ಶ್ರವಣಬೆಳಗೊಳ: ಕ್ಷೇತ್ರದಲ್ಲಿ ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವದ ನಿಮಿತ್ತ ನೇಮಿನಾಥ ತೀರ್ಥಂಕರ, ಕ್ಷೇತ್ರದ ಅಧಿದೇವತೆ ಯಕ್ಷಿ ಕೂಷ್ಮಾಂಡಿನಿ ದೇವಿಯ ಮಹಾರಥೋತ್ಸವವು ಅಭಿನವ ಚಾರುಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ಗುರುವಾರ ಅದ್ದೂರಿಯಾಗಿ ನೆರವೇರಿತು.

ರಥೋತ್ಸವಕ್ಕೂ ಮುನ್ನ ಭಟ್ಟಾರಕರು ಹೊರ ವಲಯದಲ್ಲಿರುವ ಮೂಲಸ್ಥಾನ ಜಕ್ಕಳಮ್ಮ ದೇವಿಯ ಸನ್ನಿಧಿ, ಕ್ಷೇತ್ರಪಾಲ ಬ್ರಹ್ಮದೇವರಿಗೆ ಪೂಜೆ ಸಲ್ಲಿಸಿ, ಜೈನ ಮಠದಲ್ಲಿರುವ ಕೂಷ್ಮಾಂಡಿನಿ ದೇವಿಗೆ ಮಂಗಳಾರತಿ ಮಾಡಿದರು. ಹುಳ್ಳ ಸಭಾ ಮಂಟಪದಲ್ಲಿ ನೇಮಿನಾಥ ಸ್ವಾಮಿ, ಯಕ್ಷಿ ಕೂಷ್ಮಾಂಡಿನಿ ದೇವಿ ಹಾಗೂ ಸರ್ವಾಹ್ಣ ಯಕ್ಷರಿಗೆ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.

ಉತ್ಸವ ತೀರ್ಥಂಕರ ಮತ್ತು ದೇವಿಯನ್ನು ವಿವಿಧ ಮಂಗಲ ವಾದ್ಯಗಳೊಂದಿಗೆ ಆಹ್ವಾನಿಸಿ ಜೈನಮಠದ ಮುಂಭಾಗದಲ್ಲಿ ಸಿದ್ಧಗೊಂಡಿದ್ದ ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಮಹಾರಥಕ್ಕೆ ಪೂಜೆಯ ನಂತರ ಹಗ್ಗ ಹಿಡಿದು ಮೊದಲು ಎಳೆಯಲು ಭಕ್ತ ಸಮೂಹ ಮುಗಿಬಿದ್ದರು. ನಗಾರಿ ವಾದನ, ಮಂಗಲ ವಾದ್ಯಗಳು, ಘಂಟನಾದ, ಮೈಸೂರು ಬ್ಯಾಂಡ್ ವಾದನ, ಚೆಂಡೆ ವಾದ್ಯ, ಮಹಾರಾಷ್ಟ್ರದ ಝುಂ ಝುಂ ಪಥಕ, ಸ್ಥಳೀಯ ಬ್ಯಾಂಡ್ ಮೊಳಗಿದವು. ಭಕ್ತರು ಹಣ್ಣು ಕಾಯಿ, ಹೂವು, ಧವನ ಸಹಿತ ಪೂಜೆ ಸಲ್ಲಿಸಿದರು.

ನಂದಕುಮಾರ್ ಶಾಸ್ತ್ರಿ ಪ್ರೇಮಕುಮಾರ್, ಜಿನೇಶ್ ಕುಮಾರ್, ಜೀವೇಂದ್ರ ಕುಮಾರ್ ಶಾಸ್ತ್ರಿ, ಅನೂಪ್, ಸನ್ಮತಿ, ವಿಹಾರ್ ಪೂಜೆಯ ನೇತೃತ್ವ ವಹಿಸಿದ್ದರು. ಆಚಾರ್ಯ ಅನೇಕಾಂತ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ಸಾನಿಧ್ಯ ವಹಿಸಿದ್ದರು.

ಜಿ.ಸಿ.ಮಾಣಿಕ್ ಚಂದ್ರಯ್ಯ ಮತ್ತು ಕುಟುಂಬದವರು ಪಾನಕ–ಮಜ್ಜಿಗೆ ವಿತರಿಸಿದರು.. ರಥ ಸಾಗುವ ಭಂಡಾರ ಬಸದಿಯ ಸುತ್ತಲಿನ ನಿವಾಸಿಗಳೂ ನೀರು, ಮಜ್ಜಿಗೆ, ತಂಪು ಪಾನೀಯ ವಿತರಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಅವರು 15ಸಾವಿರ ಲೀಟರ್ ಶುದ್ಧ ಕುಡಿಯುವ ನೀರು ಮತ್ತು ಮಜ್ಜಿಗೆಯ ವ್ಯವಸ್ಥೆ ಕಲ್ಪಿಸಿದ್ದರು. ಹಾಸನ ಶಾಸಕ ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಸದಸ್ಯ ಗೋಪಾಲಸ್ವಾಮಿ, ಪತ್ನಿ ಗೀತಾ ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-36-1280674225

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.