ಬೆಂಗಳೂರು: ‘ಸ್ಥಿತ್ಯಂತರದ ಕಾಲಘಟ್ಟಗಳನ್ನು ದಾಟಿಕೊಂಡು ಬಂದ ಶತಮಾನದ ಹಿನ್ನೆಲೆಯ ಕನ್ನಡ ಸಾಹಿತ್ಯ ಪರಿಷತ್ತು ನವ ಮನ್ವಂತರಕ್ಕೆ ಅಣಿಯಾಗಬೇಕು’ ಎಂದು ಸಾಹಿತಿ ಹಂ.ಪ.ನಾಗರಾಜಯ್ಯ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಆಯೋಜಿಸಿದ್ದ112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘1915ರಲ್ಲಿ ಇದೇ ದಿನ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿದೆ. ಮೈಸೂರು ಮಹಾರಾಜರು, ದಿವಾನರ ಬೆಂಬಲ, ಹಲವು ವಿದ್ವಾಂಸರು, ಕನ್ನಡ ಕಟ್ಟಾಳುಗಳಿಂದ ಪರಿಷತ್ತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದೆ. ಇಂತಹ ಸಂಸ್ಥೆ ಹೊಸ ಕಳೆಯನ್ನು ಪಡೆದು ತನ್ನ ಪ್ರಭಾವಳಿ, ವೈಭವವನ್ನು ಮುಂದುವರಿಸಿಕೊಂಡು ಹೋಗಲಿ’ ಎಂದು ಹೇಳಿದರು.

‘ಎ.ಆರ್.ಕೃಷ್ಣಶಾಸ್ತ್ರಿ, ಎಚ್.ವಿ. ನಂಜುಂಡಯ್ಯ, ಜಿ.ನಾರಾಯಣ ಸಹಿತ ಹಲವರು ಪರಿಷತ್ತಿನ ಪ್ರಗತಿಗೆ ಕೊಡುಗೆ ನೀಡಿದ್ದಾರೆ. ತನ್ನದೇ ಧ್ಯೇಯ ಹಾಗೂ ಅಂಗರಚನೆಯೊಂದಿಗೆ ಗಟ್ಟಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಪರಿಷತ್ತಿನ ಕನ್ನಡ–ಕನ್ನಡ ನಿಘಂಟು ಪ್ರಮುಖವಾದದ್ದು. 4 ಲಕ್ಷಕ್ಕೂ ಅಧಿಕ ಸದಸ್ಯರೊಂದಿಗೆ ಸಂಘಟನೆ, ಸಮ್ಮೇಳನಗಳೂ ಪರಿಷತ್ತಿನ ಕನ್ನಡ ಪರ ಚಟುವಟಿಕೆ ವಿಸ್ತರಣೆಗೆ ನೆರವಾಗಿವೆ’ ಎಂದು ತಿಳಿಸಿದರು.

ಪರಿಷತ್ ಮಾಜಿ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ‘ಹಲವು ಮೊದಲುಗಳನ್ನು ಕನ್ನಡ ಸಾಹಿತ್ಯ ಪರಿಷತ್ ಸಾಧಿಸಿದೆ. ದಲಿತ ಸಾಹಿತ್ಯ ಸಂಪುಟ, ಮಹಿಳಾ ಸಾಹಿತ್ಯ ಸಂಪುಟಗಳು, ಗೋವಾ, ಮುಂಬೈನಲ್ಲೂ ಪರಿಷತ್ ಘಟಕ ಸ್ಥಾಪನೆ, 140 ಪುಸ್ತಕಗಳಡಿಜಿಟಲೀಕರಣದಂತಹ ಕೆಲಸಗಳು ಆಗಿವೆ’ ಎಂದು ಹೇಳಿದರು.

‘ಮಹಾರಾಜರ ಬೆಂಬಲದ ನಂತರ, ಪ್ರಜಾಪ್ರಭುತ್ವ ಸರ್ಕಾರಗಳು ಪರಿಷತ್ತಿಗೆ ನೆರವು ನೀಡಿವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಶತಮಾನೋತ್ಸವ ಭವನಕ್ಕೆ ₹4.50 ಕೋಟಿ ನೆರವು ನೀಡಿ ನಂತರ ಅವರೇ ಭವನ ಉದ್ಘಾಟಿಸಿದರು. ಸಾಹಿತ್ಯ ಸಮ್ಮೇಳನಕ್ಕೆ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸಹಿತ ಎಲ್ಲಾ ಮುಖ್ಯಮಂತ್ರಿಗಳು ಕೊರತೆಯಾಗದಂತೆ ಅನುದಾನ ಒದಗಿಸಿದ್ದಾರೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-4-504436728

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.