ಹುಬ್ಬಳ್ಳಿ: ಇಲ್ಲಿನ ಚಿತ್ರಶಂಕರ ಆರ್ಟ್ ಗ್ಯಾಲರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಣ್ಣಾಟ’ ಪ್ರಾತ್ಯಕ್ಷಿಕೆ ಹಾಗೂ ಶಿಬಿರವು ಮಕ್ಕಳ ಕಲಿಕೆ, ಉತ್ಸುಕತೆ, ಸೃಜನಶೀಲತೆಗೆ ವೇದಿಕೆಯಾಯಿತು.

ಕಲಾವಿದೆ ಪ್ರತಿಮಾ ದೊಡ್ಡಮನಿ ಅವರು ‘ಮಣ್ಣಾಟ’ದ ನೇತೃತ್ವ ವಹಿಸಿ, ವಿವಿಧ ಕಲಾಕೃತಿಗಳನ್ನು ಮಣ್ಣಿನಲ್ಲಿ ಮೂಡಿಸಿದರು. ನೆರೆದಿದ್ದವರಿಗೂ ಮಣ್ಣಿನ ಮೂರ್ತಿಗಳ ತಯಾರಿಕೆಯನ್ನು ಕಲಿಸಿದರು. ಮಕ್ಕಳು ಖುಷಿಯಿಂದ ಮಣ್ಣಿನ ಆಕೃತಿಗಳನ್ನು ರೂಪಿಸಿದರು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕಲಾವಿದ ಈಶ್ವರ ಜೋಶಿ, ‘ಮಣ್ಣೆತ್ತಿನ ಅಮಾಮಾಸ್ಯೆಯು ರೈತರಿಗೆ ಮಹತ್ವದ್ದಾಗಿದೆ. ಸಾಗುವಳಿಯೊಂದಿಗೆ ಅವರೀಗ ಮಣ್ಣಾಟ ಪ್ರಾರಂಭಿಸಿದ್ದಾರೆ.ಇಲ್ಲಿ ಮಕ್ಕಳಿಗಾಗಿ ಮಣ್ಣಾಟ ಆಯೋಜಿಸಲಾಗಿದೆ. ಕಲಾ ವಲಯದಲ್ಲಿ ಇಂತಹ ಬದಲಾವಣೆ ಅವಶ್ಯ’ ಎಂದರು.

‘ಮಣ್ಣಾಟದಲ್ಲಿ ಬುದ್ಧಿ, ಕೈ ಹಾಗೂ ಮನಸ್ಸು ಸಂಗಮವಾಗುತ್ತದೆ. ಏಕಕಾಲಕ್ಕೆ ಮೂರು ಅಂಗಗಳ ಕೆಲಸ ನಡೆಯುತ್ತದೆ. ಚಿತ್ರಕಲಾ ಪಠ್ಯದಲ್ಲಿಯೂ ಮಣ್ಣಿನ ಆಕೃತಿಗಳ ರಚನೆಯ ವಿಷಯವಿದೆ. ಆದರೆ, ಅದು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಪಾಲಕರು ಸಹ ತಮ್ಮ ಮಕ್ಕಳನ್ನು ಮಣ್ಣಿನಲ್ಲಿ ಆಡಲು ಬಿಡುತ್ತಿಲ್ಲ’ ಎಂದು ಹೇಳಿದರು.

ಕಲಾವಿದೆ ಪ್ರತಿಮಾ ದೊಡ್ಡಮನಿ ಮಾತನಾಡಿ, ‘ಮಣ್ಣೆಂದರೆ ಎಲ್ಲರಿಗೂ ಇಷ್ಟ. ಆದರೆ, ಆಧುನಿಕ ಕಾಲದಲ್ಲಿ ಗೆಜೆಟ್ಗಳ ಪ್ರಭಾವದಿಂದ ಮಕ್ಕಳಿಗೆ ಮಣ್ಣಿನಲ್ಲಿ ಆಟ ಆಡುವುದೇ ಗೊತ್ತಿಲ್ಲ. ನಮ್ಮ ದೇಹ ರಚನೆ ಆಗಿರುವುದು ಪಂಚ ಭೂತಗಳಿಂದ. ಅದರಲ್ಲಿ ಭೂಮಿತತ್ವವೂ ಒಂದು’ ಎಂದು ತಿಳಿಸಿದರು.

‘ಮಣ್ಣಾಟದಿಂದ ಬುದ್ಧಿ ಚುರುಕಾಗುತ್ತದೆ, ಮೊಬೈಲ್ ಫೋನ್ನಿಂದ ಮಕ್ಕಳನ್ನು ದೂರವಿಡಬಹುದು. ಏಕಾಗ್ರತೆ ಜೊತೆಗೆ ಮನೋಬಲ ಹೆಚ್ಚುತ್ತದೆ. ಉತ್ತಮ ಆರೋಗ್ಯಕ್ಕೆ ಮಣ್ಣಿನ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಮಣ್ಣು ರಾಸಾಯನಿಕ ಮುಕ್ತ ಹಾಗೂ ಖುಷಿ ನೀಡುವ ಅಂಶವೂ ಹೌದು’ ಎಂದು ಅಭಿಪ್ರಾಯಪಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-24-569325928

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.