ಬೆಚ್ಚಲ್

ಬೆಚ್ಚಲ್ (ನಾ). ಬೆದರುಗೊಂಬೆ; ಬೆಚ್ಚು

ಕುಂಭಕರ್ಣನ ಆಕ್ರಮಣಕ್ಕೆ ವಾನರರ ಸಹಸ್ರ ಸಹಸ್ರ ಸೈನ್ಯ ನೆಲಕ್ಕೆ ಉರುಳಿತು. ಅವರು ಆಯುಧಗಳನ್ನು ಎಸೆದು ಕಿತ್ತೋಡುತ್ತಿದ್ದರು. ಅದನ್ನು ಕಂಡು ರಾಮಚಂದ್ರನು ಲಕ್ಷ್ಮಣನನ್ನು ಕರೆದನು. ಅಂಗದನಿಗೆ ಧೈರ್ಯ ತುಂಬಿ, ಕಪಿವಾಹಿನಿಯನ್ನು ತಡೆಯಲು ಹೇಳಿದನು. ಅಂಗದನು ಲಕ್ಷ್ಮಣನ ಕರೆ ಕೇಳಿ ತನ್ನ ತಂದೆಯನ್ನು ನೆನೆದು ಕಪಿಸೈನ್ಯವನ್ನು ಕರೆದನು.

‘ಬನ್ನಿ ವೀರರೇ ಬನ್ನಿ! ಇದು ಭೂತ ಅಲ್ಲ. ರಾಕ್ಷಸರು ಯುದ್ಧರಂಗದ ಹೊಲದ ರಕ್ಷಣೆಗೆ ಮುಂದಿಟ್ಟುಕೊಂಡು ನುಗ್ಗುತ್ತಿರುವ ಹುಲ್ಲಿನ ಬೆದರುಗೊಂಬೆ ಇದು. ಇದಕ್ಕೆ ಅಳುಕಿ ಮೂಢ ಮೃಗಪಕ್ಷಿಗಳಂತೆ ಪಲಾಯನ ಪಟುಗಳಾಗುವಿರಾ?’ ಎಂದು ಪ್ರಶ್ನಿಸಿ, ಧೈರ್ಯ ತುಂಬಿದನು. ಈ ಕಾವ್ಯಭಾಗದಲ್ಲಿ ಕುವೆಂಪು ಬೆದರುಗೊಂಬೆಗೆ ‘ಬೆಚ್ಚಲ್’ ಪದ ಸೃಷ್ಟಿಸಿ ಪ್ರಯೋಗಿಸಿದ್ದಾರೆ.

ರಕ್ಕಸರ್ ಕಳನ ಕಳಮೆಯ ವೊಲದ ರಕ್ಷಣೆಗೆ

ಮುಂದೊಡ್ಡಿಕೊಂಡು ನುಗ್ಗುತ್ತಿರ್ಪ ಈ ತೃಣದ

ಬೆಚ್ಚಲ್ಗಳುಕಿ ಪಲಾಯನ ಪಟುಗಳಾಗುವಿರ

ಮೂಢ ಮೃಗಪಕ್ಷಿಗಳವೋಲ್!

ಕಾಮಧನು

ಕಾಮಧನು (ನಾ). 1. ಮನ್ಮಥನ ಬಿಲ್ಲು 2. ಮಳೆಬಿಲ್ಲು; ಇಂದ್ರ ಧನುಸ್ಸು

(ಕಾಮ + ಧನು)

ಇಷ್ಟಬಂದ ರೂಪವನ್ನು ಧರಿಸಬಲ್ಲ ಕಾಮರೂಪಿಯಾದ ಮಾರೀಚನು ಪುಷ್ಪಕ ವಿಮಾನದಲ್ಲಿ ರಾವಣನ ಜೊತೆಗೆ ಬರುವನು. ಅವನು ಮೇಘರೂಪವನ್ನು ಪಡೆದು ಪುಷ್ಪಕದ ನೆರಳನ್ನು ಸೇತುವೆಯಾಗಿಸಿಕೊಂಡು ಇಳಿದು ಬರುವನು. ಆಗ ಅವನ ಶರೀರವು ಮಳೆಬಿಲ್ಲಿನ ಸಪ್ತವರ್ಣಗಳನ್ನು ಹೊಂದಿದ್ದು, ಅವನು ರಾಮಸತಿ ಇದ್ದ ಎಡೆಗೆ ಇಳಿದನು. ಅದನ್ನು ಬಣ್ಣಿಸುವಾಗ ಕವಿಯು ಏಳುಬಣ್ಣಗಳ ಇಂದ್ರ ಧನುಸ್ಸನ್ನು ‘ಕಾಮಧನು’ ಎಂಬ ಪದ ರಚಿಸಿ ಪ್ರಯೋಗಿಸಿದ್ದಾರೆ.

ಮೇಘರೂಪಂಬೆತ್ತು ನಿಂದ ಪುಷ್ಪಕದ ಆ

ನೆಳಲೆ ಸೇತುವೆಯಾಗೆ, ಕಾಮಧನು ತನುವಾಗೆ,

ರಾಮಸತಿಯಲರ್ಗೊಯ್ಯುತಿರ್ದಡವಿಗಿಳಿದನಾ

ಮಾರೀಚನುಪಮಾತೀತ ಕಾಮರೂಪಿ

ಕೌರುಗಂಪು

ಕೌರುಗಂಪು (ನಾ). ಸುಟ್ಟವಾಸನೆ; ಕಂಟುನಾತ

(ಕೌರು (<ಕಮರು + ಕಂಪು)

ಸೀತೆಯು ಯುದ್ಧದ ಒಂದು ಬೆಳಗ್ಗೆ ದೂರ ಸಮುದ್ರ ತೀರದಲ್ಲಿ ಏಳುತ್ತಿದ್ದ ಧೂಮದುಶ್ಯಕುನವನ್ನು ನೋಡುತ್ತಾಳೆ. ಆ ಹೊಗೆಯ ಮಬ್ಬು ಅಶೋಕವನ ಮಧುಧಾಮವನ್ನು ಕವಿಯುತ್ತದೆ. ಆಗ ಮೂಗು ಸಹಿಸಲಾಗದ ಸುಟ್ಟವಾಸನೆಯ ಗಾಳಿ ಬೀಸುತ್ತದೆ. ಅದಕ್ಕೆ ಕಾರಣವೇನೆಂದು ಸಖಿ ತ್ರಿಜಟೆಯನ್ನು ಕೇಳುತ್ತಾಳೆ. ಅವಳು ಯುದ್ಧದಲ್ಲಿ ಸತ್ತವರ ಹೆಣಗಳನ್ನು ಮೆದೆಯಂತೆ ಒಟ್ಟಿ ಸುಡುತ್ತಿರುವ ಭಯಂಕರ ವಿಷಯ ತಿಳಿಸುತ್ತಾಳೆ. ಆ ಸಹಿಸಲಾಗದ ಕಂಟುನಾತವನ್ನು ಕವಿಯು ‘ಕೌರುಗಂಪು’ ಪದ ಬಳಸಿ ವಿವರಿಸಿದ್ದಾರೆ.

ಮೂಗು ಮುರಿಯಲ್ ಬೀಸಿದುದು ಗಾಳಿ

ಕೌರುಗಂಪಂ. ಮೂಗುವಟ್ಟವು ಪರಮೆ ಪಕ್ಕಿಗಳ್,

ಪೆಣವೊಗೆಗೆ ಪೇಸಿದೋಲಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.