ಚನ್ನಮ್ಮನ ಕಿತ್ತೂರು: ಸಂಸ್ಕೃತಿ, ಪರಂಪರೆ ಮತ್ತು ಆತ್ಮಗೌರವದ ಪ್ರತೀಕ ಕನ್ನಡ ಭಾಷೆಯಾಗಿದೆ. ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಿರಿದಾದ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದು ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಕಾರಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿಯ ಕಲ್ಮಠದ ಆವರಣದಲ್ಲಿರುವ ಶಂಕರ ಚಂದರಗಿ ಸಭಾಭವನದಲ್ಲಿ ಕಸಾಪದ 112ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಂಗಳವಾರ ನಡೆದ ಕನ್ನಡ ಭಾಷೆ, ಮಾಧ್ಯಮದ ಉಳಿವು ಬೆಳವಣಿಗೆಯಲ್ಲಿ ಪರಿಷತ್ತಿನ ಪಾತ್ರ ಉಪನ್ಯಾಸ ಮತ್ತು ಸಾಧಕ ವಿದ್ಯಾರ್ಥಿಗಳ ಸತ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ. ತುಬಾಕಿ ಮಾತನಾಡಿದರು.

ಕರ್ನಾಟಕ ರಕ್ಷಣಾ ಮಹಿಳಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ಮಂಜುಳಾ ಕಡಕೋಳ ಉಪನ್ಯಾಸ ನೀಡಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಗಾಯತ್ರಿ ಅಜ್ಜನ್ನವರ ಮಾತನಾಡಿದರು.

ಎಸ್.ಎಸ್,ಎಲ್.ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಪಡೆದ ಸಂಜನಾ ಅವರಾದಿ, ರೋಷಿಣಿ ಎಮ್ಮಿ, 622 ಅಂಕ ಪಡೆದ ಅನನ್ಯಾ ನೇಸರಗಿ ಮತ್ತು 620 ಅಂಕಗಳನ್ನು ಪಡೆದ ಲಕ್ಷ್ಮೀ ಕೋಟಗಿ, ಅನು ಮೂಲಿಮನಿ ಅವರನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ನಾಗಯ್ಯ ಹುಲೆಪ್ಪನವರಮಠ, ಬಿ.ಸಿ.ಬಿದರಿ, ಮಂಜುನಾಥ ಕಳಸಣ್ಣವರ, ವಿ.ಎಸ್. ನಂದಿಹಳ್ಳಿ, ಮಹೇಶ್ವರ ಹೊಂಗಲ, ಶೀಲಾ ಗಂಗಾಧರಮಠ , ರಾಜೇಶ್ವರಿ ಕಳಸಣ್ಣವರ, ಕ್ಯೂರೇಟರ್ ರಾಘವೇಂದ್ರ, ಬಸವರಾಜ ದಳವಾಯಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-21-1004598988

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.