ಹೊರ್ತಿ: ಆಧುನಿಕ ಯುಗದಲ್ಲಿ ಬಯಲಾಟ ಕಲೆ ಮತ್ತು ಕಲಾವಿದರು ಕಣ್ಮರೆ ಆಗುತ್ತಿರುವುದು ಅಸಮಾಧಾನದ ಸಂಗತಿಯಾಗಿದೆ. ಈ ಕಲೆಯನ್ನು ಉಳಿಸಿ ಬೆಳೆಸೋಣ ಎಂದು ರಾಜ್ಯ ಬಯಲಾಟ ಕಲಾವಿದ ಶಿವಣ್ಣ ಬಿರಾದಾರ ಹೇಳಿದರು.

ಸಮೀಪದ ಬರಡೋಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಇಂಡಿ ಮತ್ತು ಚಡಚಣ ತಾಲ್ಲೂಕಿನ ಎಲ್ಲ ಬಯಲಾಟ ಕಲಾವಿದರ ಸಂಘ ನಿರ್ಮಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲ್ಲೂಕಿನ ಮತ್ತು ಇತರೆಡೆಯ ಎಲ್ಲ ಬಯಲಾಟ ಕಲಾವಿದರು ಸೇರಿಕೊಂಡು ಇಂದು ಒಂದಾಗಿ, ಬಯಲಾಟದ ಮಹತ್ವ, ಅದರ ರುಚಿ ನಮ್ಮ ಮುಂದಿನ ಯುವ ಪೀಳಿಗೆಗೆ ಜ್ಞಾಪದಲ್ಲಿರಿಸೋಣ ಎಂದು ಹೇಳಿದರು.

ಹಿರಿಯ ಕಲಾಭಿಮಾನಿ ಕಲಾವಿದ ಎಸ್.ಎಲ್.ಮೇತ್ರಿ ಮಾತನಾಡಿ, ಬಯಲಾಟ ಎಂಬುದು ನಮ್ಮ ಪೂರ್ವಜರ, ಸಾಮಾಜಿಕ, ಸಂಪ್ರದಾಯಕ ಮತ್ತು ಇತಿಹಾಸ ಬಿಂಬಿಸುವ ಕಲೆ, ಇಂತಹ ಕಲೆ ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ ಎಂದರು.

ಬಯಲಾಟ ಕಲಾವಿದರಿಗೆ ಸಹಾಯ ಮಾಡುವವರು ಕಡಿಮೆಯಾಗಿದ್ದಾರೆ. ಆದ್ದರಿಂದ ಎಲ್ಲ ತಾಲ್ಲೂಕಿನ ಒಬ್ಬೊಬ್ಬರನ್ನು ಆಯ್ಕೆ ಮಾಡಿ ಸಂಘ ನಿರ್ಮಾಣ ಮಾಡೋಣ ಎಂದರು.

ಎಸ್.ಎಲ್.ಮೇತ್ರಿ, ಕಾಸುಗೌಡ ಪಾಟೀಲ, ಅಂಬಣ್ಣ ಆಲಮೇಲ, ಸುಲೋಚನಾ ಕಟ್ಟಿಮನಿ, ವಿಮಲಾಬಾಯಿ ಕಟ್ಟಿಮನಿ, ಕಮಲಾಬಾಯಿ ಕಟ್ಟಿಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-26-410766571

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.