ಗದಗ: ದಲಿತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮೇ ಸಾಹಿತ್ಯ ಮೇಳ ಪ್ರತಿ ವರ್ಷ ಆಯೋಜನೆ ಮಾಡಿಕೊಂಡು ಬರಲಾಗಿದ್ದು, ಪ್ರಸಕ್ತ ವರ್ಷ ‘ಸಂವಿಧಾನಿಕ ಪ್ರಜಾಸತ್ತೆಯ ಮೇಲಿನ ದಾಳಿ’ ಎನ್ನುವ ಹೆಸರಿನ ಮೇಲೆ 12ನೇ ‘ಮೇ ಸಾಹಿತ್ಯ ಮೇಳ’ವು ಮೇ 16, 17 ರಂದು ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ರಾಮಚಂದ್ರ ಹಂಸನೂರ ಹೇಳಿದರು.

ಗದಗ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಮಾನಸ ಬೆಂಗಳೂರು ನೇರವೆರಿಸಲಿದ್ದಾರೆ. ಅತಿಥಿಗಳಾಗಿ ಪಲ್ಲವ ವೆಂಕಟೇಶ, ಸುರೇಶ ಬಿಜಾಪುರ, ಎಸ್.ಎ.ಮುಲ್ಲಾ, ಎಲ್.ಎಚ್.ಅರುಣಕುಮಾರ ಆಗಮಿಸಲಿದ್ದಾರೆ. 'ಚಿತ್ರಕಲಾ ಪ್ರದರ್ಶನ ಮಳಿಗೆ'ಯನ್ನು ಶ್ಯಾಮಲಾ ಗುರುಪ್ರಸಾದ್ ಉದ್ಘಾಟಿಸಲಿದ್ದಾರೆ ಎಂದರು.

ದಿಕ್ಸೂಚಿ ಮಾತುಗಳನ್ನು ನ್ಯಾ.ಬಿ.ಜಿ. ಕೋಳ್ಸೆ ಪಾಟೀಲ್ ಮುಂಬೈನ ಪಾಣಿಯಿಂದ ಆಗಮಿಸಲಿದ್ದಾರೆ. ಜೊತೆಗೆ ವಿ. ಬಾಲಸುಬ್ರಮಣಿಯನ್ ಹಾಗೂ ಕೆ.ನೀಲಾ ಆಗಮಿಸಲಿದ್ದಾರೆ. ಗುರುನಾಥ ಉಳ್ಳಿಕಾಶಿ, ಮಹೇಶ ಪತ್ತಾರ ಹಕ್ಕೋತ್ತಾಯಗಳ ಮಂಡನೆ ಮಾಡಲಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಲಿದ್ದು, ಜಿಲ್ಲೆಯಿಂದ 1500 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಸಂವಿಧಾನ ಅಪಾಯದಲ್ಲಿದ್ದು, ಇದನ್ನು ಕಾಪಾಡುವ ಹಿತ ದೃಷ್ಟಿಯಿಂದಾಗಿ ಇಂತಹ ಹಲವಾರು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.

ಈ ವೇಳೆ ಬಿ.ಕೆ. ಪೂಜಾರ, ನೂರುಂದಪ್ಪ ಕೋಳೂರು, ಸರೋಜಾ ಕೋಳೂರು, ಶರಣು ಪೂಜಾರ, ಪರಶು ಕಾಳೆ, ರಮೇಶ್ ಕೋಳೂರು, ಯೂಸೂಪ್ ಮಜ್ಜಗಿ, ಮಲ್ಲಪ್ಪ ಕೊಳೂರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-23-654368113

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.