ರಾಮನಗರ: ‘ಕಲೆಗಳನ್ನೇ ನಂಬಿ ಬದುಕುತ್ತಿರುವ ಕಲಾವಿದರು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ. ಮನುಷ್ಯನನ್ನು ಸುಸಂಸ್ಕೃತನನ್ನಾಗಿ ರೂಪಿಸುವ ಶಕ್ತಿ ಕಲೆಗಿದೆ. ಅಂತಹ ಕಲೆ ಮತ್ತು ಕಲಾವಿದರಿಗೆ ಹೆಚ್ಚಿನ ಉತ್ತೇಜನ ಮತ್ತು ನೆರವು ಅಗತ್ಯ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ಹಿ.ಚಿ. ಬೋರಲಿಂಗಯ್ಯ ಹೇಳಿದರು.

ನಗರದ ಜಾನಪದ ಲೋಕದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಹೊನ್ನಿಗನಹಳ್ಳಿಯ ತರಂಗ ಜಾನಪದ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾನಪದವು ಎಲ್ಲಾ ಕಲೆಗಳ ತಾಯಿಬೇರು. ಜನಪದ ಕಲೆಯು ಮನುಷ್ಯನು ಶಾಂತಿ ಮತ್ತು ನೆಮ್ಮದಿಯಿಂದ ಜೀವನ ನಡೆಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಜನಪದ ಕಲೆ– ಸಂಸ್ಕೃತಿಯನ್ನು ಯುವ ಪೀಳಿಗೆ ಉಳಿಸಿ ಬೆಳೆಸಬೇಕಿದೆ. ಅವು ಉಳಿದರೆ ನಮ್ಮ ಸಂಸ್ಕೃತಿ ಉಳಿದಂತೆ’ ಎಂದು ಅಭಿಪ್ರಾಯಪಟ್ಟರು.

‘ಕೆಲವೇ ಜನಪದ ಕಲೆಗಳನ್ನು ಬಿಟ್ಟರೆ ಉಳಿದ ಕಲೆಗಳು ಆಧುನಿಕ ಮನರಂಜನೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿವೆ. ಅಂತಹ ಕಲೆಗಳನ್ನು ಮತ್ತು ಕಲಾವಿದರಿಗೆ ಸಂಘ–ಸಂಸ್ಥೆಗಳು ಹಾಗೂ ಸರ್ಕಾರಗಳು ನೆರವಾಗಬೇಕು. ಕಲೆಗಳ ಉಳಿವಿಗೆ ಶ್ರಮಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಕಲೆ ಮತ್ತು ಕಲಾವಿದರನ್ನು ಪುಸ್ತಕ ಅಥವಾ ವಿಡಿಯೊದಲ್ಲಷ್ಟೇ ಕಾಣಲು ಸಾಧ್ಯವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಮಾತನಾಡಿ, ‘ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಮುಖ್ಯ ಭಾಗವಾಗಿವೆ. ಮನುಷ್ಯನನ್ನು ಉಲ್ಲಾಸವಾಗಿಡುವ ಜೊತೆಗೆ ಸಮಾಜವನ್ನು ಜಾಗೃತಿಗೊಳಿಸುವ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

ಪರಿಷತ್ತಿನ ಜಿಲ್ಲಾಧ್ಯಕ್ಷ ಸು.ತ. ರಾಮೇಗೌಡ, ‘ಬೆಂಗಳೂರು ದಕ್ಷಿಣ ಜಿಲ್ಲೆಯು ಜಾನಪದ ಕಲಾವಿದರ ತವರೂರು. ಅತಿ ಹೆಚ್ಚು ಜಾನಪದ ಕಲಾಪ್ರಕಾರದ ಕಲಾವಿದರನ್ನು ಹೊಂದಿರುವು ಜಿಲ್ಲೆಯ ಹೆಗ್ಗಳಿಕೆ. ಗ್ರಾಮೀಣ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ಜನಪದ ಕಲೆಗಳನ್ನು ಹೊತ್ತೊಯ್ದು ಪ್ರಚಾರ ಮಾಡಿದ ಕೀರ್ತಿ ಜಿಲ್ಲೆಯವರಿಗೆ ಸಲ್ಲುತ್ತದೆ’ ಎಂದು ಗಮನ ಸೆಳೆದರು.

2024–25ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜನಪದ ಗಾಯಕ ಹಾಗೂ ಟ್ರಸ್ಟ್ ಕಾರ್ಯದರ್ಶಿ ಬಿ. ಸಿದ್ದರಾಜಯ್ಯ ಅವರನ್ನು ಗಣ್ಯರು ಸನ್ಮಾನಿಸಿದರು. ಕಲಾವಿದ ರೇಣುಕಾ ಪ್ರಸಾದ್, ಹಿರಿಯ ಪತ್ರಕರ್ತ ಚಲುವರಾಜು ಸೇರಿದಂತೆ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. ಕಲಾವಿದರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಕಂಸಾಳೆ, ಪೂಜಾ ಕುಣಿತ, ತಮಟೆ ವಾದನ, ಕೀಲು ಕುದುರೆ, ಪಟ ಕುಣಿತ ಕಲಾವಿದರ ಪ್ರದರ್ಶನ ಗಮನ ಸೆಳೆಯಿತು. ಸುಗಮ ಸಂಗೀತ, ಜಾನಪದ ಗಾಯನ, ತತ್ವಪದ, ಸೋಬಾನೆ ಕಲಾವಿದರ ಗಾಯನ ಮನಸೂರೆಗೊಂಡಿತು. ಟ್ರಸ್ಟ್ ಅಧ್ಯಕ್ಷ ಎಸ್. ಮರಿಯಪ್ಪ ಸೇರಿದಂತೆ ಹಲವರು ಇದ್ದರು. ಚಂದನ್ ನಿರೂಪಣೆ ಮಾಡಿದರು. ಅಭಿನಂದನ್ ಎಚ್.ಎಸ್ ಪ್ರಾರ್ಥನೆ ಹಾಡಿದರು. ಶೇಖರ್ ವಂದನಾರ್ಪಣೆ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-14-1821839287

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.