ರಾಯಚೂರು: ‘ಬಹು ಸಂಸ್ಕೃತಿಯೇ ಭಾರತದ ನಿಜವಾದ ಆಸ್ತಿ ಮತ್ತು ಶಕ್ತಿ ಇತಿಹಾಸದುದ್ದಕ್ಕೂ ವಿವಿಧ ಭಾಷೆ, ಧರ್ಮ, ಆಚಾರ, ವಿಚಾರಗಳನ್ನು ಒಳಗೊಂಡು ಬಹುತ್ವದಲ್ಲಿ ಏಕತೆಯನ್ನು ಸಾಧಿಸಿದೆ’ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ.ಆರ್. ದುರ್ಗಾದಾಸ್ ಅಭಿಪ್ರಾಯಪಟ್ಟರು.

ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಅಖಿಲ ಭಾರತ ವಿಮಾ ನೌಕರರ ಸಂಘದ ಅಮೃತ ಮಹೋತ್ಸವ ಪ್ರಯುಕ್ತ ವಿಮಾ ನೌಕರರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ‘ಸಂವಿಧಾನ -ಒಂದು ಜೀವಂತ ದಾಖಲೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ದೇಶದಲ್ಲಿ ಒಂದು ಭಾಷೆ, ಒಂದು ಚುನಾವಣೆ, ಒಂದು ಧರ್ಮ ಎಂದು ಬಿಂಬಿಸಲಾಗುತ್ತಿದೆ.ಒಂದು ಭಾಷೆ, ಒಂದು ಧರ್ಮ ಎನ್ನುವ ಕಲ್ಪನೆ ಭಾರತದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ವೈವಿಧ್ಯತೆಯನ್ನು ಗೌರವಿಸಿ, ಎಲ್ಲ ಸಂಸ್ಕೃತಿಗಳನ್ನು ಒಳಗೊಂಡು ಸಾಗುವುದೇ ಪ್ರಜಾಪ್ರಭುತ್ವದ ಆಶಯವಾಗಬೇಕು’ ಎಂದು ಹೇಳಿದರು.

‘ಸಂವಿಧಾನವೂ ಬಹುತ್ವವನ್ನು ಎತ್ತಿ ಹಿಡಿದಿದೆ. ಸಾಮಾಜಿಕ ಸೌಹಾರ್ದ ಮತ್ತು ರಾಷ್ಟ್ರೀಯ ಐಕ್ಯತೆಗೆ ಬಹು ಸಂಸ್ಕೃತಿಯ ಅಂಗೀಕಾರವೇ ಅಡಿಪಾಯವಾಗಿದೆ’ ಎಂದರು.

‘ಇತಿಹಾಸವನ್ನು ಗಮನಿಸಿದರೆ ಭಾರತವು ಬಹು ಸಂಸ್ಕೃತಿಯನ್ನು ಅನುಸರಿಸಿಕೊಂಡು ಬಂದಿದೆ. ಸಂವಿಧಾನವು ಭಾರತೀಯ ಜನತೆಯ ಪವಿತ್ರ ಗ್ರಂಥ. ಮನುಷ್ಯರು ಮನುಷ್ಯರಿಗಾಗಿ ಬರೆದ ಗ್ರಂಥವೇ ಸಂವಿಧಾನ. ಇದು ಜೀವಂತ ದಾಖಲೆ ಅಂಬೇಡ್ಕರ್ ಅವರು ತಾವು ಪಡೆದ ಪದವಿಗಳು, ಮಾಡಿದ ಸಂಶೋಧನೆಗಳಿಂದ ಉನ್ನತ ಹುದ್ದೆ ಪಡೆದು ಆರಾಮವಾಗಿ ಜೀವನ ನಡೆಸಬಹುದಿತ್ತು. ಆದರೆ ಶೋಷಿತರ ಅವಮಾನ ಮತ್ತು ಅಂದಿನ ಜನತೆಯ ಜೋತು ಬಿದ್ದ ಕಟ್ಟುಪಾಡುಗಳಿಂದ ಹೊರ ತರುವಲ್ಲಿ ಶ್ರಮಿಸಿದ್ದಾರೆ’ ಎಂದು ವಿವರಿಸಿದರು.

ಮೈಸೂರು ವಿಭಾಗದ ವಿಮಾ ಕಾರ್ಪೊರೇಷನ್ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್. ವಿಜಯಕುಮಾರ ಮಾತನಾಡಿದರು.

ವಿಮಾ ನೌಕರರ ಸಂಘ ರಾಯಚೂರು ವಿಭಾಗದ ಅಧ್ಯಕ್ಷ ಎಂ. ಶರಣಗೌಡ, ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ರವಿ, ರಾಘವೇಂದ್ರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-32-691302069

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.