ಕೊಲ್ಹಾರ: ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಕನ್ನಡ ಪ್ರಾತಿನಿಧಿಕ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಿದ್ದು ಅತ್ಯಂತ ಶ್ಲಾಘನೀಯ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ದಯಾನಂದ ಹಿರೇಮಠ ಅಭಿಪ್ರಾಯಪಟ್ಟರು.

ಕಲಗುರ್ಕಿ ಬಾಪೂಜಿ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರು ಮಾತನಾಡಿದರು.

ಕಲಗುರ್ಕಿ ಗ್ರಾಮದ ಮುಖಂಡ ಸಂಗಪ್ಪ ದೇಸಾಯಿ ಮಾತನಾಡಿ, ‘ಕನ್ನಡ ನಾಡು– ನುಡಿ, ನೆಲ– ಜಲ ಹಾಗೂ ಸಂಸ್ಕೃತಿ– ಪರಂಪರೆ ಎರಡುನೂರು ವರ್ಷದ ಇತಿಹಾಸ ಹೊಂದಿದೆ. ಕನ್ನಡ ಭಾಷೆಯ ಅಭಿಮಾನ ಮೂಡಿಸುವಂತಹ ವಿಶೇಷ ಕಾರ್ಯಕ್ರಮ ನೀಡಬೇಕು’ ಎಂದರು.

ಜಾನಪದ ಕಲಾವಿದ ದುಂಡಪ್ಪ ಪಾರಗೊಂಡ ಮಾತನಾಡಿ, ‘ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಕವಿಗಳ, ಲೇಖಕರ ಕುರಿತು ಸಂಶೋಧನೆಗಳು ಜರುಗಬೇಕು. ಭಾಷೆ ಉಳಿದರೆ ಮಾತ್ರ ನಾವು ಕನ್ನಡಿಗರಾಗಲು ಸಾಧ್ಯ’ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಮಹಾದೇವಪ್ಪ ಘೋರ್ಪಡೆ, ಶ್ರೀಕಾಂತ ಹಿರೇಮಠ, ಅರವಿಂದ ಬಿರಾದಾರ, ರಾಮು ಬಾಗೇವಾಡಿ, ಮುತ್ತು ಪವಾರ, ಬಸವರಾಜ ಬಿರಾದಾರ, ಜಿ.ಎಸ್. ಬಳ್ಳೂರ, ಮಹಾದೇವಿ ತೆಲಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-26-981413554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.