ಹುಬ್ಬಳ್ಳಿ: ‘ಜಾನಪದದ ಹೆಸರಿನಲ್ಲಿ ಅಶ್ಲೀಲತೆಯ ಹಾಡುಗಳನ್ನು ಹಾಡಲಾಗುತ್ತಿದೆ. ಇದು ನಿಲ್ಲಬೇಕು‘ ಎಂದು ಕರ್ನಾಟಕ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಆಗ್ರಹಿಸಿದರು.

ಇಲ್ಲಿನ ನವನಗರದಲ್ಲಿನ ಶ್ರೀ ಸಾಯಿ ಬಿ.ಇಡಿ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯಿಂದ ಗುರುವಾರ ಏರ್ಪಡಿಸಿದ್ದ ಡಾ.ರಾಮು ಮೂಲಗಿ ರಚಿಸಿದ ಲಲಿತ ಪ್ರಬಂಧಗಳ ‘ಮಣ್ಣು ಪೂಜೆಗಳು’ ಕುರಿತ ವಿಚಾರ ಸಂಕಿರಣ ಹಾಗೂ ರಾಮಣ್ಣ ಮಾಸ್ತರ ಕಿರುಚಿತ್ರ ಬಿಡುಗಡೆ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.

‘ಮೂಲ ಜನಪದವನ್ನು ಉಳಿಸುವುದು ದೊಡ್ಡ ಸವಾಲಾಗಿದೆ. ಜಾನಪದ ವಿಶ್ವವಿದ್ಯಾಲಯ ಏನಾಗಬೇಕಾಗಿದೆ ಎನ್ನುವುದೇ ಈಗ ಪ್ರಶ್ನಾತ್ಮಕವಾಗಿದೆ. 184 ಜನಪದ ಕಲೆಗಳು ಇವೆ. ಇಷ್ಟು ಕಲೆಗಳು ಬೆಳೆಯಲಿಕ್ಕೆ ಕರ್ನಾಟಕದ ಭೌಗೋಳಿಕ ಸ್ವರೂಪವೇ ಕಾರಣವಾಗಿದೆ. 50 ಬಗೆಯ ಬುಡಕಟ್ಟುಗಳಿವೆ’ ಎಂದು ಹೇಳಿದರು.

ಪ್ರಮುಖರಾದ ಶಾಂತಣ್ಣ ಕಡಿವಾಲ, ಎಪಿಎಂಸಿ ಸದಸ್ಯ ಬಸವರಾಜ ಯಕಲಾಸಪೂರ, ಅಜ್ಜಪ್ಪ ಹೊರಕೇರಿ, ಎಸ್.ಐ ಜಕ್ಕನಗೌಡರ. ಎಚ್.ವಿ.ಬೆಳಗಲಿ. ಬಿ.ಐ.ಈಳಗೇರ, ಬಸವರಾಜ ಸುಳ್ಳದ, ಬಿ.ಎಸ್.ಮಾಳವಾಡ ಇದ್ದರು.

ಆರ್.ಎಸ್.ಹೊಸೂರ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಪಿ.ಎಸ್.ಕೆಂಗಾರ ಸ್ವಾಗತಿಸಿದರು. ಜಾನಪದ ಕಲಾವಿದ ರಾಮು ಮೂಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಚ್.ಎಚ್.ನದಾಫ, ನಾಗಮ್ಮನವರ, ಜೀವಿ ಹಿರೇಮಠ, ಪ್ರೊ.ವಿ.ಎಲ್.ಪಾಟೀಲ ಮುಂತಾದವರು ಮಣ್ಣು ಪೂಜೆಯ ಸಂಪ್ರದಾಯ ಕುರಿತು ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-24-1171644212

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.