ಪಡುಬಿದ್ರಿ: ಪಲಿಮಾರು ಶ್ರೀಗಳ ಸಪ್ತತಿ ಸಂಭ್ರಮ ಅಂಗವಾಗಿ ಪಲಿಮಾರು ಮಹಾ ಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಬುಧವಾರ ನಡೆದ ರಾಶಿಪೂಜಾ ಮಹೋತ್ಸವದಲ್ಲಿ ದೇವಳದ ಪ್ರಧಾನ ಅರ್ಚಕ ಪಿ.ಆರ್.ಶ್ರೀನಿವಾಸ ಉಡುಪರಿಗೆ ರಾಜರಾಜೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಮಾತನಾಡಿ, ದೇವತೆ ಗಳನ್ನು ಸಂತುಷ್ಟರಾಗಿಸಿದರೆ ಸಂಕಷ್ಟಗಳು ದೂರವಾಗಿ ಸಮೃದ್ಧಿ ಉಂಟಾಗುತ್ತದೆ. ಉಪಕಾರ ಸ್ಮರಣೆಯಿಂದ ಜೀವನ ಚೆನ್ನಾಗಿ ನಡೆಯು ತ್ತದೆ ಎಂದರು.

ಭೂಲೋಕದವರು ದೇವಲೋಕದವರನ್ನು ಗೌರವಿಸಿದರೆ ದೇವ ಲೋಕದವರು ಭೂಲೋಕದವರನ್ನು ಸಂತೋಷಿಸುತ್ತಾರೆ. ದೇವರಿಗೆ ರಾಶಿಪೂಜೆ ಮಾಡಿಸಿದರೆ ನಮಗೆ ರಾಶಿ ರಾಶಿ ಸಂಪತ್ತು ನೀಡುತ್ತಾರೆ ಎಂದು ಸ್ವಾಮೀಜಿ ನುಡಿದರು.

ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ರಾಶಿ ಪೂಜೆ ಕೇವಲ ಒಂದು ದಿನ ಪೂಜೆಯಾಗಬಾರದು, ನಿತ್ಯ ನಿರಂತರವಾಗಬೇಕು ಎಂದರು.

ಪಲಿಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪಲಿಮಾರು ಮಠದ ಆರಾಧ್ಯ ದೇವರಾದ ರಾಮದೇವರಿಗೆ ಗ್ರಾಮಸ್ಥರಿಂದ ನಾಣ್ಯ ತುಲಾಭಾರ ನೆರವೇರಿಸಲಾಯಿತು. ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಅರ್ಚಕ ತಿರುಮಲ ಆಚಾರ್ ಇದ್ದರು. ಯೋಗದೀಪಿಕಾ ಗುರುಕುಲದ ಪ್ರಾಂಶುಪಾಲ ಶಂಕರನಾರಾಯಣ ಭಟ್ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-28-947887308

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.