ಮೂಡುಬಿದಿರೆ: ಕನ್ನಡ ಮಾತೃಭಾಷೆಯಾಗಿ ರಾಜ್ಯ ಭಾಷೆಯಾಗಿರಬಹುದು. ಆದರೆ, ಹಿಂದಿ ರಾಷ್ಟ್ರದ ಭಾಷೆ ಮತ್ತು ಇಂಗ್ಲಿಷ್ ಅಂತರರಾಷ್ಟ್ರೀಯ ಸಂವಹನಕ್ಕೆ ಅಗತ್ಯವಿರುವ ಭಾಷೆಯಾಗಿದೆ. ಹಾಗಾಗಿ ಕನ್ನಡದ ಪ್ರೀತಿಯ ಜತೆಗೆ ತ್ರಿಭಾಷಾ ಸೂತ್ರವನ್ನು ಗೌರವಿಸಿ ಅನುಸರಿಸುವ ಕಾಳಜಿ ನಮ್ಮದಾಗಬೇಕು ಎಂದು ಮುಖಂಡ ಹರಿಕೃಷ್ಣ ಪುನರೂರು ಹೇಳಿದರು.

ಕಾಂತಾವರ ಕನ್ನಡ ಸಂಘದ ವಚನ ವೇದಿಕೆಯಲ್ಲಿ ಸಂಘದ ಸುವರ್ಣ ಮಹೋತ್ಸವ ಸಮಾರೋಪದ ಅಧ್ಯಕ್ಷತೆ ವಹಿಸಿದ್ದ ಅವರು ಡಾ.ಬಿ.ಜನಾರ್ದನ ಭಟ್ ಅವರು ಬರೆದ ‘ಸುವರ್ನಾಕ್ಷರದ ಇತಿಹಾಸ ಕನ್ನಡ ಸಂಘ ಕಾಂತಾವರ’ ಅನಾವರಣಗೊಳಿಸಿ ಮಾತನಾಡಿದರು.

ಡಾ.ನಾ.ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಕನ್ನಡ ಸಂಘದ ಮೂಲಕ ಹುಟ್ಟಿದ ಅಲ್ಲಮ ಪ್ರಭು ಪೀಠದ ಆಶ್ರಯಲದಲ್ಲಿ ಗುರುಕುಲ ಮಾದರಿಯ ಶಿಕ್ಷಣ ಸಂಸ್ಥೆ ಕಾಂತಾವರ ಪರಿಸರದಲ್ಲಿ ಶೈಕ್ಷಣಿಕವಾಗಿ ಹೊಸ ಚೈತನ್ಯ ಮೂಡಿಸಿರುವುದು ಧನ್ಯತೆಯ ಕ್ಷಣವಾಗಿದೆ ಎಂದರು.

ಕೃತಿಕಾರ ಡಾ.ಬಿ.ಜನಾರ್ದನ ಭಟ್ ಮಾತನಾಡಿ, ಕನ್ನಡ ಸಂಘದ ಐದು ದಶಕಗಳ ಸಾಂಸ್ಕೃತಿಕ ಕ್ರಾಂತಿಯನ್ನು ದಾಖಲಿಸುವ ಪ್ರಯತ್ನ ಈ ಕೃತಿಯಲ್ಲಿ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಆಂಗ್ಲ ಅನುವಾದಿತ ಕೃತಿಯನ್ನೂ ಹೊರತರಲಾಗುವುದು ಎಂದರು.

ಉಡುಪಿ ಸಂಸ್ಕೃತಿ ಪ್ರತಿಷ್ಠಾನದ ವಿಶ್ವನಾಥ ಶೆಣೈ, ಉದ್ಯಮಿ ಕೆ.ಶ್ರೀಪತಿ ಭಟ್ ಅತಿಥಿಗಳಾಗಿದ್ದರು.

ಕಾಂತಾವರ ಶಾಲೆ ಮಕ್ಕಳು ನಾಡಗೀತೆ ಹಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ಸದಾನಂದ ಪೂಜಾರಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-29-1424352030

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.