ಕಾರ್ಕಳ: ‘ದ್ವೇಷ, ಅಸೂಯೆ ಮತ್ತು ಅಹಂಕಾರ ಸಂಘರ್ಷಕ್ಕೆ ಮೂಲ’ ಎಂದು ವಿದ್ವಾಂಸ ವಿನಾಯಕ ಭಟ್ ಗಾಳಿಮನೆ ಹೇಳಿದರು.

ತಾಲ್ಲೂಕಿನ ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಆಶ್ರಯದಲ್ಲಿ ನಡೆದ ಮಹಾಭಾರತ ಭಾವದೀಪ ಉಪನ್ಯಾಸಮಾಲೆಯಲ್ಲಿ ‘ಕುಲವೊಂದು ಕವಲೆರಡು’ ಕುರಿತು ಅವರು ಮಾತನಾಡಿದರು.

‘ಧೃತರಾಷ್ಟ್ರನ ಅರಮನೆಯಲ್ಲಿ ಕೌರವರು ಬೆಳೆಯುತ್ತಿರುವಾಗ ಪಾಂಡವರನ್ನು ಮಕ್ಕಳ ಜೊತೆ ಧೃತರಾಷ್ಟ್ರ ಸೇರಿಸಿಕೊಂಡ. ದುರ್ಯೋಧನನಿಗೆ ಇವರ ಮೇಲೆ ಬಾಲ್ಯದಿಂದಲೇ ವೈಮನಸ್ಯ ಹುಟ್ಟಿತು. ಭೀಮನನ್ನು ವಿಷಪ್ರಾಶನದಿಂದ ಕೊಲ್ಲಲ್ಲು ಪ್ರಯತ್ನಿಸಿದರೂ ಆತ ನೂರಾನೆ ಬಲದೊಂದಿಗೆ ಮರಳಿ ಬರುತ್ತಾನೆ. ಭೀಷ್ಮ ಮಹಾತ್ಮನಿಗೂ ಈ ವೈಷಮ್ಯ ಕೊನೆಗಾಣಿಸಲು ಸಾಧ್ಯವಾಗಲಿಲ್ಲ’ ಎಂದು ಅವರು ಹೇಳಿದರು.

ಋಷಿ ಪರಂಪರೆಯ ದ್ರೋಣ ಮತ್ತು ರಾಜ ಪರಂಪರೆಯ ದ್ರುಪದ ಗುರುಕುಲದಲ್ಲಿ ಸ್ನೇಹಿತರಾಗಿದ್ದರೂ ದ್ರುಪದ ರಾಜನಾದ ನಂತರ ಅರಮನೆಗೆ ಬಂದ ದ್ರೋಣರ ಮುಂದೆ ದ್ರುಪದ ಅಹಂಕಾರದಿಂದ ವರ್ತಿಸಿ ಅವಮಾನಿಸುತ್ತಾನೆ. ಆ ಅವಮಾನ ಸೇಡಾಗಿ ಪರಿವರ್ತನೆಗೊಂಡು ಸಂಘರ್ಷಕ್ಕೆ ಕಾರಣವಾಗಿ ದ್ರುಪದನ ಗರ್ವಭಂಗವಾಗುತ್ತದೆ ಎಂದು ಹೇಳಿದರು.

ಕಾಂತಾವರ ಕನ್ನಡ ಸಂಘದ ಸ್ಥಾಪಕ ಡಾ.ನಾ. ಮೊಗಸಾಲೆ, ಕೋಶಾಧಿಕಾರಿ ನಿತ್ಯಾನಂದ ಪೈ, ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್, ಅಖಲ ಭಾರತ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ, ಕಾರ್ಯಕ್ರಮದ ಪ್ರಾಯೋಜಕಿ ಪಲ್ಲವಿ ಕೀರ್ತನ್ ಕುಮಾರ್ ಪಾಲ್ಗೊಂಡಿದ್ದರು. ಜಯಶ್ರೀ ಆದಿರಾಜ ಅಜ್ರಿ ಪ್ರಾರ್ಥಿಸಿದರು. ಉಪನ್ಯಾಸಕಿ ಸುಮತಿ ಪಿ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಸುಲೋಚನಾ ಬಿ. ವಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-28-1742864160

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.