ಶಿವಮೊಗ್ಗ: ಮಲೆನಾಡಿನಲ್ಲಿ ಮೇ ತಿಂಗಳಲ್ಲಿ ಬಿಸಿಲ ಧಗೆ ಹೆಚ್ಚಿದ್ದು, ತೀವ್ರ ಶಾಖದಿಂದ (ಹೀಟ್ ವೇವ್) ಜಾನುವಾರುಗಳ ಆರೋಗ್ಯ ಮತ್ತು ಹಾಲಿನ ಉತ್ಪಾದನೆಯ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಅದನ್ನು ತಡೆಗಟ್ಟಲು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪಶುಪಾಲಕರಿಗೆ ಕೆಲವು ಸರಳ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಕೋರಿದ್ದಾರೆ.

ಬಿರು ಬಿಸಿಲಿರುವ ಮಧ್ಯಾಹ್ನದ ಸಮಯದಲ್ಲಿ ಜಾನುವಾರುಗಳಿಗೆ ಒದ್ದೆಯಾದ ಗೋಣಿ ಚೀಲಗಳನ್ನು ಹೊದಿಸುವುದು ಉತ್ತಮ.ಜಾನುವಾರುಗಳ ಕೊಟ್ಟಿಗೆಯ ಚಾವಣಿಗೆ ಸುಣ್ಣದ ಲೇಪನ ಮಾಡುವುದರಿಂದ ಅಥವಾ ತೆಂಗಿನ ಗರಿಗಳನ್ನು ಹೊದಿಸುವುದರಿಂದ ತಾಪಮಾನ ಕಡಿಮೆ ಮಾಡಬಹುದು. ಜಾನುವಾರುಗಳಿಗೆ ಯಾವಾಗಲೂ ಕುಡಿಯಲು ಸ್ವಚ್ಛ ಮತ್ತು ತಂಪಾದ ನೀರಿನ ವ್ಯವಸ್ಥೆ ಇರಲಿ.

ಜಾನುವಾರುಗಳ ಮೈಮೇಲೆ ನೀರನ್ನು ಸಿಂಪಡಿಸುವ ವ್ಯವಸ್ಥೆ ಮಾಡಬೇಕು ಹಾಗೂ ಸೊಳ್ಳೆ, ಕೀಟಗಳ ಬಾಧೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ರಸಮೇವು, ಪೌಷ್ಟಿಕ ಆಹಾರ ಮತ್ತು ಅಗತ್ಯ ಪೋಷಕಾಂಶಗಳನ್ನು ನೀಡಬೇಕು. ಸಾಧ್ಯವಾದಷ್ಟು ಮಧ್ಯಾಹ್ನದ ವೇಳೆ ಜಾನುವಾರುಗಳನ್ನು ಬಿಸಿಲಿಗೆ ಬಿಡದೆ, ಮರಗಳ ಕೆಳಗೆ, ತಂಪಾದ ನೆರಳಿನಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-42-1553643761

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.