ಮೇಲುಕೋಟೆ: ರಾಮಾನುಜಾಚಾರ್ಯರ 1009ನೇ ತಿರು ನಕ್ಷತ್ರ ಮಹೋತ್ಸವ ಅಂಗವಾಗಿ ಗುರುವಾರ ರಾತ್ರಿ ಬಂಗಾರದ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು.

ಏ.13ರಿಂದಲೇ ಆರಂಭವಾಗಿರುವ 10 ದಿನಗಳ ಮಹೋತ್ಸವದಲ್ಲಿ ಪ್ರತಿನಿತ್ಯ ರಾಮಾನುಜಾಚಾರ್ಯರ ಮೂರ್ತಿಗೆ ವೈವಿಧ್ಯಮಯ ಅಲಂಕಾರಗಳು ನಡೆಯುತ್ತಿದ್ದು, ಬುಧವಾರ ರಾತ್ರಿ ಸೂರ್ಯಮಂಡಲ ವಾಹನೋತ್ಸವ ಜರುಗಿತು. ಗುರುವಾರ ಮುಂಜಾನೆ ಚಂದ್ರಮಂಡಲ ವಾಹನೋತ್ಸವ, ರಾತ್ರಿ ಬಂಗಾರ ಪಲ್ಲಕ್ಕಿ ಉತ್ಸವ ರಾಜಬೀದಿಯಲ್ಲಿ ವೈಭವದಿಂದ ಜರುಗಿತು.

ಚಲುವನಾರಾಯಣ ಸ್ವಾಮಿ ದೇವಾಲಯದ ಕೈಂಕರ್ಯಗಳು 10 ದಿವಸವೂ ಬೆಳಿಗ್ಗೆ 5.30ಕ್ಕೆ ಆರಂಭವಾಗಿದ್ದು, ಪ್ರತಿದಿನ ಬೆಳಿಗ್ಗೆ 8ಕ್ಕೆ ವಿವಿಧ ವಾಹನೋತ್ಸವಗಳು ದಿವ್ಯಪ್ರಬಂಧ ಪಾರಾಯಣ ಮಂಗಳವಾದ್ಯದೊಡನೆ ಚತುರ್ವಿಧಿಯಲ್ಲಿ ನಡೆಯುತ್ತಿದೆ. ವಾಹನೋತ್ಸವ ಮಂಟಪದಲ್ಲಿ ತಿರುವಾರಾಧನೆ ಮತ್ತು ಗೋಷ್ಠಿ ನಡೆಯುತ್ತಿದೆ.

ರಾಮಾನುಜಾಚಾರ್ಯರ ಮಹಾರಥೋತ್ಸವ ಏ.21ರಂದು ನಡೆಯಲಿದ್ದು, 22ರಂದು ತಿರುನಕ್ಷತ್ರ ಮಹೋತ್ಸವ ನಡೆಯಲಿದೆ. 17ರಂದು ಅಶ್ವವಾಹನೋತ್ಸವ ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ, 18ರಂದು ಶ್ರೀಪೆಂಬುದೂರಿನ ಮಾಲೆ ಮರ್ಯಾದೆ ಸಮರ್ಪಣೆ, ರಾತ್ರಿ ಗೋವಿಂದ ರಾಜಮುಡಿ ಉತ್ಸವ ನಡೆಯಲಿದೆ.

19ರಂದು ಅಶ್ವವಾಹನೋತ್ಸವ, 20ರಂದು ಗಜವಾಹನೋತ್ಸವ ನಡೆಯಲಿದೆ. 22ರಂದು ಮಧ್ಯಾಹ್ನ 10ಕ್ಕೆ ದ್ವಾದಶಾರಾಧನೆಯೊಂದಿಗೆ ರಾಮಾನುಜಾಚಾರ್ಯರಿಗೆ ಅಭಿಷೇಕ ನಡೆಯಲಿದೆ. ಸಂಜೆ ಶ್ರೀಗಂಧದ ಅಲಂಕಾರ, ರಾತ್ರಿ ಚೆಲುವನಾರಾಯಣಸ್ವಾಮಿಗೆ ದಶಾವತಾರ ಅಲಂಕಾರ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-40-551169796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.