ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಬುಡಕಟ್ಟು ಜನರ ಸಂಭ್ರಮದ ಕುಂಡೆ ಹಬ್ಬ ಬುಧವಾರ ಆರಂಭಗೊಂಡಿತು. ಕಾಫಿತೋಟ ಹಾಗೂ ಕಾಡು ಮೇಡುಗಳನ್ನು ಬಿಟ್ಟು ಮೈಗೆ ಸಿಕ್ಕಿದ ಬಣ್ಣ ಹಚ್ಚಿಕೊಂಡು, ವಿಚಿತ್ರ ವೇಷಧರಿಸಿದ ಗಿರಿಜನರು ಕುಣಿದು ಕುಪ್ಪಳಿಸುತ್ತಾ ಹಬ್ಬದ ಆಚರಣೆಗೆ ಮುನ್ನುಡಿ ಬರೆದರು.

ದಕ್ಷಿಣ ಕೊಡಗಿನ ಕುಟ್ಟ, ಶ್ರೀಮಂಗಲ, ಹುದಿಕೇರಿ, ನಾಲ್ಕೇರಿ, ಬಿರುನಾಣಿ, ಬಾಳೆಲೆ ಮೊದಲಾದ ಕಡೆಗಳಿಂದ ಗೋಣಿಕೊಪ್ಪಲು, ಪೊನ್ನಂಪೇಟೆ, ತಿತಿಮತಿ ಮೊದಲಾದ ಭಾಗಗಳಿಗೆ ಬಂದ ವೇಷಧಾರಿ ಯುವಕರು ಕೈಗೆ ಸಿಕ್ಕಿದ ವಸ್ತುಗಳನ್ನೇ ತಾಳಮೇಳ ಮಾಡಿಕೊಂಡು ಕುಣಿಯತ್ತಾ ಸಂಭ್ರಮಿಸಿದರು.

ಎದುರಿಗೆ ಬಂದ ಮಹಿಳೆ ಅಥವಾ ಪುರುಷರಿಗೆ ‘ಏ ಕುಂಡೆ’ ಎಂದೇ ಬೈಯುತ್ತಾ ಅಡ್ಡಗಟ್ಟಿ ಹಣ ಬೇಡಿದರು. ಬುಡಕಟ್ಟು ಜನರ ಈ ಸಂಭ್ರಮವನ್ನು ನೋಡುತ್ತಾ ಅವರು ಬೈದರು ಕೂಡ ಬೇಸರ ಮಾಡಿಕೊಳ್ಳದೆ ತಮಗೆ ಇಷ್ಟಬಂದಷ್ಟು ಹಣವನ್ನು ಕೊಟ್ಟು ಮುಂದಕ್ಕೆ ತೆರಳುತ್ತಿದ್ದರು.

ಕುಂಡೆ ಹಬ್ಬದ ವೇಷಧಾರಿಗಳು ಹಣ ಕೊಡದವರನ್ನೂ ಬೈಯುತ್ತಿದ್ದರು. ಕೊಟ್ಟವರನ್ನೂ ಬೈಯುತ್ತಿದ್ದರು. ಇದು ಒಂದು ರೀತಿಯಲ್ಲಿ ನೋಡುಗರಿಗೆ ಮಜ ನೀಡುತ್ತಿತ್ತು. ಹೊಸಬರು ಇವರ ಬೈಗುಳ ಕೇಳಿ ಅಚ್ಚರಿಪಟ್ಟು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು.

ಕುಂಡೆ ಹಬ್ಬ ಆಚರಿಸುವ ಗಿರಿಜನ ವೇಷಧಾರಿಗಳು ಧರಿಸುವ ವೇಷಗಳನ್ನು ಇತರರು ಧರಿಸಿಕೊಂಡು ಅಶ್ಲೀಲವಾಗಿ ಬೈದರೆ ಅಂಥವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂಬ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಹೆಚ್ಚು ಜನ ಈ ಬಾರಿ ಪಟ್ಟಣಗಳಲ್ಲಿ ಕಂಡು ಬರಲಿಲ್ಲ. ಗಿರಿಜನರು ತೀರ ಅಶ್ಲೀಲವಾಗಿ ಬೈಯ್ಯುವುದು ಕಂಡ ಬರಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-51-582178177

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.