ಕಾಸರಗೋಡು: ‘ವ್ಯಕ್ತಿಯ ಸಾಧನೆ ಊರಿನ ಹಲವು ಮಜಲುಗಳನ್ನು ಅವಲಂಬಿಸಿರುವುದರಿಂದ ಆತನನ್ನು ಗೌರವಿಸಿದರೆ ಇಡೀ ನಾಡನ್ನು ಸನ್ಮಾನಿಸಿದಂತೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಭಾನುವಾರ ನಡೆದ ಡಾ. ರಮಾನಂದ ಬನಾರಿ 85ರ ಅಭಿನಂದನಾ ಪೂರ್ವಕ ಸಾಕ್ಷ್ಯಚಿತ್ರ ಬಿಡುಗಡೆ, ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ರಂಗದ ಶಿಸ್ತನ್ನು ತಮ್ಮ ಕಾವ್ಯ, ಪ್ರತಿಭೆ ಸಹಿತ ಸಾಧನೆಗಳಲ್ಲಿ ಬಳಸಿಕೊಂಡವರು ಡಾ. ಬನಾರಿಯವರು. ಇತರ ಸಾಧಕರಿಗೂ ಈ ಶಿಸ್ತನ್ನು ಕಲಿಸುವ ನಿಟ್ಟಿನಲ್ಲಿ ಅವರು ಯತ್ನಿಸಿದವರು ಎಂದು ಹೇಳಿದರು.

ಸಾಹಿತಿ ಡಾ.ಮೋಹನ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಡಾ.ಪ್ರವೀಣ್ ರಾಜ್ ಎಸ್. ರಾವ್ ರಚಿಸಿದ ‘ಮಂಜೇಶ್ವರದ ಮುತ್ತು’, ಕುಟ್ಟಿಯಾನ ಮುಹಮ್ಮದ್ ರಚಿಸಿದ ‘ಕನಸುಗಳ ಭೂಮಿಗೆ ಯಾತ್ರೆ’ ಕೃತಿ ಬಿಡುಗಡೆ ಮಾಡಲಾಯಿತು. ಡಾ. ರಾಧಾಕೃಷ್ಣ ಬೆಳ್ಳೂರು, ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ವಿಜಯಲಕ್ಷ್ಮಿ ಶಾನುಭೋಗ್, ಎ.ಆರ್. ಸುಬ್ಬಯ್ಯಕಟ್ಟೆ, ನ್ಯಾಷನಲ್ ಅಬ್ದುಲ್ಲ ಭಾಗವಹಿಸಿದ್ದರು.

ಪ್ರೊ.ಪಿ.ಎನ್.ಮೂಡಿತ್ತಾಯ ಸ್ವಾಗತಿಸಿದರು. ವಸಂತ ಕುಮಾರ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಯು. ಮಹೇಶ್ವರಿ, ಕವಿತಾ ಕೂಡ್ಲು ನಿರೂಪಿಸಿದರು. ವಿಶಾಲಾಕ್ಷ ಪುತ್ರಕಳ ವಂದಿಸಿದರು.

ಬಳಿಕ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವರದರಾಜ ಚಂದ್ರಗಿರಿ ‘ಕಾಸರಗೋಡಿನ ಸಾಹಿತ್ಯ: ಸ್ಥೂಲ ಅವಲೋಕನ’, ರತ್ನಾಕರ ಮಲ್ಲಮೂಲೆ ‘ಕಾಸರಗೋಡಿನ ಸಮಗ್ರ ಸಂಸ್ಕೃತಿ’ ಕುರಿತು ವಿಚಾರ ಮಂಡಿಸಿದರು. ವಿವಿಧ ಕಲಾ ತಂಡಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-29-376704573

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.