ಕಲಬುರಗಿ: ವಸ್ತು ಸಂಗ್ರಹಾಲಯಗಳು ಕೇವಲ ಪ್ರದರ್ಶನದ ವಸ್ತುಗಳಲ್ಲ, ಅವು ಜ್ಞಾನದ ಅಖಂಡ ಭಂಡಾರಗಳಿದ್ದಂತೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭೇಟಿ ನೀಡುವ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಎಸ್.ಎಸ್. ವಾಣಿ ಹೇಳಿದರು.

ನಗರದ ಕಲಬುರಗಿ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಇನ್ಟ್ಯಾಕ್ ಕಲಬುರಗಿ ಘಟಕ ಹಾಗೂ ವಿಶ್ವನಾಥರೆಡ್ಡಿ ಮುದ್ನಾಳ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯಗಳ ಆಶ್ರಯದಲ್ಲಿ ಸೋಮವಾರ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಸ್ವಚ್ಛತೆ ಹಾಗೂ ವಸ್ತು ಸಂಗ್ರಹಾಲಯಗಳ ಅರಿವು’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ವೈಜ್ಞಾನಿಕ, ಪಾರಂಪರಿಕ, ಜಾನಪದ ಸೇರಿದಂತೆ ಹಲವು ಪ್ರಕಾರದ ಸಂಗ್ರಹಾಲಯಗಳಿದ್ದು, ಅವು ಮುಂದಿನ ಪೀಳಿಗೆಗೆ ಜ್ಞಾನವನ್ನು ರವಾನಿಸುವ ಕೆಲಸ ಮಾಡುತ್ತಿವೆ’ ಎಂದರು.

‘ಲಂಡನ್ ವಸ್ತು ಸಂಗ್ರಹಾಲಯ ಶ್ರೀಮಂತವಾಗಲು ಬ್ರಿಟಿಷರು ಭಾರತ ದಿಂದ ಕೊಂಡೊಯ್ದ ಅವಶೇಷಗಳೇ ಕಾರಣ. ಅದನ್ನು ನೋಡಿದಾಗ ಜಗತ್ತಿಗೆ ಮನವರಿಕೆಯಾಗುವುದು ಭಾರತದ ಭವ್ಯ ಪರಂಪರೆಯೇ ಹೊರತು ಬ್ರಿಟಿಷ್ ಪರಂಪರೆಯಲ್ಲ’ ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಬೇಬಿ ಮೊಗೇರ ಮಾತನಾಡಿ, ‘ನಮ್ಮ ಪ್ರವಾಸಿ ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳು ಗತವೈಭವದ ಪ್ರತೀಕಗಳಾಗಿದ್ದು, ಪ್ರತಿ ಯೊಬ್ಬರೂ ಭೇಟಿ ನೀಡಬೇಕು’ ಎಂದರು.

ಹಿರಿಯ ಕಲಾವಿದ ನಾರಾಯಣ ಜೋಶಿ, ಉಪಪ್ರಾಚಾರ್ಯ ನಾಗೇಶ ಮಡಿವಾಳ ಮಾತನಾಡಿದರು.

ಇನ್ಟ್ಯಾಕ್ ಪದಾಧಿಕಾರಿಗಳು, ಇಲಾಖೆಯ ಸಿಬ್ಬಂದಿ, ಸ್ಥಳೀಯ ನಾಗರಿಕರು ಹಾಗೂ ವಿಶ್ವನಾಥರೆಡ್ಡಿ ಮುದ್ನಾಳ ಕಾಲೇಜಿನ ಬಿಎ, ಬಿ.ಕಾಂ, ಬಿಬಿಎ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಜ್ಯೋತಿ ನಿರೂಪಿಸಿದರು. ವಸ್ತು ಸಂಗ್ರಹಾಲಯ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-34-506051848

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.