ಮಂಗಳೂರು: ಗೋವಾದ ವೆರ್ನಾದಲ್ಲಿರುವ ರೆಟ್ಜಿಂಗರ್ ಸಭಾಂಗಣದಲ್ಲಿ ಮೇ 30ರಂದು ಅಖಿಲ ಭಾರತ ಮಟ್ಟದ ಪ್ರಥಮ ಕೊಂಕಣಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಮಹಾಸಮ್ಮೇಳನ ಆಯೋಜಿಸಲಾಗಿದೆ.

‘ಕೊಂಕಣಿ ತಾಯಿಯ ಅಪ್ಪುಗೆಯಲ್ಲಿರೋಣ’ ಎಂಬ ಧ್ಯೇಯ ವಾಕ್ಯದೊಡನೆ ಜಾಗತಿಕ ರೋಮಿ ಲಿಪಿ ಅಭಿಯಾನ್ ನೇತೃತ್ವದಲ್ಲಿ ನಡೆಯುವ ಈ ಸಮಾವೇಶವನ್ನು ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ 30ಕ್ಕೂ ಮಿಕ್ಕಿ ಸಂಘಟನೆಗಳ ನೆರವಿನೊಂದಿಗೆ ಆಯೋಜಿಸಲಾಗುತ್ತಿದೆ.

ವಿವಿಧತೆಯಲ್ಲಿ ಏಕತೆ ಎಂಬ ವಿಷಯ ಕುರಿತು ಮೂರು ಸಂವಾದಗಳು ನಡೆಯಲಿವೆ. ಯುವ ಜನತೆಗಾಗಿ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ. ದಿ.ಎರಿಕ್ ಒಝೇರಿಯೊ ವಿನ್ಯಾಸಗೊಳಿಸಿದ ಕೊಂಕಣಿ ಬಾವುಟವನ್ನು ಸ್ವೀಕರಿಸಿ ಅಳವಡಿಸಿಕೊಳ್ಳಲಾಗುವುದು. ಕೊಂಕಣಿ ಗೀತೆ ಲೋಕಾರ್ಪಣೆ ಮಾಡಲಾಗುವುದು.

ಒಂದು ಲಿಪಿ, ಒಂದು ಭಾಷೆ; ಲಾಭವೇನು–ನಷ್ಟವೇನು (ತಾರಾ ಲವೀನಾ ಫೆರ್ನಾಂಡಿಸ್), ಸಾಹಿತ್ಯದಿಂದ ಒಗ್ಗಟ್ಟು (ಅಧ್ಯಕ್ಷತೆ- ರೊಯ್ ಕ್ಯಾಸ್ತೆಲಿನೊ) ಹಾಗೂ ಸಂಸ್ಕೃತಿಯಿಂದ ಒಗ್ಗಟ್ಟು (ಸ್ಟೀಫನ್ ಕ್ವಾಡ್ರಸ್) ವಿಷಯಗಳ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾರ್ಸೆಲ್ ಡಿಸೋಜ, ವಿದ್ಯಾರಂಗ ಮಿತ್ರ ಮಂಡಳಿ ಹಾಗೂ ಪ್ಯಾಟ್ರಿಕ್ ಮೊರಾಸ್ ಅವರನ್ನು ಸನ್ಮಾನಿಸಲಾಗುವುದು.

ಹೊರನಾಡಿನಲ್ಲಿ ಕೊಂಕಣಿ ಜಾಗೃತಿ ಮೂಡಿಸುವ ಈ ಕಾರ್ಯಕ್ರಮಕ್ಕೆ ನಾಡಿನ ಕೊಂಕಣಿ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-28-380199991

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.