ನಾಪೋಕ್ಲು: ಶ್ರೀಮಂತ ಕಲೆಯನ್ನು ಕೊಡವ ಜನಾಂಗ ಸಾವಿರಾರು ವರ್ಷಗಳಿಂದ ಉಳಿಸಿ, ಬೆಳೆಸಿಕೊಂಡು ಬoದಿದೆ ಎಂದು ನೆಲಜಿ ಇಗ್ಗುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಮುಂಡoಡ ಸಿ. ನಾಣಯ್ಯ ಹೇಳಿದರು.

ನಾಪೋಕ್ಲು ಸಮೀಪದ ನೆಲಜಿ ದವಸ ಭಂಡಾರದಲ್ಲಿ ಆಯೋಜಿಸಿದ್ದ ಇಗ್ಗುತ್ತಪ್ಪ ಭಗವತಿ ಆಟ್ ಪಾಟ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಪದ್ಧತಿ, ಪರಂಪರೆ ಸಂಪೂರ್ಣ ವಿಭಿನ್ನ ಹಾಗೂ ವಿಶಿಷ್ಟತೆಯಿಂದ ಕೂಡಿದೆ. ಸಾಂಸ್ಕೃತಿಕ ಕಲೆಯನ್ನು ಮೈಗೂಡಿಸಿಕೊಂಡು ಹಬ್ಬ ಹರಿದಿನಗಳನ್ನು ಆಚರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಹಿರಿಯ ತಲೆಮಾರುಗಳು ಕಣ್ಮರೆಯಾಗಿದ್ದು, ಇಂದಿನ ಯುವ ಜನತೆ ಆಧುನಿಕತೆಯ ನೆಪದಲ್ಲಿ ಕೊಡವ ಜನಾಂಗದ ಸಿರಿವಂತ ಕಲೆಯನ್ನು ರೂಢಿಸಿಕೊಂಡು, ಅದನ್ನು ಉಳಿಸಿಕೊಳ್ಳುವಲ್ಲಿ ತೀರಾ ಅಸಡ್ಡೆಯನ್ನು ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಗ್ರಾಮದ ಪುಟಾಣಿಗಳನ್ನು ಗುರುತಿಸಿ, ಶಿಬಿರವನ್ನು ಆಯೋಜಿಸುವ ಪ್ರಯತ್ನಕ್ಕೆ ಕೈ ಜೋಡಿಸಿದ ಗ್ರಾಮದ ಕಲಾ ಸಾಧಕರಾದ ನಾಪನನೆರವoಡ ಸೋಮಯ್ಯ, ಮಣವಟ್ಟಿರ ಅರುಣ್ ಪಳಂಗಪ್ಪ, ಮಣವಟ್ಟಿರ ನoದ ಭೀಮಯ್ಯ, ಮಣವಟ್ಟಿರ ಪ್ರವೀಣ್ ಸಂಗಡಿಗರ ಸಂಕಲ್ಪ ಮತ್ತು ಸಾಧನೆಯನ್ನು ಶ್ಲಾಘಿಸಿದರು.

ಕೊಡವ ಜನಾಂಗದ ಸಂಖ್ಯೆ ಯಾವುದೇ ಕಾರಣಕ್ಕೂ ಕಡಿಮೆಯಾಗದಂತೆ ಮತ್ತು ಆಚರಣೆಯಲ್ಲಿದ್ದ ಸಂಸ್ಕೃತಿ, ಪರಂಪರೆ ಪದ್ಧತಿಗಳು ಅಳಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯ ಮೇಲೆ ಇದೆ. ಕೊಡವ ಜನಾಂಗದ ಕಲೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದರು.

ಮೊದಲ ಬಾರಿಗೆ ನಾಪೋಕ್ಲು ಕೊಡವ ಸಮಾಜದ ವತಿಯಿಂದ ಆಯೋಜಿಸಲಾದ ಆಟ್ ಪಾಟ್ ಶಿಬಿರದಲ್ಲಿ 78 ಯುವಕರಿಗೆ ಕಲೆಯ ಬಗ್ಗೆ ತರಬೇತಿ ನೀಡಲಾಗಿದೆ. ಇಂತಹ ಪ್ರಯತ್ನ ಜಿಲ್ಲೆಯ ಮೂಲೆ ಮೂಲೆಗಳಲ್ಲಿಯೂ ಆರಂಭಗೊಳ್ಳಬೇಕು. ನಮ್ಮ ಜನಾಂಗದ ಸಂಸ್ಕೃತಿಯ ಉಳಿವಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.

ಆಯೋಜಕರಲ್ಲಿ ಪ್ರಮುಖರಾದ ಮಣವಟ್ಟಿರ ಅರುಣ್ ಪಳoಗಪ್ಪ ಮಾತನಾಡಿ, ಇಂತಹ ಶಿಬಿರವನ್ನು ಮುಂದೆಯೂ ಆಯೋಜಿಸಲು ಪ್ರಯತ್ನಿಸಲಾಗುವುದು. ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಿ ಎಂದರು.

ಊರ ತಕ್ಕ ಮುಖ್ಯಸ್ಥರಾದ ನಾಪನೆರವಂಡ ಪೊನ್ನಪ್ಪ ಬದಂಜೆಟ್ಟಿರ ನಾಣಯ್ಯ, ಬಾಳೆಯಡ ಕುಂಜಪ್ಪ, ಕಯ್ಯoದಿರ ಉತ್ತಯ್ಯ ಮಾತನಾಡಿದರು.

ತರಬೇತುದಾರ ನಾಪನೆರವoಡ ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಿಗೆ ನಗದು ಪ್ರೋತ್ಸಾಹ ಧನದೊಂದಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-159394509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.