ಮಂಗಳೂರು: ‘ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಜನರು ಹತ್ತಿರವಾಗಬೇಕು’ ಎಂದು ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಹೇಳಿದರು.

ಅಕಾಡೆಮಿ ಈಚೆಗೆ ಆಯೋಜಿಸಿದ್ದ ‘ಕಾವ್ಯಾಂ ವ್ಹಾಳೊ’ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ‘ಕೊಂಕಣಿಗರನ್ನು ಒಗ್ಗೂಡಿಸುವ ಕಾರ್ಯವನ್ನು ಅಕಾಡೆಮಿ ಮಾಡುತ್ತಿದೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ಕೊಂಕಣಿ ಜನರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ’ ಎಂದರು.

ಕೊಂಕಣಿ ಭಾಷೆಯ ಖರ್ವಿ ಸಮುದಾಯದ ಕಲಾವಿದ ಜೀವನ್ದಾಸ್ ಖರ್ವಿ ಅವರನ್ನು ಸನ್ಮಾನಿಲಾಯಿತು. ಕೃತಿಕಾ ಕಾಮತ್ ಬರೆದ ‘ಭಕ್ತಿ ರಸಾಮೃತಂ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕೊಂಕಣಿ ಭಾಷಾ ಮಂಡಳಿ ಅಧ್ಯಕ್ಷ ರೇಮಂಡ್ ಡಿಕುನ್ಹಾ ಪಾಲ್ಗೊಂಡಿದ್ದರು.

ರೋಷನ್ ಕಾಮತ್, ಮರಿಯಾ ಪಿಂಟೊ, ವಿಲ್ಫ್ರೆಡ್ ಪಾಂಗ್ಳಾ, ವೆನಿಶಾ ಜೆಸ್ಸಿಕಾ ಸಲ್ಡಾನ, ರಾಬರ್ಟ್ ಮಿನೇಜಸ್, ರಾಧಿಕಾ ಪೈ, ರೆನಿಶಾ ರೋನಾ ಲೋಬೊ, ಹೆನ್ರಿ ಮಸ್ಕರೇನ್ಹಸ್ ಮತ್ತು ಸ್ಟೀವನ್ ಕ್ವಾಡ್ರಸ್ ಕವಿತೆ ವಾಚಿಸಿದರು. ಜಾರ್ಜ್ ಲಿಗೋರಿ ಡಿಸೋಜ ನಡೆಸಿಕೊಟ್ಟರು. ಅಕಾಡೆಮಿ ಸದಸ್ಯ ರೊನಾಲ್ಡ್ ಕ್ರಾಸ್ತ ನಿರೂಪಿಸಿದರು. ಸದಸ್ಯರಾದ ಸಮರ್ಥ್ ಭಟ್, ಸಪ್ನಾ ಮೇ ಕ್ರಾಸ್ತ ಮತ್ತು ನವೀನ್ ಲೋಬೊ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-29-18988845

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.