ಕಲಬುರಗಿ: ‘ಸಾಮಾಜಿಕ, ಜಾಗತಿಕ ಬೆಳವಣಿಗೆಯಿಂದ, ಮಾಹಿತಿ ತಂತ್ರಜ್ಞಾನ ಬಳಕೆಯಿಂದ ಮಕ್ಕಳ ಮನಸ್ಥಿತಿ, ಜನರ ಅಭಿರುಚಿ ಬದಲಾಗಿದೆ. ಕಾರಣ, ಜನರ ಅಭಿರುಚಿಗೆ ತಕ್ಕಂತೆ ಕಲೆಗೆ ಪ್ರೋತ್ಸಾಹ ಕೊಟ್ಟರೆ ಅದು ಬೆಳೆಯಲು ಮತ್ತು ಉಳಿಯಲು ಸಾಧ್ಯವಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಂಗಾಯಣ ಕಲಬುರಗಿ ಆಶ್ರಯದಲ್ಲಿ ನಡೆದ ‘ಮಕ್ಕಳ ಹಬ್ಬ–2026’ ಬೇಸಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ಮಕ್ಕಳ ರಂಗೋತ್ಸವ ಮೂರು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಿಗೆ ಬೇಸಿಗೆ ಸಮಯದಲ್ಲಿ ಮನರಂಜನೆ ಜೊತೆಗೆ ಹೊಸ ಕಲೆಗಳನ್ನು ಪರಿಚಯಿಸಲು, ಅವರಲ್ಲಿರುವ ಪ್ರತಿಭೆಗೆ ಸ್ಫೂರ್ತಿ ನೀಡಲು ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮಗಳು ಮಕ್ಕಳಲ್ಲಿ ಸಂತೋಷ ತರುತ್ತವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಹಿಂದೆ ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಬಹಳಷ್ಟು ಕಲೆಗಳು ನಶಿಸಿಹೋಗುತ್ತಿವೆ. ಹಳ್ಳಿಗಳಲ್ಲಿ ಹಾಡುತ್ತಿದ್ದ ಸೋಬಾನ ಪದ, ಹಂತಿಪದ, ಮೊಹರಂ ಪದ ಮಾಯವಾಗುತ್ತಿವೆ. ಮೊಬೈಲ್, ಟಿ.ವಿ ಬಂದಿರುವುದರಿಂದ ನಾಟ್ಯ, ಬಯಲಾಟ ಕಣ್ಮರೆಯಾಗುತ್ತಿವೆ’ ಎಂದು ವಿಷಾದಿಸಿದರು.

‘ನಾಟ್ಯರಂಗದಿಂದ ಡಾ.ರಾಜ್ಕು ಮಾರ್ ಅವರು ರಾಜ್ಯದಲ್ಲಿ ಇತಿಹಾಸವನ್ನು ಸೃಷ್ಟಿ ಮಾಡಿದರು. ಅವರ ಮಕ್ಕಳು ಕೂಡ ದೊಡ್ಡ ನಟರಾಗಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೂ ಪ್ರೋತ್ಸಾಹ ಕೊಟ್ಟರೆ ದೊಡ್ಡ ಕಲಾವಿದರಾಗಿ ಹೊರಹೊಮ್ಮುತ್ತಾರೆ’ ಎಂದರು.

ರಂಗ ಸಮಾಜದ ಸದಸ್ಯ ಡಿಂಗ್ರಿ ನರೇಶ ಮಾತನಾಡಿ, ‘ಕನಕದಾಸರಷ್ಟೇ ಶ್ರೇಷ್ಠ ತತ್ವಪದಕಾರ ಕಡಕೋಳ ಮಡಿವಾಳಪ್ಪ. ಅವರ ಹೆಸರಿನಲ್ಲಿ ಒಂದು ಅಭಿವೃದ್ಧಿ ಕ್ಷೇತ್ರ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗ ಸಾಂಸ್ಕೃತಿಕವಾಗಿ ಮುಂದುವರಿಯಲು ಪ್ರತಿ ಜಿಲ್ಲೆಗೊಂದು ಉತ್ಸವ ಆಗಬೇಕು’ ಎಂದರು.

ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಒಂದು ತಿಂಗಳ ಶಿಬಿರದಲ್ಲಿ ಮಕ್ಕಳು ನೃತ್ಯ, ನಾಟಕ, ಕೋಲಾಟ, ಹಾಡು ಕಲಿತಿದ್ದಾರೆ. ಬಣ್ಣದಾಟ, ಕೆಸರಾಟ ಆಡಿ ನಲಿದಿದ್ದಾರೆ. ಪಕ್ಷಿ ಪ್ರಪಂಚ ತಿಳಿದುಕೊಂಡಿದ್ದಾರೆ’ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ, ಶಿಬಿರದ ನಿರ್ದೇಶಕ ರಾಜಕುಮಾರ ಎಸ್.ಕೆ. ಉಪಸ್ಥಿತರಿದ್ದರು. ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂದೆ ಸ್ವಾಗತಿಸಿದರು.

ಭಾನುವಾರ ಸಂಜೆ 4.30ಕ್ಕೆ ಬಯಲಾಟ ಪ್ರಾತ್ಯಕ್ಷಿಕೆ, ನಾಟಕ, ನೃತ್ಯ, ಗಾಯನ, ವಾದ್ಯ ಸಂಗೀತ ಪ್ರದರ್ಶನವಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-34-79375295

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.