ಮಂಗಳೂರು: ಕರ್ನಾಟಕ, ಕೇರಳ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿರುವ ಕೊಂಕಣಿ ಜಾನಪದ ಪ್ರಕಾರಗಳ ತುಲನಾತ್ಮಕ ಅಧ್ಯಯನ ನಡೆಯಬೇಕಿದೆ ಎಂದು ಸಾಹಿತಿ ಹಾಗೂ ಗೋವಾ ವಿಶ್ವವಿದ್ಯಾಲಯದ ಶೆಣೈ ಗೋಯೆಂಬಾಬ್ ಸ್ಕೂಲ್ ಆಪ್ ಲ್ಯಾಂಗುವೇಜ್ ಆ್ಯಂಡ್ ಲಿಟರೇಚರ್ನ ವೈಸ್ ಡೀನ್ (ಸಂಶೋಧನೆ) ಪ್ರಕಾಶ್ ಪರಿಯೆಂಕರ್ ಹೇಳಿದರು.

ಕೊಂಕಣಿ ಭಾಷೆ ಮತ್ತು ಸಾಸ್ಕೃತಿಕ ಪ್ರತಿಷ್ಠಾನ (ಕೆಬಿಎಸ್ಪಿ) ಮತ್ತು ನವ ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಇಲ್ಲಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಏರ್ಪಡಿಸಿದ್ದ ‘ವಿಶ್ವ ಕೊಂಕಣಿ ಸಮಾರೋಹ–2026’ರ ಎರ ಡನೇ ದಿನದ ಗೋಷ್ಠಿಗಳನ್ನು ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.

‘ಜಾನಪದವನ್ನು ಯಾರು ರಚಿಸಿದರು, ಯಾವಾಗ ರಚಿಸಿದರೋ ಗೊತ್ತಿಲ್ಲ. ಈ ಮೌಖಿಕ ಸಾಹಿತ್ಯ ಪ್ರಕಾರದ ಹಾಡು ನೃತ್ಯಗಳು ನಮ್ಮ ಬದುಕಿನ ಜೊತೆ ಬೆಸೆದುಕೊಂಡಿವೆ. ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದಿವೆ. ಅವು ನಮ್ಮೊಡನೆ ಸಂವಾದಿಸುವ ಪರಿ ವಿಶಿಷ್ಟ. ಅವು ನೀಡುವ ಅನುಭವ ನಿತ್ಯನೂತನ. ಅವುಗಳ ಮೂಲಕ ಸಂಸ್ಕೃತಿ ವ್ಯಕ್ತವಾಗುವ ಪರಿ ಮನೋಜ್ಞವಾದುದು’ ಎಂದರು.

‘ಅಕ್ಷರ ಜ್ಞಾನ ಇಲ್ಲದ ನಮ್ಮ ಹಿರಿಯರು ಜಾನಪದ ಪ್ರಕಾರಗಳನ್ನು ಕಾಪಾಡುತ್ತಾ ಬಂದಿದ್ದಾರೆ. ಐದು, ಏಳು, 12 ಮುಂತಾದ ಸಂಖ್ಯೆಗಳನ್ನು ಆಧರಿಸಿದ ಅನೇಕ ಆಚರಣೆ ಹಾಗೂ ಸಂಪ್ರದಾಯಗಳು ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಎಷ್ಟೊ ಜಾನಪದ ಪ್ರಕಾರಗಳ ಬಗ್ಗೆ ನಮಗೇ ಸರಿಯಾದ ಅರಿವಿಲ್ಲ. ಜಾನಪದ ಪ್ರಕಾರಗಳನ್ನು ಕಾಪಾಡಬೇಕಾದರೆ ಅವುಗಳ ಅಧ್ಯಯನ ನಡೆಸುವವರಿಗೆ ಉತ್ತೇಜನ ಸಿಗಬೇಕು. ಸ್ಕಾಲರ್ಷಿಪ್ ನೀಡಿ ಪ್ರೋತ್ಸಾಹಿಸಬೇಕು’ ಎಂದರು.

ವಿಶ್ವ ಕೊಂಕಣಿ ಕೇಂದ್ರದ ‘ಮೈಕೆಲ್ ಡಿಸೋಜ ವಿಷನ್ ಕೊಂಕಣಿ’ ಪುಸ್ತಕ ಪ್ರಕಾಶನ’ ಯೋಜನೆಯ ಪೋಷಕ ಮೈಕೆಲ್ ಡಿಸೋಜ, ‘ಕೊಂಕಣಿಯಲ್ಲಿ ಅನೇಕ ಪ್ರಾದೇಶಿಕ ವೈವಿಧ್ಯಗಳಿವೆ. ಈ ಕುರಿತ ಭಿನ್ನಾಭಿಪ್ರಾಯ ಬದಿಗಿಟ್ಟು ಕೊಂಕಣಿ ಭಾಷೆ ಉಳಿಸಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕು’ ಎಂದರು.

ಸಮಾಜಸೇವೆಯಲ್ಲಿ ತೊಡಗಿರುವ ‘ವರ್ಧನಿ’ಯ ಸಂಚಾಲಕಿ ಉಷಾ ಶೆಣೈ ಅವರನ್ನು ಅಭಿನಂದಿಸಲಾಯಿತು.

ಕೊಂಕಣಿ ಭಾಷೆ ಮತ್ತು ಸಾಸ್ಕೃತಿಕ ಪ್ರತಿಷ್ಠಾನದ (ಕೆಬಿಎಸ್ಪಿ) ವಿಶ್ವ ಕೊಂಕಣಿ ಅಧ್ಯಕ್ಷ ನಂದಗೋಪಾಲ ಶೆಣೈ ಭಾಗವಹಿಸಿದ್ದರು.

ಲೇಖಕ ವಿವೇಕಾನಂದ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಕೊಂಕಣಿ ಸಣ್ಣಕತೆಗಳ ಗೋಷ್ಠಿಯಲ್ಲಿ ಜಯಶ್ರೀ ಶೆಣೈ, ವಂದನಾ ನಾಯಕ್, ಕಸ್ತೂರಿ ಪೈ, ಶಕುಂತಳಾ ಕಿಣಿ, ಬಸ್ತಿ ಶೋಭಾ ಶೆಣೈ ಭಾಗವಹಿಸಿದರು.

ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ‘ಯಕ್ಷಗಾನ ಮತ್ತು ಕೊಂಕಣಿ’ ಗೋಷ್ಠಿಯಲ್ಲಿ ಶಾಂತಾರಾಮ ಕುಡ್ವ, ಆರ್ಗೋಡು ಮೋಹನದಾಸ ಶೆಣೈ, ಎಂ.ಆರ್.ಕಾಮತ್ ಭಾಗವಹಿಸಿದರು. ಶಕುಂತಳಾ ಕಿಣಿ ಅಧ್ಯಕ್ಷತೆಯಲ್ಲಿ ನಡೆದ ಜಾನಪದ ಗೀತೆಗಳ ಕುರಿತ ಗೋಷ್ಠಿಯಲ್ಲಿ ಮರೋಳಿ ಸಬಿತಾ ಕಾಮತ್, ಜೂಲಿಯೆಟ್ ಫರ್ನಾಂಡಿಸ್, ವಿಜಯಲಕ್ಷ್ಮೀ ನಾಯಕ್, ನಾರಾಯಣ ನಾಯಕ್ ಭಾಗವಹಿಸಿದ್ದರು.

ಸ್ಟ್ಯಾನಿ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಯುವ ಕೊಂಕಣಿ ಲೇಖಕರ ಕುರಿತ ಗೋಷ್ಠಿಯಲ್ಲಿ ವಿಲ್ಮಾ ಡಿಸೋಜ, ಲವಿತಾ ಡಿಸೋಜ, ವೆಂಕಟೇಶ ನಾಯಕ್, ಗ್ಲಾನಿಷ್ ಮಾರ್ಟಿಸ್ ಶ್ವೇತಾ ಪೈ ಎಂ. ಭಾಗವಹಿಸಿದ್ದರು. ಸಮಾರೋಪದಲ್ಲಿ ಕರ್ನಾಟಕ ಹೈಕೋರ್ಟ್ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ ಕಾಮತ್ ಭಾಗವಹಿಸಿದರು. ಭಾಷಾ ಅಲ್ಪಸಂಖ್ಯಾತರಿಗೆ ಇರುವ ಹೇರಳ ಅವಕಾಶಗಳು ಕುರಿತು ಕೆ.ಜೆ.ಕಾಮತ್ ಮಾತನಾಡಿದರು. ನಂದಗೋಪಾಲ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕೆಬಿಎಸ್ಪಿ ಉಪಾಧ್ಯಕ್ಷೆ ವಿಲ್ಮಾ ಡಿಸೋಜ ಧನ್ಯವಾದ ಸಲ್ಲಿಸಿದರು. ಸುಚಿತ್ರಾ ಶೆಣೈ, ವಿಜಯಲಕ್ಷ್ಮಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-29-1467307170

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.