ಸಾಗರ: ಗಮಕ ಕಲೆಯನ್ನು ಪ್ರಸ್ತುತಪಡಿಸುವ ಗಮಕಿಗಳಲ್ಲಿ ಶಿಸ್ತುಬದ್ಧ ನಡವಳಿಕೆ ಇದ್ದಾಗ ಮಾತ್ರ ಕಲೆಯ ಮೌಲ್ಯ ಹೆಚ್ಚುತ್ತದೆ ಎಂದು ಗಮಕಿ ರಾಜಾರಾಮಮೂರ್ತಿ ಹೊಸಹಳ್ಳಿ ಹೇಳಿದರು.

ಸಮೀಪದ ವರದ ಪುರದ ಶ್ರೀಧರಾಶ್ರಮದಲ್ಲಿ ಮಲೆನಾಡು ಗಮಕ ಕಲಾ ಟ್ರಸ್ಟ್, ಶ್ರೀಧರ ಸೇವಾ ಮಹಾಮಂಡಲ ಭಾನುವಾರ ಏರ್ಪಡಿಸಿದ್ದ ಸಾಗರ ಪ್ರಾಂತ್ಯ ಪ್ರಥಮ ಗಮಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕಾವ್ಯ ರಚನೆ ಆರಂಭವಾದಾಗಿನಿಂದಲೇ ಗಮಕ ಕಲೆ ಚಾಲ್ತಿಯಲ್ಲಿದೆ ಎಂಬ ಸಂಗತಿಯ ಉಲ್ಲೇಖ ವಾಲ್ಮೀಖಿ ರಾಮಾಯಣದಲ್ಲಿದೆ. ರಾಮಾಯಣ, ಮಹಾಭಾರತ ಸೇರಿದಂತೆ ಪ್ರಾಚೀನ ಕಾವ್ಯವನ್ನು ಎಲ್ಲಾ ವರ್ಗದವರಿಗೆ ತಲುಪಿಸುವಲ್ಲಿ ಗಮಕ ಕಲೆಯ ಪಾತ್ರ ಪ್ರಮುಖವಾಗಿದೆ ಎಂದರು.

ಗಮಕ ಕಲೆಗೆ ವಿದ್ವತ್ನ ಸ್ಪರ್ಶ ಇರಲೇಬೇಕು. ಕಾವ್ಯವನ್ನು ಆಳವಾಗಿ ಅಧ್ಯಯನ ಮಾಡಿದ ನಂತರವಷ್ಟೆ ಗಮಕಿಗಳು ಗಾಯನ, ವ್ಯಾಖ್ಯಾನಕ್ಕೆ ಮುಂದಾಗಬೇಕು. ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲಿ ಕಲಾವಿದರು ರಾಗಗಳನ್ನು ಕ್ರಮಬದ್ಧವಾಗಿ ಪ್ರಸ್ತುತಪಡಿಸುವ ಮಾದರಿಯನ್ನು ಗಮಕಿಗಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಮಕ ಕಲೆಯ ಪ್ರಸ್ತುತಿಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆ ಇರುವುದು ಸ್ಪಷ್ಟವಾಗಿದೆ. ಈ ಕಲಾ ಪ್ರಕಾರದ ಮೌಲ್ಯವನ್ನು ಹೆಚ್ಚಿಸುವ ಹಾಗೂ ಹೊಸ ತಲೆಮಾರಿಗೆ ಇದನ್ನು ದಾಟಿಸುವ ನಿಟ್ಟಿನಲ್ಲಿ ಗಮಕ ಕಲೆಯನ್ನು ಕಲಿಸುವ ಶಿಕ್ಷಣ ಕ್ರಮದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಶ್ರೀಧರ ಸೇವಾ ಮಹಾಮಂಡಲದ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ, ಲೇಖಕ ಡಾ.ಎಚ್.ಎಸ್.ಮೋಹನ್ ಇದ್ದರು. ಭಾರತಿ ಹೆಗಡೆ ಮತ್ತು ಸಂಗಡಿಗರು ಗಮಕ ಪದ್ಯಗಳನ್ನು ಪ್ರಸ್ತುತಪಡಿಸಿದರು.

ಕೆ.ಎಂ.ರವೀಂದ್ರ ಸ್ವಾಗತಿಸಿದರು. ಬಿ.ಟಿ.ಅರುಣ ವಂದಿಸಿದರು.

ಯೋಗೀಶ್ ಜಿ., ವಸುಮತಿ ಗೌಡ ನಿರೂಪಿಸಿದರು. ವಿವಿಧ ಗೋಷ್ಠಿಗಳು ನಡೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-42-933958497

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.