ಸಾಮಾನ್ಯವಾಗಿ ಮನೆ ಎಂದರೆ ನಮ್ಮ ಪ್ರೀತಿಪಾತ್ರರೊಂದಿಗೆ ಬದುಕು ಕಟ್ಟಿಕೊಳ್ಳುವ ನೆಲೆ. ದಿನನಿತ್ಯದ ಸಣ್ಣ ಸಂತೋಷಗಳು, ಮಾತುಗಳು, ನೆನಪುಗಳು ಬೆರೆತು ರೂಪುಗೊಳ್ಳುವ ಆತ್ಮೀಯ ಜಾಗ. ಅದನ್ನು ಆಧುನಿಕ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು, ಲೈಟಿಂಗ್ಗಳಿಂದ ಸುಂದರಗೊಳಿಸುವುದು ನಮ್ಮ ಕಾಲದ ರೂಢಿ. ಆದರೆ ಕಾಲದ ಹೊಳೆಯಲಿ ನಿಧಾನವಾಗಿ ಮಾಯವಾಗುತ್ತಿರುವ ಹಳೆಯ ಬದುಕಿನ ಗುರುತುಗಳನ್ನು ಮನೆಯಲ್ಲಿ ಉಳಿಸಿಕೊಂಡರೆ?

ಅವುಗಳನ್ನು ಕೇವಲ ಸಂಗ್ರಹ ವಸ್ತುಗಳಾಗಿ ಅಲ್ಲ, ಬದುಕಿನ ಭಾಗವಾಗಿಯೇ ನೋಡಿದರೆ? ಆ ಕಲ್ಪನೆಯನ್ನು ನಿಜಗೊಳಿಸಿದವರು ಮಂಗಳೂರಿನ ರಘುನಾಥ ಪ್ರಭು.

ಮಂಗಳೂರಿನ ಮಣ್ಣಗುಡ್ಡೆ–ಬೊಕ್ಕಪಟ್ಟ ದಾರಿಯಲ್ಲಿರುವ ಅವರ ಮನೆಗೆ ಕಾಲಿಟ್ಟ ಕ್ಷಣವೇ, ನಾವು ವರ್ತಮಾನದಿಂದ ನಿಧಾನವಾಗಿ ಹಿಂದೆ ಜಾರಿದ ಅನುಭವವಾಗುತ್ತದೆ. ಹೊರಗಿನ ಜಗತ್ತಿನ ಗದ್ದಲ ಒಂದು ಕ್ಷಣಕ್ಕೆ ನಿಶ್ಶಬ್ದವಾಗುತ್ತದೆ. ಒಳಗೆ ಕಾಲಿಟ್ಟ ಕೂಡಲೇ ಗೋಡೆಯ ಮೇಲೆ ನೇತು ಹಾಕಿರುವುದು ಫೋಟೊಗಳಲ್ಲ; ನೆನಪುಗಳ ತುಣುಕುಗಳು. ಕಪಾಟುಗಳಲ್ಲಿ ಜೋಡಿಸಿರುವುದು ವಸ್ತುಗಳಲ್ಲ; ಇತಿಹಾಸದ ಪದರಗಳು. ಇದು ಮನೆ ಮಾತ್ರವಲ್ಲ; ಒಂದು ಕಾಲಘಟ್ಟವನ್ನು ಉಸಿರಾಡುತ್ತಿರುವ ಜೀವಂತ ಸಂಗ್ರಹಾಲಯ.

ಈ ಸಂಗ್ರಹದ ಹಿಂದೆ ಒಬ್ಬ ನಿವೃತ್ತ ಬ್ಯಾಂಕ್ ನೌಕರನ ಹವ್ಯಾಸ ಮಾತ್ರವಿಲ್ಲ; ಒಂದು ಪೀಳಿಗೆಯ ಬದುಕನ್ನು, ಅದರ ಸರಳತೆಯನ್ನು, ಅದರ ಶ್ರಮದ ಸೊಗಡನ್ನು ಉಳಿಸಬೇಕೆಂಬ ಹಂಬಲ ಇದೆ. ಮಂಗಳೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ರಘುನಾಥ ಪ್ರಭು, ತಮ್ಮ ತಂದೆಯಿಂದ ಬಂದ ನಾಣ್ಯ ಹಾಗೂ ಅಂಚೆಚೀಟಿ ಸಂಗ್ರಹದ ಆಸಕ್ತಿಯನ್ನು ಜೀವನದ ಭಾಗವನ್ನೇ ಮಾಡಿಕೊಂಡವರು.

ಕಾಲೇಜು ದಿನಗಳಲ್ಲಿ ಆರಂಭವಾದ ಈ ಹವ್ಯಾಸ, ಮದುವೆಯ ನಂತರ ತನ್ನದೇ ಮನೆ ಕಟ್ಟಿದಾಗ ಹೊಸ ತಿರುವು ಪಡೆದುಕೊಂಡಿತು. ಕಳೆದ ಇಪ್ಪತ್ತೆರಡು ವರ್ಷಗಳಿಂದ, ಅವರು ಹಳೆಯ ಕಾಲದ ದಿನನಿತ್ಯ ಬಳಕೆಯ ವಸ್ತುಗಳನ್ನು ಹುಡುಕುತ್ತಾ, ಊರು-ಗ್ರಾಮ ಸುತ್ತುತ್ತಾ, ಜನರ ಮನೆಗಳ ಮಡುಗಳಲ್ಲಿ ಮರೆತುಹೋಗಿದ್ದ ನೆನಪುಗಳನ್ನು ಕಲೆಹಾಕುತ್ತಾ ಬಂದಿದ್ದಾರೆ. ಇಂದು ಆ ಸಂಗ್ರಹವೇ ಅವರ ಮನೆಯನ್ನು ‘ಸಾಂಸ್ಕೃತಿಕ ದೇಗುಲ’ವನ್ನಾಗಿ ರೂಪಿಸಿದೆ. ಎಲ್ಲವೂ ಮೌನದಲ್ಲೇ ಮಾತನಾಡುವ ದೇವಾಲಯದಂತೆ.

ಈ ಮನೆಯಲ್ಲಿರುವ ವಸ್ತುಗಳ ವೈವಿಧ್ಯ ಅಚ್ಚರಿಗೊಳಿಸುವಂತದ್ದು–ಮಣ್ಣು, ಮರ, ಕಲ್ಲು, ಕಂಚು, ಹಿತ್ತಾಳೆ, ತಾಮ್ರ, ಕಬ್ಬಿಣ, ಬೆಳ್ಳಿ, ಗಾಜು, ಪಿಂಗಾಣಿ…ಅದರ ಜೊತೆ ಅಂಚೆಚೀಟಿಗಳು, ನಾಣ್ಯಗಳು, ನೋಟುಗಳು, ಹಳೆಯ ಪತ್ರಿಕೆಗಳು, ಅಪರೂಪದ ಸ್ಮರಣ ಸಂಚಿಕೆಗಳು…ಹಳೆಯ ಟೇಪ್ ರೆಕಾರ್ಡರ್, ಗ್ರಾಮಫೋನ್, ಲ್ಯಾಂಡ್ಲೈನ್ ಫೋನ್ಗಳ ಸಾಲು– ಒಂದೊಂದು ಕಾಲದ ಧ್ವನಿಗಳನ್ನು ಹೊತ್ತ ಸಾಧನಗಳು.

ಮನೆಯ ಮೇಲ್ಚಾವಣಿಯಲ್ಲೇ ಇನ್ನೊಂದು ಪ್ರಪಂಚ ತೆರೆಯುತ್ತದೆ–ಬಾವಿಯ ರಾಟೆ, ಏತ, ಉಪ್ಪು ಹಾಕುವ ಮರಾಯಿ, ಶಾವಿಗೆ ಮಣೆ, ಪೀಕದಾನಿ, ಪಿಂಗಾಣಿ ಭರಣಿಗಳು, ಇಡ್ಲಿ ಹಬೆ ಪಾತ್ರೆ, ಹಿತ್ತಾಳೆ-ಕಂಚಿನ ಪಾತ್ರೆಗಳು, ಚೆನ್ನೆಮಣೆ, ಅಡಿಕೆ ಕತ್ತರಿಗಳು…ಮಗುವಿಗೆ ಹಾಲುಣಿಸುವ ಗಾಜಿನ ಬಾಟಲಿಯಿಂದ ಹಿಡಿದು ಪೂಜಾ ಪರಿಕರಗಳವರೆಗೆ. ಇವುಗಳನ್ನು ನೋಡುತ್ತಾ ಹೋದಂತೆ, ಅವು ವಸ್ತುಗಳಾಗಿ ಕಾಣುವುದಿಲ್ಲ; ಬದುಕಿನ ಅವಿಭಾಜ್ಯ ಸಂಗಾತಿಗಳಂತೆ ಭಾಸವಾಗುತ್ತವೆ.

ಕಪಾಟಿನಲ್ಲಿರುವ ಗ್ರಾಮಫೋನ್ ಮೇಲೆ ಕೈ ತಾಕಿದರೆ ಕಿಶೋರ್ ಕುಮಾರ್ ಹಾಡುಗಳು ಕಿವಿಯಲ್ಲಿ ಮೊಳಗಿದಂತೆ. ಟೈಪ್ ರೈಟರ್ ನೋಡಿದರೆ, ಅದರ ಕೀಲಿಗಳ ನಡುವೆ ಸಿಕ್ಕಿಕೊಂಡಿರುವ ಅನೇಕ ಬರಹಗಳ ಶಬ್ದ ಕೇಳಿದಂತೆ. ಗೋಲಿ ಸೋಡಾ ಬಾಟಲು ಮತ್ತು ಅದನ್ನು ತಯಾರಿಸುವ ಯಂತ್ರ ನೋಡಿದರೆ, ಬಾಲ್ಯದ ಸಿಹಿ ರುಚಿ ಮತ್ತೆ ತುಟಿಗಳ ಮೇಲೆ ಮಿಂಚಿದಂತೆ.

ಇಂದಿನ ‘ಜೆನ್ ಝೀ’ ಪೀಳಿಗೆಗೆ ಅಪರಿಚಿತವಾಗಿರುವ ಈ ವಸ್ತುಗಳು, ಪ್ರತಿಯೊಂದೂ ಒಂದು ಬದುಕಿನ ಕಥೆಯನ್ನು ಹೊತ್ತಿವೆ. ಇಲ್ಲಿ ನಾವು ಮ್ಯೂಸಿಯಂನಲ್ಲಿ ನಿಂತಿಲ್ಲ, ನಮ್ಮದೇ ಪೂರ್ವಜರ ಮಡಿಲಲ್ಲಿ ಕುಳಿತಿರುವ ಅನುಭವ. ಪ್ರತಿ ವಸ್ತುವೂ ‘ನಾವು ಹೀಗೆ ಬದುಕುತ್ತಿದ್ದೆವು’ ಎಂದು ಮೌನವಾಗಿ ಹೇಳುವಂತೆ.

ಈ ಸಂಗ್ರಹದ ಹಿಂದೆ ಒಂದು ವಿಶೇಷ ಅಂಶವೂ ಇದೆ. ರಘುನಾಥ ಪ್ರಭು ವಸ್ತುಗಳನ್ನು ಖರೀದಿಸಿ ಕಲೆ ಹಾಕಿದವರು ಅಲ್ಲ; ಅವರು ಹುಡುಕಿಕೊಂಡು ಬಂದವರು. ಕೆಲವು ತಮ್ಮ ಮನೆಯಲ್ಲಿದ್ದವು, ಕೆಲವು ಪತ್ನಿಯ ಮನೆಯವು, ಇನ್ನೂ ಅನೇಕವು ನೆರೆಹೊರೆಯವರು, ಸ್ನೇಹಿತರು ನೀಡಿದವು. ಹೀಗೆ, ಒಂದು ಸಮುದಾಯವೇ ಈ ಸಂಗ್ರಹದ ಭಾಗವಾಗಿದೆ. ಒಂದೇ ಮನೆಯೊಳಗೆ ಅನೇಕ ಮನೆಗಳ ನೆನಪುಗಳು ಸೇರಿಕೊಂಡಂತಾಗಿದೆ.

ಇವರ ಮನೆ ಈಗ ಆಸಕ್ತರ ತಾಣವಾಗಿದೆ. ವಿದ್ಯಾರ್ಥಿಗಳು, ಸಂಶೋಧಕರು, ಸಂಗ್ರಹಾಸಕ್ತರು ಇಲ್ಲಿ ಭೇಟಿ ನೀಡಿ, ವಸ್ತುಗಳನ್ನು ನೋಡುವುದಷ್ಟೇ ಅಲ್ಲ, ಅವುಗಳ ಹಿಂದೆ ಇರುವ ಕಥೆಗಳನ್ನೂ ಅರಿಯುತ್ತಾರೆ. ಕೆಲವೊಮ್ಮೆ ಶಾಲೆ-ಕಾಲೇಜುಗಳ ಪ್ರದರ್ಶನಗಳಿಗೂ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. ಆದರೆ ಈ ಎಲ್ಲಕ್ಕೂ ಹಿಂದೆ ಯಾವುದೇ ವಾಣಿಜ್ಯ ಉದ್ದೇಶವಿಲ್ಲ. ಇದು ಹೃದಯದ ಕೆಲಸ.

‘ಹಳೆಯದು ನಿಧಾನವಾಗಿ ಅಳಿದು ಹೋಗುತ್ತಿದೆ. ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಿದ್ದ ಈ ವಸ್ತುಗಳನ್ನು ಉಳಿಸಬೇಕು ಅನ್ನೋದು ನನ್ನ ಉದ್ದೇಶ. ಹೊಸ ಪೀಳಿಗೆ ಇದನ್ನು ನೋಡಬೇಕು, ತಿಳಿದುಕೊಳ್ಳಬೇಕು‘ ಎಂದು ಸರಳವಾಗಿ ಹೇಳುತ್ತಾರೆ ರಘುನಾಥ ಪ್ರಭು.

ಈ ಸಂಗ್ರಹದ ಮತ್ತೊಂದು ಮಹತ್ವದ ಮುಖ, ಅದರ ಪಾಲನೆ. ಸಾವಿರಕ್ಕೂ ಹೆಚ್ಚು ವಸ್ತುಗಳನ್ನು ಕಾಪಾಡುವುದು, ಸ್ವಚ್ಛಗೊಳಿಸುವುದು, ಅವುಗಳ ಅಸ್ತಿತ್ವವನ್ನು ಉಳಿಸುವುದು ಸುಲಭವಲ್ಲ. ‘ಇದು ನಮಗೆ ಹವ್ಯಾಸ ಮಾತ್ರವಲ್ಲ, ಸಂಸ್ಕೃತಿಯ ಭಾಗ. ನಾವು ಇದರಲ್ಲಿ ಬದುಕುತ್ತಿದ್ದೇವೆ. ಅದರಲ್ಲಿ ಒಂದು ವಿಶಿಷ್ಟ ನೆಮ್ಮದಿ ಇದೆ’ ಎನ್ನುತ್ತಾರೆ ಪತ್ನಿ ರೇಖಾ ಪ್ರಭು.

ಈ ಮನೆಯ ವಿಶೇಷತೆ ಅಲ್ಲಿ ಮುಗಿಯುವುದಿಲ್ಲ. ಇವರು ವಸ್ತುಗಳನ್ನು ಸಂಗ್ರಹಿಸಿ ಬೇರೆಡೆ ವಾಸಿಸುವವರಲ್ಲ. ಅವರು ಈ ವಸ್ತುಗಳ ಮಧ್ಯೆಯೇ ದಿನನಿತ್ಯದ ಬದುಕು ನಡೆಸುತ್ತಾರೆ. ಹೀಗಾಗಿ, ಇಲ್ಲಿ ಸಂಗ್ರಹವೂ ಬದುಕು, ಬದುಕೂ ಸಂಗ್ರಹ.

ಮನೆ ಬಿಟ್ಟು ಹೊರಬರುವಾಗ, ಕೈಯಲ್ಲಿ ಏನೂ ಇರದು. ಆದರೆ ಮನಸ್ಸು ತುಂಬಿಕೊಂಡಿರುತ್ತದೆ. ಕಾಲದ ಸ್ಪರ್ಶ, ನೆನಪಿನ ತೂಕ, ಸಂಸ್ಕೃತಿಯ ಮೌನ ಗಂಭೀರತೆ. ಇದು ನಮಗೆ ಒಂದು ಸಣ್ಣ ಆದರೆ ಗಂಭೀರ ಪಾಠವನ್ನು ಹೇಳುತ್ತದೆ: ಹಳೆಯದು ಕೇವಲ ಹಳೆಯದಾಗುವುದಿಲ್ಲ,ಅದು ಉಳಿದಿದ್ದರೆ, ಅದು ಸಂಸ್ಕೃತಿ.v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.