ಕಾರವಾರ: ‘ಧಾರ್ಮಿಕ ಸಂಸ್ಥೆಗಳಿಗೆ ಭರಪೂರ ಅನುದಾನ ನೀಡುವ ಸರ್ಕಾರ ಕನ್ನಡ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಲಾತಂಡಗಳ ಕೈಹಿಡಿಯುತ್ತಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.

ತಾಲ್ಲೂಕಿನ ಕೈಗಾದಲ್ಲಿ ಈಚೆಗೆ ಜರುಗಿದ ಸಹ್ಯಾದ್ರಿ ಸಂಭ್ರಮ ಸಾಂಸ್ಕೃತಿಕ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಒಬ್ಬರೊಬ್ಬರನ್ನು ಪ್ರೀತಿಸುವ ಸಹಬಾಳ್ವೆ, ಭಾತೃತ್ವಗಳನ್ನು ಬೆಳೆಸುವ, ಎಲ್ಲರೂ ಕೂಡಿ ಮಾಡುವ ರಚನಾತ್ಮಕ ಸಾಂಸ್ಕೃತಿಕ ಸಂಭ್ರಮಗಳು ನಾಡಿನಲ್ಲಿ ಶಾಂತಿ ನೆಲಸಲು ಸಹಕಾರಿಯಾಗಿವೆ’ ಎಂದರು.

ಚಿತ್ರಸಾಹಿತಿ ಬಿ.ರಾಮಮೂರ್ತಿ ಮಾತನಾಡಿ, ‘ಹಣವೊಂದೆ ಜೀವನದಲ್ಲಿ ಮುಖ್ಯವಲ್ಲ ಎಂಬುದನ್ನು ರಾಜ್ಕುಮಾರ್ ಅವರು ಅಭಿನಯಿಸಿದ್ದ ಚಲನಚಿತ್ರಗಳು ಪ್ರೇಕ್ಷಕರಿಗೆ ಮನದಟ್ಟು ಮಾಡುತ್ತಿದ್ದವು’ ಎಂದರು.

ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕದ ಸ್ಥಳ ನಿರ್ದೇಶಕ ಬಿ.ವಿನೋದಕುಮಾರ, ‘ಕನ್ನಡಿಗರ ಕ್ರಿಯಾಶೀಲತೆ ಹಾಗೂ ಎಲ್ಲರನ್ನು ಪ್ರೀತಿಸುವ ಗುಣದಿಂದಾಗಿ ದೇಶದ ಅಣು ವಿದ್ಯುತ್ ಕ್ಷೇತ್ರದಲ್ಲಿ ಕೈಗಾವು ಪ್ರಸಿದ್ಧಿಯಾಗಿದೆ’ ಎಂದರು.

ಸಮಾರೋಪ ಸಮಾರಂಭದಲ್ಲಿ ಡಾ.ಬಿ.ಬಿ.ಅಡಿಗ ಪ್ರಶಸ್ತಿಯನ್ನು ಕುಸ್ತಿ ತರಬೇತುದಾರ ಪೈಲ್ವಾನ್ ತುಕಾರಾಮ ಮಾತ್ರು ಗೌಡ ಅವರಿಗೆ ನೀಡಲಾಯಿತು.

ಸಂಭ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಪೋಲಿಸ್ ಬ್ಯಾಂಡ್, ನಾಟಕ, ಯಕ್ಷಗಾನ, ಯಕ್ಷಿಣಿ ಹಾಗೂ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು.

ಜಗದೀಶ ಗುನಗಾ, ಶಿವಾನಂದ ರಾಥೋಡ, ಎಸ್.ಜೆ.ತಿಪ್ಪೇಸ್ವಾಮಿ, ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕುಬೇರಪ್ಪ ಪೂಜಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-20-364233676

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.