ಸಾಗರ: ಜನಸಾಮಾನ್ಯರಿಗೂ ಪ್ರಾಚೀನ ಕಾವ್ಯದ ರಸಸ್ವಾದ ಮಾಡಲು ಇರುವ ಏಕೈಕ ಮಾರ್ಗವೆಂದರೆ ಅದು ಗಮಕ ಕಲೆ ಆಗಿದೆ ಎಂದು ಗಮಕಿ, ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ಎಂ.ಆರ್.ಲಕ್ಷ್ಮಿನಾರಾಯಣ ಅಮಚಿ ಅಭಿಪ್ರಾಯಪಟ್ಟರು.

ಸಮೀಪದ ವರದಪುರದ ಶ್ರೀಧರಾಶ್ರಮದಲ್ಲಿ ಮಲೆನಾಡು ಗಮಕ ಕಲಾ ಟ್ರಸ್ಟ್, ಶ್ರೀಧರ ಸೇವಾ ಮಹಾಮಂಡಲ ಭಾನುವಾರ ಏರ್ಪಡಿಸಿದ್ದ ಸಾಗರ ಪ್ರಾಂತ್ಯ ಪ್ರಥಮ ಗಮಕ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.

ಉದ್ದಾಮ ಪಂಡಿತರು ಮಹಾ ಕಾವ್ಯಗಳನ್ನೇನೋ ಬರೆದರು, ಆದರೆ ಕಾವ್ಯಗಳ ಧ್ಯೇಯ, ತಿರುಳು, ಸಂದೇಶ ಜನಸಾಮಾನ್ಯರಿಗೆ ತಲುಪದೆ ಅವು ವಿದ್ವಾಂಸರ ಸ್ವತ್ತಾಗಿಯೇ ಉಳಿದಿತ್ತು. ಇಂತಹ ಸಂದರ್ಭದಲ್ಲಿ ಮಹಾ ಕಾವ್ಯಗಳ ಸೂಕ್ಷ್ಮತೆ, ಸ್ವಾರಸ್ಯವನ್ನು ಎಲ್ಲಾ ವರ್ಗಗಳಿಗೂ ತಲುಪಿಸಿದ್ದು ಗಮಕ ಕಲೆಯ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದರು.

ಗಮಕಿಯಾದವರು ಸುಂದರವಾದ ಕಾವ್ಯ ರಚಿಸಿದ ಕವಿ ಮತ್ತು ಸೊಗಸಾಗಿ ಮಾತನಾಡುವ ವಾಗ್ಮಿಗಳಿಬ್ಬರ ಸತ್ವವನ್ನು ಮೈಗೂಡಿಸಿಕೊಂಡಿರಬೇಕು. ನವರಸಗಳನ್ನು ಹೊಮ್ಮಿಸುವ ರಾಗ ಜ್ಞಾನದೊಂದಿಗೆ ಅಸಾಮಾನ್ಯ ಕವಿಯನ್ನು ಸಾಮಾನ್ಯ ಜನರಿಗೆ ಪರಿಚಯಿಸುವ ಸೇತುವಾಗಿರಬೇಕು ಎಂದು ಹೇಳಿದರು.

ಹಾಡಲು ಆಯ್ದುಕೊಂಡ ಕಥಾ ಭಾಗದ ಸಂದರ್ಭ, ಸನ್ನಿವೇಶ, ಅದರಲ್ಲಿ ಬರುವ ಪಾತ್ರಗಳ ಗುಣ ಸ್ವಭಾವ, ನಡವಳಿಕೆಗಳ ಪೂರ್ಣ ಅರಿವು ಗಮಕಿಗೆ ಇದ್ದರೆ ಆಯಾ ಪದ್ಯಗಳ ರಾಗ ಸಂಯೋಜನೆ ಸುಲಭವಾಗುತ್ತದೆ. ಸೂಚ್ಯ, ವಾಚ್ಯ, ವಿಡಂಬಿತ, ವ್ಯಂಗ್ಯ, ಸಾಂಕೇತಿಕ ಮುಂತಾದ ಶಬ್ದ ಸಮೂಹಕ್ಕೆ ತಕ್ಕುದಾದ ಧ್ವನಿಯ ಹೊಂದಾಣಿಕೆ, ಕೋಪ, ತಾಪ, ಶಾಪ, ಅನುಗ್ರಹ, ಹರಕೆ, ಹಾರೈಕೆ, ವಿನಯ, ಭಕ್ತಿ, ವೈರಾಗ್ಯ ಮುಂತಾದ ಭಾವ ಪ್ರಕಟಣೆಯ ಸಾಮರ್ಥ್ಯ ಗಮಕಿಗೆ ಕರತಲಾಮಲಕವಾಗಿರಬೇಕು ಎಂದು ತಿಳಿಸಿದರು.

ಗಮಕ ಕಲೆಯಲ್ಲಿ ವ್ಯಾಖ್ಯಾನ ಮಾಡುವವರು ಬೇರೆ ಬೇರೆ ಕಾವ್ಯಗಳ ಘಟನೆ-ಸಂಗತಿಗಳನ್ನು ಸಂದರ್ಭಾನುಸಾರ ಉದಾಹರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವ್ಯಾಖ್ಯಾನಕಾರರಿಗೆ ಸಾಹಿತ್ಯ ಕ್ಷೇತ್ರದ ವಿಸ್ತಾರವಾದ ಓದು ಇದ್ದರೆ ವ್ಯಾಖ್ಯಾನ ಮೌಲಿಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಾಚೀನ ಕಾಲದ ಕಾವ್ಯಗಳ ಘಟನೆಗಳನ್ನು ಈಗಿನ ಕಾಲದ ವಿದ್ಯಮಾನಗಳಿಗೆ ಹೋಲಿಸಿ ಅರ್ಥೈಸಬೇಕಾದ ಸಂದರ್ಭಗಳಲ್ಲಿ ಪೌರಾಣಿಕ ಯುಗದ ವಾತಾವರಣ ಕೆಡದಂತೆ ಎಚ್ಚರ ವಹಿಸಬೇಕು. ತೀರಾ ಅನಿವಾರ್ಯವಾದರೆ ಮಾತ್ರ ಪರಭಾಷೆಯ ಶಬ್ಧವನ್ನು ಬಳಸಬೇಕು ಎಂದು ಕಿವಿಮಾತು ಹೇಳಿದರು.

ಟಿವಿ, ಮೊಬೈಲ್ ಸಾರ್ವತ್ರಿಕವಾದ ಮೇಲೆ ಪ್ರತ್ಯಕ್ಷ ಕಲಾ ಪ್ರದರ್ಶನಗಳಿಗೆ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುತ್ತಿದೆ. ನೂತನ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಕಾಲಿಟ್ಟಿದೆ. ಜೀವನ್ಮುಖಿಯಾದ ಪ್ರಗತಿಪರ ವಿಜ್ಞಾನ-ತಂತ್ರಜ್ಞಾನದ ಸಂಶೋಧನೆಗಳನ್ನು ದೂಷಿಸದೆ ಅವುಗಳನ್ನೆ ಬಳಸಿಕೊಂಡು ಕಲಾ ಪ್ರಪಂಚ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-42-660044251

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.