ಮುದ್ದೇಬಿಹಾಳ: ‘ಕಾವ್ಯ ರಚಿಸುವವರಿಗಿಂತಲೂ ಕಾವ್ಯವನ್ನು ಓದುವವರಿಗೆ ಹೆಚ್ಚು ಮಹತ್ವ ಕೊಡಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.

ಅವರು ಪಟ್ಟಣದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಭೋಜರಾಜ ಬಿರಾದಾರ ಸಂಸ್ಮರಣೆ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕನ್ನಡ ಸಾಹಿತ್ಯವನ್ನು ಮಹಾನ ವ್ಯಕ್ತಿಗಳು ಆರಂಭಿಸಿದ್ದಾರೆ. ಅಂತಹ ಸಾಹಿತ್ಯವನ್ನು ನಾವು ನೀವೆಲ್ಲರೂ ಉಳಿಸಿ, ಬೆಳೆಸುವ ಕೆಲಸ ಮಾಡೋಣ, ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ನಿಧಿ ಕಾರ್ಯಕ್ರಮ ಹೆಚ್ಚಾಗಿ ನಡೆಯಲಿ’ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಬಿ.ದಮ್ಮೂರಮಠ ಉಪನ್ಯಾಸವನ್ನು ನೀಡಿ, ‘ಅವತ್ತು ಕನ್ನಡ ಸಾಹಿತ್ಯ ಪರಿಷತ್ತು ನಾಲ್ಕು ಜನರಿಂದ ಆರಂಭವಾಗಿ ಇವತ್ತು ಮೂರು ಲಕ್ಷಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದೆ. ಅಂತಹ ಪರಿಷತ್ತಿನಿಂದ ಈ ದತ್ತಿ ಹಮ್ಮಿಕೊಂಡಿದ್ದಾರೆ. ಈ ದತ್ತಿ ಕಾರ್ಯಕ್ರಮ ಸ್ವಾತಂತ್ರ್ಯ ಕಾಲದಲ್ಲಿ ಇದ್ದ ಪ್ರಮುಖರ ಸ್ಮರಣೆಯಾಗಿದೆ. ಇವತ್ತು ಗ್ರಾಮೀಣ ಪ್ರದೇಶಗಳಲ್ಲಿ ಅದ್ಭುತ ಕಲಾವಿದರು ಇದ್ದಾರೆ. ನಾಟಿ ವೈದ್ಯರು ಇದ್ದಾರೆ ಅಂತವರನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ’ ಎಂದರು.

ಬಾಪುಗೌಡ ಪಾಟೀಲ, ಲಿಂಗೈಕ್ಯರ ಜೊತೆಯಲ್ಲಿನ ಒಡನಾಟ ಅವರ ಕಾರ್ಯ ವೈಖರಿ ಕುರಿತು ಮಾತನಾಡಿದರು.

ಶ್ರೀಶೈಲ ಎಸ್.ಕೆ ದತ್ತಿದಾನಿಗಳ ಪರಿಚಯ ಮಾಡಿದರು. ಚನ್ನಬಸಪ್ಪ ಬಿರಾದಾರ, ಬಸಪ್ಪ ಅಡಿವೆಪ್ಪ ಚೌಧರಿ, ಸಂಗನಬಸಮ್ಮ ಚೌಧರಿ, ಬಸಮ್ಮ ಶ್ರೀಶೈಲ ಗಂಗನಳ್ಳಿ, ಇವರ ದತ್ತಿ ಸ್ಮರಣೆ ಜರುಗಿತು.

ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಚಿಂತಕ ಅಬ್ದುಲ್ ರೆಹಮಾನ್ ಬಿದರಕುಂದಿ, ಚಂದ್ರಶೇಖರ ನಾಗರಾಳ ಮಾತನಾಡಿದರು. ವೈ.ಎಚ್.ವಿಜಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ನಿರ್ದೇಶಕರಿಗೆ, ನೂತನ ಕರ್ನಾಟಕ ಬ್ಯಾಂಕ್ ಅಧ್ಯಕ್ಷರಿಗೆ, ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಿಗೆ ಗೌರವ ಸನ್ಮಾನ ನೆರವೇರಿಸಿದರು.

ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಪ್ರಭುರಾಜ ಕಲಬುರಗಿ, ಸಂಗಮೇಶ ಶಿವಣಗಿ, ಎಂ.ಬಿ.ಗುಡಗುಂಟಿ, ಜೆ.ಡಿ.ಮುಲ್ಲಾ, ಸಿದ್ದನಗೌಡ ಬಿಜ್ಜೂರ, ಎಸ್.ಎ.ಬೇವಿನಗಿಡದ, ಅಶೋಕ ಮನಿ, ಉದಯ ರಾಯಚೂರು, ಶ್ರೀಶೈಲ ಪೂಜಾರಿ, ಸದಾಶಿವ ಮಠ, ಸಂಗಪ್ಪ ಮೇಲಿನಮನಿ, ಹುಸೇನ ಮುಲ್ಲಾ, ಹುಲಗೇಶ ಈಳಗೇರ ಸೇರಿದಂತೆ ಮಹಿಳೆಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-26-1894627026

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.