ಮಂಗಳೂರು: ‘ ನಾವು ಹೃದಯದಿಂದ ಬಳಸುವ ಭಾಷೆ ಕೊಂಕಣಿ. ಅದು ಕೇವಲ ಭಾಷೆ ಅಲ್ಲ ಭಾವನೆ. ಅದು ನಮ್ಮ ಅಸ್ಮಿತೆ ಎನ್ನುವುದನ್ನು ಮರೆಯಬಾರದು. ಏನೇ ಕಠಿಣ ಪೈಪೋಟಿಗಳಿದ್ದರೂ, ಎಂತಹದ್ದೇ ಪರಿಸ್ಥಿತಿ ಬಂದರೂ ನಮ್ಮ ಮನೆಯಿಂದ ಕೊಂಕಣಿ ಮರೆಯಾಗಲು ಬಿಡಬಾರದು’ ಎಂದು ಗೋವಾದ ಕಲೆ ಮತ್ತು ಸಂಸ್ಕೃತಿ ಪೋಷಕಿ, ಶಿಕ್ಷಣ ತಜ್ಞೆ ಸುಲಕ್ಷಣಾ ಸಾವಂತ್ ಹೇಳಿದರು.

ಕೊಂಕಣಿ ಭಾಷೆ ಮತ್ತು ಸಾಸ್ಕೃತಿಕ ಪ್ರತಿಷ್ಠಾನ (ಕೆಬಿಎಸ್ಪಿ) ಮತ್ತು ನವ ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಇಲ್ಲಿನ ಶಕ್ತಿ ನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಭಾನುವಾರ ಆರಂಭವಾದ ಎರಡು ದಿನಗಳ ‘ವಿಶ್ವ ಕೊಂಕಣಿ ಸಮಾರೋಹ–2026’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇವನಾಗರಿ, ಕನ್ನಡ, ಅರಬಿ, ಮಲಯಾಳ ಮೊದಲಾದ ಲಿಪಿಗಳನ್ನು ಬಳಸುತ್ತಿರುವ ಕೊಂಕಣಿಯಲ್ಲಿ 40ಕ್ಕೂ ಅಧಿಕ ಪ್ರಾದೇಶಿಕ ವೈವಿಧ್ಯ, 16ಕ್ಕೂ ಹೆಚ್ಚು ಆಡುಭಾಷೆಗಳಿವೆ. ಪ್ರತಿಯೊಂದಕ್ಕೂ ತನ್ನದೇ ಆದ ಇತಿಹಾಸ ಮತ್ತು ಸಂಸ್ಕೃತಿ ಇದೆ. ಇವುಗಳಿಂದಾಗಿಯೇ ಕೊಂಕಣಿಯ ರಂಗು ಸಮೃದ್ಧ. ಎರಡು ಬಣ್ಣಗಳು ಸೇರಿ ಹೊಸ ಬಣ್ಣ ರೂಪುಗೊಳ್ಳುವಂತೆಯೇ, ಬೇರೆ ಬೇರೆ ಆಡುಭಾಷೆಗಳು ಸೇರಿ ಹೊಸತನ ಸೃಷ್ಟಿಯಾಗುತ್ತದೆ. ಇದು ನಮ್ಮ ಶಕ್ತಿ. ಪಾರಂಪರಿಕ ಉಡುಗೆ ತೊಡುಗೆ, ಸಂಗೀತ, ಆಹಾರ ಸಂಸ್ಕೃತಿಯನ್ನೂ ಕಾಪಾಡಬೇಕು. ಕೊಂಕಣಿ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ಪರಸ್ಪರ ಅರಿಯುವ, ಬೆರೆಯುವ ಮೂಲಕ ಸಂಸ್ಕೃತಿ ಹಾಗೂ ವೈವಿಧ್ಯ ಕಾಪಾಡಲು ಕಟಿಬದ್ಧರಾಗಬೇಕು’ ಎಂದರು.

‘ಸುಮಾರು 2000 ವರ್ಷಗಳ ಇತಿಹಾಸವಿರುವ ಕೊಂಕಣಿ ಮೇಲೆ ಸಂಸ್ಕೃತ, ಮರಾಠಿ, ಕನ್ನಡ, ಅರಬ್ಬಿ, ಪರ್ಷಿಯನ್, ಪೋರ್ಚುಗೀಸ್ ಭಾಷೆಗಳ ಪ್ರಭಾವವಿದೆ. ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ಸಣ್ಣದಿರಬಹುದು. ಆದರೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನ, ರಾಜ್ಯ ಭಾಷೆಯ ಸ್ಥಾನ ಪಡೆದ ಭಾಷೆ ಇದು. ಸಾಹಿತ್ಯ, ಸಾಂಸ್ಕೃತಿಕ ಮಾನ್ಯತೆಯಿಂದ ತನ್ನ ಅಸ್ಮಿತೆಯನ್ನು ಹಿಗ್ಗಿಸಿಕೊಂಡಿರುವುದು ಕೊಂಕಣಿಯ ವಿಶೇಷತೆ’ ಎಂದು ವರ್ಣಿಸಿದರು.

ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾ ಮಂಡಳಿ ಸಂಚಾಲಕ ಮೆಲ್ವಿನ್ ರಾಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಹೆನ್ರಿ ಮೆಂಡೋನ್ಸ ಪ್ರಸ್ತಾವಿಕವಾಗಿ ಮಾತನಾಡಿದರು.

ಕೆಬಿಎಸ್ಪಿ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿದರು. ಕೆಬಿಎಸ್ಪಿ ಕಾರ್ಯದರ್ಶಿ ಕಸ್ತೂರಿ ಮೋಹನ್ ಪೈ ಭಾಗವಹಿಸಿದ್ದರು.

ವಿವಿಧ ತಲೆಮಾರುಗಳಲ್ಲಿ ಕೊಂಕಣಿ ಸಾಹಿತ್ಯ ಪ್ರಕಾರಗಳ ಸಂತುಲಿತ ಅಭಿವೃದ್ಧಿ, ಸಾಹಿತ್ಯ ವಿಮರ್ಶೆಯ ಪ್ರಮುಖ ಅಂಶಗಳು ಕುರಿತ ಗೋಷ್ಠಿಗಳು ನಡೆದವು. ಕೊಂಕಣಿ ಕವಿ ಪಿ.ಜಿ.ಕಾಮತ್ ಜನ್ಮಶತಮಾನೋತ್ಸವ ಪ್ರಯುಕ್ತ ಅವರ ಕಾವ್ಯ ಬದುಕಿನ ಅವಲೋಕನ ನಡೆಯಿತು.

ಕುಮಟಾದ ಲಕ್ಷ್ಮೀ ನರಸಿಂಹ ಕಲಾ ಮಂಡಳಿಯವರು ನರಸಿಂಹ ಅವತಾರ ನೃತ್ಯರೂಪಕವನ್ನು, ಇಲ್ಲಿನ ಸಾಧನಾ ಬಳಗದವರು ‘ಹಾಸ್ಯ ರಸಾಯನ’ ಕಾರ್ಯಕ್ರಮವನ್ನು, ಅಂಕಿತಾ ಕಾಮತ್ ಮತ್ತು ಬಳಗದವರು ‘ವೀರ ನಾರಿ ಅಹಲ್ಯಾಬಾಯಿ ಹೋಳ್ಕರ್’ ಕೊಂಕಣಿ ನಾಟಕವನ್ನು ಪ್ರಸ್ತುತಿ ಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-29-909268233

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.