ಜಾತ್ರೆಯ ಮೂರನೇ ದಿನ ಬೆಳಗ್ಗೆಯೇ ಮದ್ದಿನ ಹುಲಿಗಳನ್ನು ಹರಕೆ ಹೊತ್ತವರ ಮನೆಗಳಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಜೈ ಬಜರಂಗಬಲಿ ಸನ್ನಿಧಿಗೆ, ಬಳಿಕ ಗುಡ್ಡದ ಮೇಲಿನ ಶೇಖ್ ಜಿಂದಾವಲಿ ದರ್ಗಾಕ್ಕೆ ಸಾಗಿಸಲಾಗುತ್ತದೆ.

ಪೂಜೆಗಳ ಬಳಿಕ ಯುವಕರು ಹುಲಿಗಳನ್ನು ಹೊತ್ತು ಅಗಸಿಗೆ ತರುತ್ತಾರೆ. ಅಷ್ಟೊತ್ತಿಗೆ ಊರು ಕಿಕ್ಕಿರಿದಿರುತ್ತದೆ.

ಜೈ ಬಜರಂಗಬಲಿ ಗುಡಿಯ ಬಳಿಯ ಕಂಬಕ್ಕೆ 600 ಅಡಿ ಉದ್ದದ ಹಗ್ಗ ಬಿಗಿಯಲಾಗುತ್ತದೆ. ಅದರ ಇನ್ನೊಂದು ತುದಿ ಸರ್ಕಾರಿ ಶಾಲೆ ಬಳಿಯ ಅಗಸಿಯಲ್ಲಿರುತ್ತದೆ. ಆ ಹಗ್ಗವನ್ನು ಹುಲಿಯ ಕಾಲುಗಳ ನಡುವಿನ ರಂಧ್ರಗಳಲ್ಲಿ ಪೋಣಿಸಲಾಗುತ್ತದೆ. ಇದು ಗ್ರಾಮಸ್ಥರೇ ರೂಪಿಸಿಕೊಂಡಿರುವ ವಿಶಿಷ್ಟ ಸ್ಥಳೀಯ ಎಂಜಿನಿಯರಿಂಗ್ ತಂತ್ರ. ಹಗ್ಗದ ಮೇಲೆ ಹತ್ತಿದ ಹುಲಿ ಓಡಲು ಸಿದ್ಧವಾಗುತ್ತದೆ. ಜನರು ಉಸಿರು ಬಿಗಿಹಿಡಿದು ನಿಂತಿರುತ್ತಾರೆ.

ಮದ್ದಿನ ಬತ್ತಿಗೆ ಕಿಡಿ ತಾಗುತ್ತಿದ್ದಂತೆಯೇ ಹುಲಿ ಮಿಂಚಿನಂತೆ ಚಿಮ್ಮುತ್ತದೆ. ಗಾಲಿಗಳ ಮೇಲೆ ಓಡುತ್ತ ಕ್ಷಣಾರ್ಧದಲ್ಲಿ ಗುರಿ ತಲುಪುತ್ತದೆ. ಅಗಸಿಯಲ್ಲಿ ಕೇಕೆ, ಶಿಳ್ಳೆ, ಜಯಘೋಷಗಳು ಮೊಳಗುತ್ತವೆ.

ಘೋಷಣೆಗಳ ನಡುವೆ ಮದ್ದಿನ ಹುಲಿ ತನ್ನ ಓಟ ಮುಗಿಸುತ್ತದೆ.

ಸ್ವಲ್ಪ ಹೊತ್ತಿನ ಹಿಂದೆ ನಿಶ್ಚಲವಾಗಿ ನಿಂತಿದ್ದ ಕಟ್ಟಿಗೆ, ಕಾಗದ, ಕುಂಬಳಕಾಯಿಯ ಆಕೃತಿ ಕ್ಷಣಾರ್ಧದಲ್ಲಿ ಜೀವ ಪಡೆದಂತೆ ಕಾಣಿಸುತ್ತದೆ. ಮದ್ದಿನ ಹೊಗೆ ಗಾಳಿಯಲ್ಲಿ ಹರಡಿರುತ್ತದೆ. ಹಲಗೆಗಳ ಖನಖನ ಇನ್ನೂ ನಿಂತಿರುವುದಿಲ್ಲ. ಮಕ್ಕಳು ಹುಲಿ ಹೋದ ದಿಕ್ಕಿನತ್ತ ಓಡಿರುತ್ತಾರೆ. ಹಿರಿಯರ ಮುಖದಲ್ಲಿ ಸಮಾಧಾನ. ಹರಕೆ ಹೊತ್ತವರ ಕಣ್ಣಲ್ಲಿ ಭಕ್ತಿ ಸಮರ್ಪಿಸಿದ ಭಾವ.

ಆ ಕ್ಷಣದಲ್ಲಿ ಅದು ಕೇವಲ ಸಿಡಿಮದ್ದಿನಿಂದ ಓಡುವ ಗೊಂಬೆಯಾಗಿರುವುದಿಲ್ಲ. ಇಡೀ ಗ್ರಾಮದ ನಂಬಿಕೆ, ಒಗ್ಗಟ್ಟು, ಶ್ರಮ ಮತ್ತು ತಲೆಮಾರುಗಳಿಂದ ಬಂದ ಕೈಚಳಕ ಕಿಡಿ ಹೊತ್ತಂತೆ ದೌಡಾಯಿಸಿದ ಜೀವಂತ ಸಂಪ್ರದಾಯವಾಗಿ ಕಾಣಿಸುತ್ತದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-1018631368

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.