ಶ್ರವಣಬೆಳಗೊಳ: ಪಂಪ, ರನ್ನ, ಜನ್ನರು ಕನ್ನಡ ಸಾಹಿತ್ಯ ಲೋಕಕ್ಕೆ ಎಂದಿಗೂ ಮರೆಯದ ಅದ್ವಿತೀಯ ಸೇವೆ ಸಲ್ಲಿಸಿದ ಮಹಾನ್ ಮೇರು ಕವಿಗಳು ಎಂದು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು ಗುರುವಾರ ಹೇಳಿದರು.

ಹೊರ ವಲಯದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಶ್ರೀ ಧವಲ ತೀರ್ಥಂನ ಸಂಗೋಷ್ಠಿ ಭವನದಲ್ಲಿ ಕನ್ನಡ ಜೈನ ಸಾಹಿತ್ಯದಲ್ಲಿ ಸ್ತ್ರೀಯರ ಚಿತ್ರಣ (ಪಂಪ, ರನ್ನ, ಜನ್ನರ ಅನುಲಕ್ಷಿಸಿ) ಕುರಿತು ಅವರು ಉಪನ್ಯಾಸ ನೀಡಿದರು.

ಪಂಪ, ರನ್ನ ಕವಿಗಳು ಲೌಕಿಕ ಧಾರ್ಮಿಕಕ್ಕೆ ಸಂಬಂಧಿಸಿದ ಹೆಚ್ಚಿನ ಕೃತಿಗಳನ್ನು ರಚಿಸಿದರೆ, ಜನ್ನನೂ 2 ಧಾರ್ಮಿಕ ಕೃತಿಗಳನ್ನು ರಚಿಸಿದ್ದು, ಅದರಲ್ಲಿ ಸ್ತ್ರೀಯರ ಬದಕಿನ ಚಿತ್ರಣವೂ ಇದೆ ಎಂದರು.

ಮಹಿಳಾ ಶೋಷಣೆ ಮತ್ತು ಮಹಿಳಾ ಪ್ರತಿರೋಧ ಸಾರ್ವಕಾಲಿಕವಾಗಿರುವ ಅಂಶವನ್ನು ಪಂಪ, ರನ್ನರ ಕಾವ್ಯದಲ್ಲಿ ದ್ರೌಪದಿ ಪಾತ್ರದ ಉದಾಹರಣೆಯನ್ನು ಕುರಿತು ಪ್ರಸ್ತಾಪಿಸಿದರು. ಅದೇ ಜನ್ನನ ಅನಂತನಾಥಪುರಾಣ, ಯಶೋಧರ ಚರಿತ್ರೆಗಳಲ್ಲಿ ಸ್ತ್ರೀ ಪಾತ್ರಗಳು ತದ್ವಿರುದ್ಧ ಮನೋಸ್ಥಿತಿ ಇರುವುದನ್ನು ಪ್ರಸ್ತುತ ಕಾಲದಲ್ಲಿ ಸ್ತ್ರೀಯರ ಶೋಷಣೆ ವಿಪರೀತವಾಗಿದ್ದು, ನಗರೀಕರಣದ ಪ್ರಭಾವ, ಡಿಜಿಟಲ್ ಜಗತ್ತಿನ ಮಹಿಳಾ ಶೋಷಣೆಯ ಕರಾಳ ಮುಖಗಳನ್ನು ಪ್ರಸ್ತಾಪಿಸಿದರು.

ಶತಮಾನಗಳಿಂದಲೂ ಆಚರಿಸುತ್ತಿರುವ ಧಾರ್ಮಿಕ ಪಂಚಕಲ್ಯಾಣಗಳಲ್ಲಿ ಜೈನ ಮಹಿಳೆಯರು ಮುಕ್ತವಾಗಿ ನಿರ್ವಹಿಸುತ್ತಿರುವ ಕಾರ್ಯಗಳನ್ನು ಅವರು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ರಮೇಶ್ ಶಿರಹಟ್ಟಿ ಶಾಸ್ತ್ರಿ ಮಾತನಾಡಿದರು, ಕೂಷ್ಮಾಂಡಿನಿ ಜೈನಮಹಿಳಾ ಸಮಾಜದ ಉಪಾಧ್ಯಕ್ಷೆ ತಿಲಕಾ ನವೀನ್ ಕುಮಾರ್, ಜೈನ ಸಮಾಜದ ಅಧ್ಯಕ್ಷ ಪದ್ಮಕುಮಾರ್, ಉಪನ್ಯಾಸಕರಾದ ವೃಷಭ್ ಕುಮಾರ್, ಲೋಕಕುಮಾರ್, ರಾಜೇಂದ್ರ ಪಾಟೀಲ್ ಶಾಸ್ತ್ರಿ ಹಜಾರಿ ಪಾರ್ಶ್ವನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-36-673439068

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.