ಹಾಸನ: ಜನಪದವು ನಮ್ಮ ಪೂರ್ವಜರು ನೀಡಿದ ಅಮೂಲ್ಯ ಪರಂಪರೆ ಆಗಿದ್ದು, ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ರಂಗಕರ್ಮಿ ನಾಗರಾಜ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದೊಡ್ಡಬೀಕನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಾಗರವಳ್ಳಿಯ ವಾಲ್ಮೀಕಿ ಮಹಿಳಾ ಸಾಂಸ್ಕೃತಿಕ ಕಲಾ ಸಂಸ್ಥೆ, ಬೆಂಗಳೂರಿನ ಕರ್ನಾಟಕ ಜನಪದ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಜನಪದ ಸಂಭ್ರಮ ಮತ್ತು ವಿಚಾರ ಸಂಕಿರಣ’ವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಕಲೆಗಳಲ್ಲಿ ಮಹಿಳೆಗೆ ವಿಶೇಷ ಸ್ಥಾನವಿದ್ದು, ನಮ್ಮ ಪುರಾಣಗಳಲ್ಲಿಯೇ ಅದಕ್ಕೆ ಸಾಕ್ಷ್ಯ ಸಿಗುತ್ತದೆ. ಕೋಲಾಟ, ಸೋಬಾನೆ ಪದ, ಬೀಸೋ ಕಲ್ಲಿನ ಪದ, ಸುಗ್ಗಿ ಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಭಜನೆ, ಗೀಗಿ ಪದ, ಕರಪಾಲು ಮೇಳ, ವೀರಗಾಸೆ ಮುಂತಾದ ಕಲೆಗಳನ್ನು ಉಳಿಸಿ ಬೆಳೆಸುವುದು ಅಗತ್ಯ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಣ್ಣಾಚಾರಿ ಮಾತನಾಡಿ, ಯುವಪೀಳಿಗೆಗೆ ಪರಿಚಯವಿಲ್ಲದ ಹಲವಾರು ಜನಪದ ಕಲೆಗಳನ್ನು ಗುರುತಿಸಿ, ಕಲಾವಿದರಿಗೆ ವೇದಿಕೆ ಕಲ್ಪಿಸಿ, ಪ್ರಶಸ್ತಿಗಳ ಮೂಲಕ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದರು.

ಆಧುನಿಕತೆಯ ಹೆಸರಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡುತ್ತಿರುವ ಇಂದಿನ ಕಾಲದಲ್ಲಿ, ನಮ್ಮ ಮೂಲ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜನಪದದ ಮಹತ್ವ ಅರಿತು ಅದನ್ನು ಉಳಿಸುವ ಚಟುವಟಿಕೆಗಳು ಹೆಚ್ಚಾಗಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಶಿವಣ್ಣ ಮಾತನಾಡಿ, ಜನಪದವು ಸಾಮಾನ್ಯ ಜನರ ನೋವು-ನಲಿವುಗಳನ್ನು ವ್ಯಕ್ತಪಡಿಸುವ ಪ್ರಮುಖ ಮಾಧ್ಯಮವಾಗಿದೆ. ಉತ್ತರ ಕರ್ನಾಟಕದಲ್ಲಿ ಜನಪದ ಅತ್ಯಂತ ಸಮೃದ್ಧವಾಗಿದ್ದು, ದೇವರ ಚರಿತ್ರೆಗಳೂ ಜನಪದವನ್ನು ಅವಲಂಬಿಸಿವೆ. ಶಾಲಾ ಪಠ್ಯಕ್ರಮದಲ್ಲಿ ಜನಪದ ವಿಷಯವನ್ನು ಪರಿಚಯಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಪೂಜಾ ಕುಣಿತ, ಡೊಳ್ಳು ಕುಣಿತ, ಕೋಲಾಟ, ಸೋಮನ ಕುಣಿತ, ಕಂಸಾಳೆ ಮೆರವಣಿಗೆ ಸೇರಿದಂತೆ ಹಲವು ಜನಪದ ಕಲಾಪ್ರದರ್ಶನಗಳು ನಡೆದವು. ವಾಲ್ಮೀಕಿ ಮಹಿಳಾ ಸಂಘದ ಅಧ್ಯಕ್ಷೆ ನೀಲಮ್ಮ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-36-407426054

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.