ಹುಬ್ಬಳ್ಳಿ: ‘ನವನಗರದ ಸಾಯಿ ಬಿ.ಇಡಿ ಮಹಾವಿದ್ಯಾಲಯ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಏ.2ರಂದು ಬೆಳಿಗ್ಗೆ 10.30ಕ್ಕೆ ರಾಮು ಮೂಲಗಿ ಅವರ ಲಲಿತ ಪ್ರಬಂಧ ಕೃತಿ ‘ಮಣ್ಣು ಪೂಜೆಗಳ’ ಕುರಿತ ವಿಚಾರ ಸಂಕಿರಣ, ‘ರಾಮಣ್ಣ ಮಾಸ್ತರ’ ಕಿರುಚಿತ್ರ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ಜನಪದ ಕಲಾವಿದ ರಾಮು ಮೂಲಗಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಜಾನಪದ ಪರಿಷತ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಸಾಯಿ ಬಿ.ಇಡಿ., ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ಹಿ.ಸಿ.ಬೋರಲಿಂಗಯ್ಯ ಉದ್ಘಾಟಿಸುವರು. ಸಂಗಮನಾಥ ಲೋಕಾಪೂರ ಅಧ್ಯಕ್ಷತೆ ವಹಿಸುವರು. ಎಚ್.ವಿ.ಬೆಳಗಲಿ, ಪ್ರಕಾಶ ಉಡಕೇರಿ ಸೇರಿದಂತೆ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು’ ಎಂದರು.

‘ಮಧ್ಯಾಹ್ನ 12ಕ್ಕೆ ಎಚ್.ಎಚ್.ನದಾಫ್ ಅವರು, ‘ಮಣ್ಣೆತ್ತಿನ ಅಮಾವಾಸ್ಯೆ ಗುಳ್ಳವ್ವ’ ಹಬ್ಬ ಹಾಗೂ ಪ್ರೊ. ಬಸವರಾಜ ನಾಗವ್ವನವರ ಅವರು, ‘ನಾಗರ ಪಂಚಮಿ ಹಾಗೂ ಗಣೇಶ ಚೌತಿ’ ಹಬ್ಬಗಳ ಕುರಿತು ಉಪನ್ಯಾಸ ನೀಡುವರು. ಮಧ್ಯಾಹ್ನ 2ಕ್ಕೆ ಮಣ್ಣು ಪೂಜೆಗಳ ಕುರಿತು ಹಾಡುಗಾರಿಕೆ. ಗದಗಯ್ಯ ಹಿರೇಮಠ ಅವರು, ಜೋಕುಮಾರ ಹಬ್ಬ ಕುರಿತು ಉಪನ್ಯಾಸ ನೀಡುವರು’ ಎಂದು ತಿಳಿಸಿದರು.

‘ರಾಮಣ್ಣ ಮಾಸ್ತರ್ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ರಂಜಾನ್ ದರ್ಗಾ ಭಾಗವಹಿಸುವರು’ ಎಂದು ತಿಳಿಸಿದರು. ಶರೀಫ್ ಚಿಗಳ್ಳಿ, ಎಚ್.ಎಸ್.ನದಾಫ್, ಎಂ.ಆರ್.ನದಾಫ್, ಹನುಮಂತ ಹಿರೇಮನಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-24-2063328842

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.