ಹುಬ್ಬಳ್ಳಿ: ‘ಕನ್ನಡ ಸಾಹಿತ್ಯ ಪರಿಷತ್ತಿಗೆ ಸಮಾನವಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹೆಚ್ಚಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚುಟುವಟಿಕೆಗಳಿಗೆ ಅಗತ್ಯ ಸಹಕಾರ ಮತ್ತು ಸಹಾಯಧನ ನೀಡಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹೇಳಿದರು.

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಕನಕದಾಸ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಕನಕದಾಸ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಪರಿಷತ್ತಿನ ಜಿಲ್ಲಾ 14ನೇ ಸಮ್ಮೇಳನ ಮತ್ತು ವಚನ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2025–26ನೇ ಸಾಲಿನಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚುಟುವಟಿಕೆಗಳನ್ನು ಆಯೋಜಿಸಿದ್ದ ಜಿಲ್ಲೆಯ ನೋಂದಾಯಿತ 87 ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಇಲಾಖೆಯಿಂದ ₹50 ಸಾವಿರದಿಂದ ₹2 ಲಕ್ಷದ ತನಕ ಸಹಾಯಧನ ನೀಡಲಾಗಿದೆ. ಚಿತ್ರಕಲಾ ಪ್ರದರ್ಶನ ನಡೆಸಿದ 14 ಚಿತ್ರಕಲಾವಿದರಿಗೂ ₹40 ಸಾವಿರ ತನಕ ಸಹಾಯಧನ ನೀಡಲಾಗಿದೆ’ ಎಂದರು.

‘ಸಾಹಿತ್ಯ, ಸಂಗೀತ, ಶಿಕ್ಷಣ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಧಾರವಾಡವು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ಅನೇಕ ಸಾಧಕರು ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಚುಟುಕು ಸಾಹಿತ್ಯ ಪರಿಷತ್ ಕೂಡ ತನ್ನ ಇತಿಮಿತಿಯೊಳಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದು ಬಣ್ಣಿಸಿದರು.

ಸಮ್ಮೇಳನದ ಅಧ್ಯಕ್ಷ, ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಮಾತನಾಡಿ, ‘ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಮುಂದುವರಿಸಬೇಕಿದೆ. ಇದರಿಂದ ಸಾಹಿತ್ಯ ಆಸಕ್ತಿ ಹಾಗೂ ಓದುವ ಸಂಸ್ಕೃತಿ ಹೆಚ್ಚುತ್ತದೆ. ಕಲಿಕೆ– ಓದು ನಮ್ಮ ಚಿಂತನೆಯನ್ನು ವೃದ್ಧಿಸುತ್ತವೆ’ ಎಂದರು.

‘ಚುಟುಕು ಬರಹ, ಕವನಗಳಲ್ಲಿ ಗಟ್ಟಿಯಾದ ವಿಚಾರಗಳಿರುತ್ತವೆ. ತೀಕ್ಷಣವಾದ ಬರಹದ ಮೂಲಕ ಸಮಾಜದ ಓರೆಕೋರೆಗಳನ್ನು ಪ್ರಸ್ತುತಪಡಿಸಲಾಗಿರುತ್ತದೆ. ಇವು ನೇರವಾಗಿ ಓದುಗನ ಮನಸ್ಸಿಗೆ ತಾಕುತ್ತವೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಣ್ಣ ಕಡಿವಾಲ ಮಾತನಾಡಿ, ‘ಸಾಹಿತ್ಯ ಕೃತಿಗಳನ್ನು ಓದುವ ಮನಸ್ಸುಗಳು ಕಡಿಮೆ ಆಗಿವೆ. ಜನರಲ್ಲಿ ಸಾಹಿತ್ಯ ಅಭಿರುಚಿಯನ್ನು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ’ ಎಂದರು.

ಇದೇ ವೇಳೆ ಮಹಿಳೆಯರಿಗಾಗಿ ವಚನ ಗಾಯನ ಸ್ಪರ್ಧೆ ನಡೆಯಿತು. ಕವಿಗೋಷ್ಠಿ, ಕರೋಕೆ ಗಾಯನ ನಡೆಯಿತು. ‘ನಮ್ಮ ನಿಮ್ಮೆಲ್ಲರ ‘ಈತ’ ಶೀರ್ಷಿಕೆಯ ಕೆಸಿಕೆ ಸಂಸ್ಮರಣ ಸಂಚಿಕೆಯನ್ನು ಗಣ್ಯರು ಲೋಕಾರ್ಪಣೆ ಮಾಡಿದರು. ಪರಿಷತ್ತಿನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ವಿ.ಜಿ.ಪಾಟೀಲ, ಪ್ರಮುಖರಾದ ಜಿ.ಎ.ಹೆಗಡೆ ಸೋಂದಾ, ಎಸ್.ಎಸ್.ಹುಲ್ಲೋಳಿ, ಚನ್ನಬಸಪ್ಪ ಧಾರವಾಡಶೆಟ್ರು, ಮೃತ್ಯುಂಜಯ ಮಟ್ಟಿ, ಪದ್ಮಜಾ ಉಮರ್ಜಿ, ಜಯಶ್ರೀ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-24-797763406

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.