ಹಾವೇರಿ: ಕನ್ನಡ ಭಾಷೆಗೆ ಐದನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕ (ವಿ.ಕೃ. ಗೋಕಾಕ್) ಅವರ 35ನೇ ಪುಣ್ಯಸ್ಮರಣೆ ಅಂಗವಾಗಿ ‘ಗೋಕಾಕರಿಗೆ ನುಡಿ ನಮನ’ ಕಾರ್ಯಕ್ರಮವು ಇತ್ತೀಚೆಗೆ ಅರ್ಥಪೂರ್ಣವಾಗಿ ಜರುಗಿತು.

ಜಿಲ್ಲೆಯ ಸವಣೂರಿನ ಲಲಿತಾ ಗುರುಸಿದ್ದಪ್ಪ ಸಿಂಧೂರ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಟ್ರಸ್ಟ್ನ ನೂತನ ಅಧ್ಯಕ್ಷ ಸತೀಶ ಕುಲಕರ್ಣಿ ಮಾತನಾಡಿ, ‘ಕನ್ನಡ ಸಾಹಿತ್ಯಕ್ಕೆ ನವ್ಯಸ್ವರೂಪ ನೀಡಿದ ಗೋಕಾಕ ಅವರು, ನಮ್ಮ ನೆಲದ ಹೆಮ್ಮೆ. ಅವರ ಸ್ಮರಣೆ ಎಂದರೆ ಆಧುನಿಕ ಕನ್ನಡ ಸಾಹಿತ್ಯದ ಸ್ಮರಣೆ ಮಾಡಿದಂತೆ’ ಎಂದರು.

‘ಈಗ ಹೊಸ ಸಮಿತಿ ರಚನೆಯಾಗಿದೆ. ಗೋಕಾಕ ಸಭಾಭವನದ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ಭವನದ ಮೊದಲ ಮಹಡಿಯಲ್ಲಿ ಗೋಕಾಕರ ಎಲ್ಲ ಪುಸ್ತಕಗಳು ಮತ್ತು ಅವರ ಜೀವನದ ಮಹತ್ವದ ಭಾವಚಿತ್ರಗಳನ್ನು ವಿನ್ಯಾಸಗೊಳಿಸಲಾಗುವುದು’ ಎಂದರು.

ಟ್ರಸ್ಟ್ ಸದಸ್ಯ ಮಾರುತಿ ಶಿಡ್ಲಾಪೂರ ಮಾತನಾಡಿ, ‘ಗೋಕಾಕ ಅವರನ್ನು ಓದುವುದೆಂದರೆ, ಹೊಸಗನ್ನಡದ ಸಾಹಿತ್ಯವನ್ನು ಓದಿದಂತೆ. ಅವರ ಕನ್ನಡದ ಕಾಳಜಿ ಬಹಳ ದೊಡ್ಡದು’ ಎಂದರು.

ಸದಸ್ಯ ಜಗನ್ನಾಥ ಗೇನಣ್ಣವರ ಮಾತನಾಡಿ, ‘ಕನ್ನಡ ಕಾವ್ಯಕ್ಕೆ ಮುಕ್ತ ಚಂದ ಕಾವ್ಯಪ್ರಯೋಗ ತಂದವರು ಗೋಕಾಕರು’ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎನ್. ಪಾಟೀಲ ಮಾತನಾಡಿ, ‘ಸವಣೂರನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಗೋಕಾಕರಿಗೆ ಸಲ್ಲುತ್ತದೆ. ಹಲವು ತಲೆಮಾರುಗಳಿಗೆ ವೈವಿಧ್ಯಮಯ ಸಾಹಿತ್ಯ ನೀಡಿದವರು ಗೋಕಾಕರು’ ಎಂದರು.

ಸಿಂಧೂರ ಕಾಲೇಜಿನ ಪ್ರಾಂಶುಪಾಲ ಪ್ರವೀಣ ಆನಂದಕಂದ, ಪ್ರಾಧ್ಯಾಪಕ ಎಂ.ಎಚ್. ಹೆಬ್ಬಾಳ, ಎಫ್.ಬಿ. ನಾಯ್ಕರ, ವಿಶ್ವನಾಥ ಯತ್ತಿನಹಳ್ಳಿ, ವಿಶ್ವನಾಥ ಹಾವಣಗಿ, ಲತಾ ವಾಲಿ, ಪೂರ್ಣಿಮಾ ಬೆಣ್ಣಿ, ಶಿವಲೀಲಾ ಕಲ್ಮಠ, ಪುಷ್ಪಾ ಬೆಣ್ಣಿ, ಸುನಂದಾ ಚಿನ್ನಾಪೂರ, ಪುಷ್ಪಾ ಗಾಣಿಗೇರ, ಬಸವರಾಜ ಬಿ., ಕೆ.ಎನ್. ಜಾನ್ವೇಕರ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-22-1163280958

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.