕ್ತೆ ಪ್ರೇಮಾ ಪ್ರಕಾಶ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-36-1909923814

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.