ಹಿರಿಯೂರು: ‘ದೀಪದ ಬೆಳಕು ಎಲ್ಲ ಕಡೆ ಒಂದೇ ರೀತಿ ಬೀರುವ ಸ್ಥಿರತೆಯನ್ನು ಜ್ಯೋತಿ ಕಾಪಾಡಿಕೊಳ್ಳುತ್ತದೆ. ಮನುಷ್ಯರು ಕೂಡ ಸುಖ–ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಸ್ಥಿತಪ್ರಜ್ಞೆ ರೂಢಿಸಿಕೊಳ್ಳಬೇಕು’ ಎಂದು ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ವಾಸವಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಗೋಪುರ ಕಳಸ ಪುನರ್ ಸ್ಥಾಪನೆ, ಮಹಾಕುಂಭಾಭಿಷೇಕ ಮಹೋತ್ಸವ, ನವಚಂಡಿಕಾ ಹೋಮ ಪೂಜೆ ವೇಳೆ ಮಾತನಾಡಿದರು.

‘ಜ್ಯೋತಿ (ಅಗ್ನಿ) ಉರಿಯುವಾಗ ಊರ್ಧ್ವ ಮುಖವಾಗಿರುತ್ತದೆ. ಗಾಳಿ ಬಂದಾಗ ಅತ್ತಿತ್ತ ಅಲುಗಾಡುತ್ತದೆ. ಗಾಳಿ ಕಡಿಮೆ ಆದ ತಕ್ಷಣ ಮರಳಿ ಊರ್ಧ್ವ ಮುಖವಾಗುತ್ತದೆ. ದೀಪದಲ್ಲಿ ಎಣ್ಣೆ ಇರುವವರೆಗೆ ಅದು ಬೆಳಕು ಕೊಡುತ್ತಿರುತ್ತದೆ. ಮನುಷ್ಯನು ಕೂಡ ಬದುಕಿನಲ್ಲಿ ಎದುರಾಗುವ ಕಷ್ಟ–ಸುಖಗಳನ್ನು ಸಮಾನವಾಗಿ ಕಾಣುತ್ತ, ಆಯುಷ್ಯ ಇರುವವರೆಗೆ ತಾನು ಒಪ್ಪಿದ ಕರ್ತವ್ಯಗಳನ್ನು ನಿರ್ವಹಿಸಬೇಕು’ ಎಂದು ಹೇಳಿದರು.

‘ಮನಸ್ಸನ್ನು ಚಂಚಲತೆಯ ಕೈಗೆ ಕೊಡಬಾರದು. ಮನಸ್ಸು ನಮ್ಮ ಹಿಡಿತದಿಂದ ತಪ್ಪಿ ಹೋಗುತ್ತಿದೆ ಎನಿಸಿದಾಗ ದೇವರ ಪ್ರಾರ್ಥನೆ, ಯೋಗ, ಧ್ಯಾನದಲ್ಲಿ ತೊಡಗಿದರೆ ಖಂಡಿತ ಮನಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು’ ಎಂದು ತಿಳಿಸಿದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ವಿ.ಸತ್ಯನಾರಾಯಣ ಮಾತನಾಡಿದರು. ಆರ್ಯವೈಶ್ಯ ಸಮಾಜದ ಎಲ್ಲ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಚಂಡಿಕಾ ಹೋಮವನ್ನು ವೇದಬ್ರಹ್ಮ ವೇಣುಗೋಪಾಲಶರ್ಮ ನೇತೃತ್ವದ ತಂಡ ನಡೆಸಿಕೊಟ್ಟಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-44-1978469761

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.