ಹೆಬ್ರಿ: ಭಕ್ತಿಮಾರ್ಗದಿಂದ ಮುಕ್ತಿ ಸಾಧ್ಯ ಎನ್ನುವ ತತ್ವವನ್ನು ಸಾರುವ ಉದ್ದೇಶದಿಂದ 40 ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಹರಿಕಥಾ ಕಾರ್ಯಕ್ರಮದ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿರುವ ಹರಿದಾಸ ಬಿ.ಸಿ ರಾವ್ ಅವರ ಭಕ್ತಿ ಮಾರ್ಗದ ಪ್ರಸಾರ ಶ್ಲಾಘನೀಯ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಶಿವಪುರ ಪಾಂಡುಕಲ್ಲು ಗುರುಪದಕ್ಕೆ ಶುಕ್ರವಾರ ಬೇಟಿ ನೀಡಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರಿದಾಸ ಬಿ. ಸಿ.ರಾವ್ ಶಿವಪುರ ಅವರನ್ನು ಗೌರವಿಸಿ ಅವರು ಆಶೀರ್ವದಿಸಿದರು.

ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದ ಬಿ.ಸಿ ರಾವ್ ಮಾತನಾಡಿ ನೇರ ನಡೆನುಡಿ ಮತ್ತು ಸರಳ ಜೀವನದ ಮೂಲಕ ಎಲ್ಲರೊಂದಿಗೆ ಬೆರೆಯುವ ಕೇಮಾರು ಸ್ವಾಮಿಗಳು ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಜನರ ಸ್ವಾಮೀಜಿಯಾಗಿದ್ದಾರೆ ಎಂದರು. ಅಹಲ್ಯ ಸಿ ರಾವ್ ಪಾಲ್ಗೊಂಡಿದ್ದರು. ರಾಘವೇಂದ್ರ ಬಡ್ಕಿಲ್ಲಾಯ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-28-1625858120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.