ರಾಯಚೂರು: ‘ಭಾರತದ ಬಹು ಸಂಸ್ಕೃತಿಯ ಅಸ್ತಿತ್ವ ಉಳಿಯಬೇಕಾದರೆ ಬಂಡಾಯದ ಧ್ವನಿ ಪ್ರತಿಯೊಬ್ಬರೊಳಗೂ ಜೀವಂತವಾಗಿರಬೇಕು. ಇಲ್ಲವಾದರೆ ಏಕಸಂಸ್ಕೃತಿಯ ಪ್ರಾಬಲ್ಯ ಹೆಚ್ಚಾಗಿ ಸಂವಿಧಾನಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗುವ ಭೀತಿ ಇದೆ’ ಎಂದು ಹಿರಿಯ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಹೇಳಿದರು. ಇಲ್ಲಿಯ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದಿಂದ ಭಾನುವಾರ ಬಂಡಾಯ ಸಾಹಿತ್ಯ ಹೊಸತಲೆಮಾರು ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬಂಡಾಯ ಸಾಹಿತ್ಯಕ್ಕೆ ಹೊಸ ತಲೆಮಾರು ಸ್ಪಂದಿಸಬೇಕಿದ್ದು, ಯುವ ಬರಹಗಾರರು ಸಮಾಜದ ವಾಸ್ತವತೆ, ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ತಮ್ಮ ಬರವಣಿಗೆಯಲ್ಲಿ ಪ್ರತಿಭಟನೆಯ ಧ್ವನಿಯನ್ನು ಮೂಡಿಸಬೇಕು’ ಎಂದು ಸಲಹೆ ನೀಡಿದರು. ‘ಹಿಂದಿನ ಕಾಲದ ಬಂಡಾಯ ಸಾಹಿತ್ಯವು ಸಮಾಜ ಪರಿವರ್ತನೆಗೆ ಮಹತ್ವದ ಪಾತ್ರ ವಹಿಸಿತ್ತು. ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ ಅವರಂತಹ ದಿಗ್ಗಜರ ಬರಹಗಳು ಸಮಾಜದಲ್ಲಿ ಚಿಂತನೆ ಹುಟ್ಟಿಸಿದ್ದವು. ಆ ಮಟ್ಟದ ಸಾಹಿತ್ಯ ಮತ್ತೆ ಈ ನೆಲದಲ್ಲಿ ಮೂಡಬೇಕು’ ಎಂದು ಹೇಳಿದರು. ‘ಬಂಡಾಯ ಸಾಹಿತ್ಯದ ಬೇರುಗಳು ರಾಯಚೂರು ನೆಲದಲ್ಲಿಯೇ ಬಿತ್ತಲ್ಪಟ್ಟಿವೆ. ಜನಪರ ಸಾಹಿತ್ಯ ಮತ್ತು ಜನವಿರೋಧಿ ಸಾಹಿತ್ಯವನ್ನು ಗುರುತಿಸುವ ಸಾಮರ್ಥ್ಯ ಸಮಾಜದಲ್ಲಿ ಬೆಳೆಯಬೇಕು’ ಎಂದರು. ‘ರಾಜಕೀಯವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರೆ ಬಂಡಾಯ ಸಾಹಿತ್ಯದ ಅಗತ್ಯವೇ ಇರಲಿಲ್ಲ. ಆದರೆ ರಾಜಕೀಯ ವ್ಯವಸ್ಥೆ ಸೂಕ್ತ ನಿರ್ಧಾರ ಕೈಗೊಳ್ಳದ ಕಾರಣ ಸಾಹಿತ್ಯದ ಹೋರಾಟ ಇನ್ನೂ ಅಗತ್ಯವಿದೆ’ ಎಂದು ತಿಳಿಸಿದರು. ‘ಯುವಜನತೆ ಮೊಬೈಲ್ಗಳಲ್ಲಿ ಮುದುಕರು ಕ್ರೀಡಾಂಗಣದಲ್ಲಿ ಇದು ಇಂದಿನ ವಸ್ತುಸ್ಥಿತಿ. ಸಮಾಜಮುಖಿ ಚಿಂತನೆಯ ಕುಂಠಿತತೆ ಕಾಣುತ್ತಿದ್ದು ಕ್ರಾಂತಿ ಆಗಬೇಕಿದೆ. ಕ್ರಾಂತಿ ಒಂದೇ ದಿನದಲ್ಲಿ ಬರುವುದಿಲ್ಲ; ನಿರಂತರ ಹೋರಾಟ, ಚಿಂತನೆ ಮತ್ತು ಬರಹಗಳ ಮೂಲಕ ಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದು ಹೇಳಿದರು. ಸಾಹಿತಿ ಟಿ.ಎಸ್. ಗೊರವರ ಮಾತನಾಡಿ, ‘ನವೋದಯ ಸಾಹಿತ್ಯವು ಕೇವಲ ಪ್ರಕೃತಿ ಪ್ರೇಮಕ್ಕೆ ಸೀಮಿತವಾಗಿರಲಿಲ್ಲ. ಅದು ಸಮಾಜದ ಅಸಮಾನತೆ, ಜಾತಿ ಪದ್ಧತಿ, ವಿಧವೆಯರ ಸ್ಥಿತಿ, ರೈತರ ಜೀವನ ಸೇರಿದಂತೆ ಹಲವು ಸಾಮಾಜಿಕ ಪ್ರಶ್ನೆಗಳನ್ನು ಒಳಗೊಂಡಿತ್ತು’ ಎಂದು ತಿಳಿಸಿದರು. ‘ಕುವೆಂಪು ಅವರ ನೇಗಿಲಯೋಗಿ, ದ.ರಾ. ಬೇಂದ್ರೆ ಅವರ ಕಾವ್ಯಗಳು, ಕಾರಂತರ ಚೋಮನ ದುಡಿ ಸೇರಿದಂತೆ ಅನೇಕ ಸಾಹಿತ್ಯ ಕೃತಿಗಳು ದಲಿತರು, ಬಡವರು ಮತ್ತು ಶ್ರಮಜೀವಿಗಳ ಬದುಕಿನ ಪ್ರತಿಬಿಂಬವಾಗಿವೆ’ ಎಂದು ವಿವರಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿ.ಬಿ.ಚಿಲ್ಕರಾಗಿ, ಹಿರಿಯ ಸಂಶೋಧಕ ಗವಿಸಿದ್ದಪ್ಪ ಪಾಟೀಲ, ರಾಜಶೇಖರ ಹಳೆಮನೆ, ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಪ್ರವೀಣ ರೆಡ್ಡಿ ಗುಂಜಹಳ್ಳಿ, ಶ್ರೀನಿವಾಸ ಮರಡ್ಡಿ, ಬಾಬು ಭಂಡಾರಿಗಲ್, ಭಗತ್ ನಿಜಾಮಕಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎ.ರಂಗಣ್ಣಪಾಟೀಲ, ಹೋರಾಟಗಾರ ರಾಘವೇಂದ್ರ ಕುಷ್ಟಗಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-32-2117270010

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.