ಕೊಲ್ಹಾರ: ಪ್ರತಿ ವರ್ಷದಂತೆ ಈ ವರ್ಷವೂ ದಿಗಂಬರೇಶ್ವರ ಮಠದ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪರಮ ಪೂಜ್ಯ ಕಲ್ಲಿನಾಥ ಸ್ವಾಮೀಜಿ ಹೇಳಿದರು

ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಏ 1ರಂದು ಬುಧವಾರ ಸಂಜೆ 5.30ಕ್ಕೆ ಐತಿಹಾಸಿಕ ರೊಟ್ಟಿ ಜಾತ್ರೆ ನಡೆಯಲಿದೆ. ಸಂಜೆ 6 ಗಂಟೆಗೆ ಬಾಗಲಕೋಟ ಜಿಲ್ಲೆಯ ಶಿರೂರದಿಂದ ಸಿದ್ದಲಿಂಗ ಶಿವಯೋಗಿ ಹಾಗೂ ಕಲ್ಲಪ್ಪಯ್ಯ ಶಿವಯೋಗಿಗಳ ಚಿತ್ರದ ಮೆರವಣಿಗೆ ಹೊರಟು ಪಟ್ಟಣಕ್ಕೆ ಸಂಜೆ 7 ಗಂಟೆಗೆ ಆಗಮಿಸಿ ಜಾತ್ರೆಗೆ ಚಾಲನೆ ದೊರೆಯಲಿದೆ ಎಂದರು.

ಏ. 2ರಂದು ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವದ ಕಳಸದ ಮೆರವಣಿಗೆ ಜರಗಲಿದೆ. ಅದೇ ದಿನ ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗುವುದು. ಪ್ರತಿ ದಿನ ವಿವಿಧ ಕಾರ್ಯಕ್ರಮಗಳಿದ್ದು ಏ. 6ರಂದು ಸಂಜೆ 5 ಗಂಟೆಗೆ ದಿಗಂಬರೇಶ್ವರ ರಥೋತ್ಸವದ ಕಳಸ ಇಳಿಸುವುದರೊಂದಿಗೆ ಜಾತ್ರೆ ಮಂಗಲಗೊಳ್ಳುವುದು ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-26-1005901309

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.