ಅಳವಂಡಿ: ‘ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿ ಮಾರ್ಗದಿಂದ ದೇವರನ್ನು ಕಾಣುವ ಮೂಲಕ ಬದುಕು ಶ್ರೇಷ್ಠವಾಗಲಿದೆ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ’ ಎಂದು ಮೈನಳ್ಳಿ ಬಿಕನಹಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು

ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಜಯಂತಿ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

‘ಮಲ್ಲಮ್ಮ ಬಾಂಧವ್ಯದ ಬೆಲೆಯನ್ನು ಜಗತ್ತಿಗೆ ಸಾರಿದ ಸ್ತ್ರೀಕುಲ ರತ್ನ ಆಗಿದ್ದಾರೆ. ಎಂದಿಗೂ ದ್ವೇಷ ಭಾವ ತೋರಲಿಲ್ಲ. ಮನುಕುಲದ ಕಲ್ಯಾಣವನ್ನು ಬಯಸಿದ ತಾಯಿ ಮಲ್ಲಮ್ಮ’ ಎಂದು ಹೇಳಿದರು.

ಹೂವಿನಹಡಗಲಿ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ‘ಸತ್ಯ ನೀತಿ ಪಾಲಿಸುವ ಗುಣವಂತರಿಗೆ ಪರಮಾತ್ಮ ಬೆನ್ನೆಲುಬಾಗಿರುತ್ತಾನೆ. ದೇವರ ಸ್ಮರಣೆಯಿಂದ ಸಾರ್ಥಕ ಬದುಕು ಸಾಧ್ಯ. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಹಾಗೂ ದಾನದ ಗುಣ ಬೆಳೆಸಿಕೊಳ್ಳಿ. ನಿಮ್ಮನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ. ಶರಣರು ಸಂತರು ಶಿವಯೋಗಿಗಳು ಸಮಾಜಕ್ಕೆ ಬದುಕಿದವರು. ಶರಣರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಅಳವಂಡಿಯ ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಮಲ್ಲಮ್ಮ ಕಾಯಕ, ದಾಸೋಹ, ಶ್ರದ್ಧೆಯ ಬದುಕನ್ನು ಜಗತ್ತಿಗೆ ತಿಳಿಸಿದ್ದಾರೆ. ಅವರ ವಿಚಾರಧಾರೆ ಹಾಗೂ ಆದರ್ಶ ಅಳವಡಿಸಿಕೊಂಡರೆ ಸುಂದರ ಜೀವನ ಪ್ರಾಪ್ತವಾಗುತ್ತದೆ. ಕೌಟುಂಬಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ಹೆಣ್ಣಿನ ಮಹತ್ವವನ್ನು ವಿಶ್ವಕ್ಕೆ ಸಾರಿದ್ದು ಮಲ್ಲಮ್ಮ’ ಎಂದು ಹೇಳಿದರು.

ರೆಡ್ಡಿ ಸಮಾಜದ ಮುಖಂಡ ಶಂಕರಗೌಡ ಹಿರೇಗೌಡ್ರು ಮಾತನಾಡಿ, ‘ಹೇಮರಡ್ಡಿ ಮಲ್ಲಮ್ಮನಲ್ಲಿರುವ ಪರೋಪಕಾರಿ ಗುಣ, ತ್ಯಾಗ, ಸಂಸ್ಕಾರ, ಗುರು ಹಿರಿಯರ ಬಗ್ಗೆ ಭಕ್ತಿ, ಅವರ ಆದರ್ಶ ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು’ ಎಂದು ಹೇಳಿದರು.

ಅಲಂಕೃತಗೊಂಡ ಅಡ್ಡ ಪಲ್ಲಕ್ಕಿಯಲ್ಲಿ ಮಲ್ಲಮ್ಮನ ಮೂರ್ತಿ ಹಾಗೂ ವೇಮನರ ಭಾವಚಿತ್ರ ಇರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆಯಲ್ಲಿ ನಂದಿಕೋಲು ನೃತ್ಯ ಸೇರಿದಂತೆ ವಿವಿಧ ವಾದ್ಯ ಮೇಳಗಳು ಗಮನ ಸೆಳೆದವು. ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಮೇಳ ಹಾಗೂ ಕಳಸ ಹೊತ್ತು ಸಾಗಿದರು.

ಗುರುಬಸವರಾಜ ಹಳ್ಳಿಕೇರಿ, ಸಂಜೀವರಡ್ಡಿ ಕಲ್ಗುಡಿ, ರಮೇಶ, ವೆಂಕರಡ್ಡಿ ಕಲಾದಗಿ, ಕಮಲಪ್ಪ, ವಿದ್ಯಾಧರಗೌಡ, ಸಿದ್ದರಡ್ಡಿ, ಸಮಾಜ ಮುಖಂಡರು, ಗ್ರಾಮಸ್ಥರು, ಯುವಕರು, ಮಹಿಳೆಯರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-35-1923739672

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.