ಕೈವಾರ(ಚಿಂತಾಮಣಿ): ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲು ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ಮಠದಿಂದ ಪ್ರತಿವರ್ಷ ‘ನಾರೇಯಣ ಪ್ರಶಸ್ತಿ’ ಸ್ಥಾಪಿಸಲಾಗಿದೆ.

ಪ್ರತಿ ವರ್ಷ ಒಬ್ಬ ಸಾಧಕನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಫಲಕ ಮತ್ತು ₹1 ಲಕ್ಷ ನಗದು ಒಳಗೊಂಡಿರುತ್ತದೆ. ಮೊದಲ ಪ್ರಶಸ್ತಿಯನ್ನು ಪಂಡಿತ ಕೈಪು ಲಕ್ಷ್ಮೀನರಸಿಂಹ ಶಾಸ್ತ್ರಿ ಅವರಿಗೆ ಮರಣೋತ್ತರವಾಗಿ ನೀಡಲು ಟ್ರಸ್ಟ್ ನಿರ್ಧರಿಸಿದೆ. ಮೇ 9 ರಂದು ಸಂಜೆ 5ಕ್ಕೆ ಕೈವಾರದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ.

ವರ್ಷಪೂರ್ತಿ ಕೈವಾರ ತಾತಯ್ಯ 300ನೇ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಶಸ್ತಿ ಆರಂಭಿಸಲಾಗಿದೆ. ಕೈಪು ಲಕ್ಷ್ಮೀನರಸಿಂಹ ಶಾಸ್ತ್ರಿ ತಾತಯ್ಯ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ತತ್ವಬೋಧನೆಗಳಿಗೆ ಹಾಗೂ ಎಲ್ಲಾ ಗ್ರಂಥಗಳಿಗೆ ವ್ಯಾಖ್ಯಾನ, ಭಾವಾನುವಾದ, ತಾತ್ಪರ್ಯ ರಚಿಸಿದ್ದಾರೆ ಎಂದು ಎಂದು ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾತಯ್ಯನವರ ತತ್ವ, ಬೋಧನೆ, ಸಾಹಿತ್ಯ ಚಾರ ಮಾಡಲು ಕೈಪು ಲಕ್ಷ್ಮೀನರಸಿಂಹಶಾಸ್ತ್ರಿ ಅವರನ್ನು ಕ್ಷೇತ್ರದ ಹಿಂದಿನ ಧರ್ಮಾಧಿಕಾರಿ ಎಂ.ಎಸ್.ರಾಮಯ್ಯ ಆಯ್ಕೆ ಮಾಡಿದ್ದರು ಎಂದು ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ತಿಳಿಸಿದರು.

1960ರಲ್ಲಿಯೇ ಕೈವಾರ ತಾತಯ್ಯನವರ ಬಗ್ಗೆ ಲೇಖನ ಬರೆದಿದ್ದರು ಮತ್ತು ಕೈವಾರ ಕ್ಷೇತ್ರ ಎಂಬ ಪುಸ್ತಕ ಪ್ರಕಟಿಸಿದ್ದರು. ಅಲ್ಲಿಯವರೆಗೂ ತಾತಯ್ಯನವರ ಎಲ್ಲಾ ಬೋಧನೆ,ಕೀರ್ತನೆ, ಶತಕಗಳು, ಕಾಲಜ್ಞಾನ ಎಲ್ಲವೂ ಒಂದೇ ಪುಸ್ತಕದಲ್ಲಿ ಅಡಕವಾಗಿತ್ತು. ನಂತರ ನಾದಬ್ರಹ್ಮಾನಂದ ನಾರೇಯಣ ಕವಿಶತಕ, ಅಮರನಾರೇಯಣ ಶತಕ, ಕಾಲಜ್ಞಾನ, ಭವಿಷ್ಯವಾಣಿ ಮುಂತಾದ ಕೃತಿಗಳನ್ನು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಪ್ರಕಟಿಸಿದ್ದರು. ಕೈವಾರದಿಂದ ಪ್ರಕಟವಾಗುವ ಮಲ್ಲಾರ ಮಾಸಪತ್ರಿಕೆಗೆ ಸಂಪಾದಕರಾಗಿ ಹಲವಾರು ವರ್ಷಗಳು ಕೆಲಸಮಾಡಿದ್ದಾರೆ #ಎಂದರು.

ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ ಹಾಗೂ ವ್ಯವಸ್ಥಾಪಕ ಕೆ.ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-16-1202047422

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.