ಶ್ರವಣಬೆಳಗೊಳ: ‘ಭಾರತೀಯ ಪ್ರಾಚೀನ ಭಾಷೆಗಳಲ್ಲಿ ಪ್ರಾಕೃತವು ಒಂದಾಗಿದೆ. ಐತಿಹಾಸಿಕವಾಗಿ ಹಲವು ರಾಜ ಮನೆತನಗಳು ಸಾಹಿತ್ಯ ಸಂವರ್ಧನೆಗೆ ಪೋಷಕರಾಗಿ ಹಲವು ಕವಿಗಳಿಗೆ ಆಶ್ರಯದಾತರಾಗಿದ್ದರು. ಪ್ರಾಕೃತ ಸಾಹಿತ್ಯದಲ್ಲಿ ಹಲವು ಗ್ರಂಥಗಳು ರಚನೆ ಆಗಿರುವುದು ವಿಶೇಷ ಸಂಗತಿ’ ಎಂದು ಕೊಲ್ಹಾಪುರದ ವಿದ್ಯಾ ಶೋಧ ಸಂಸ್ಥಾನದ ನಿರ್ದೇಶಕಿ ಸುಷ್ಮಾ ಗುಣವಂತೆ ರೋಟೆ ಹೇಳಿದರು.

ಹೊರ ವಲಯದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಶ್ರೀ ಧವಲ ತೀರ್ಥಂಕರನಲ್ಲಿ ಆಯೋಜಿಸಿದ್ದ 20ನೇ ಪ್ರಾಕೃತ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಪ್ರಾಕೃತ ಸಾಹಿತ್ಯವು ಕೇವಲ ಧಾರ್ಮಿಕ ಸಾಹಿತ್ಯವಾಗಿರದೇ ಪುರಾಣ, ಚರಿತ್ರೆ, ಮುಕ್ತಕ, ದಾರ್ಶನಿಕ, ನಾಟ್ಯ, ಶಿಲ್ಪ, ಕಥಾ, ಸ್ಥಾಪತ್ಯ, ಗಣಿತ, ವೈದ್ಯ, ಅರ್ಥಶಾಸ್ತ್ರ ಮೊದಲಾದ ಜನೋಪಯೋಗಿ ಕೃತಿಗಳನ್ನು ಒಳಗೊಂಡಿದೆ. ಪ್ರಾಕೃತ ಭಾಷೆ ಹಾಗೂ ಸಾಹಿತ್ಯದ ಸಂಶೋಧನೆ, ಅಧ್ಯಯನ, ಪ್ರಕಟಣೆಗಾಗಿ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನೆ ಸಂಸ್ಥೆಯು ಸ್ಥಾಪಿತವಾಗಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ‘ಪ್ರಾಕೃತ ಭಾಷೆ ಭಗವಾನ್ ಮಹಾವೀರರ ಕಾಲದ ಜನಸಾಮಾನ್ಯರ ಆಡು ಭಾಷೆಯಾಗಿದೆ. ಈ ಪುರಾತನ ಪ್ರಾಕೃತ ಭಾಷೆಯಲ್ಲಿಯೇ ಎಲ್ಲ ಧಾರ್ಮಿಕ ಅಂಶಗಳು ಅಡಗಿವೆ. ಯುವ ಸಮುದಾಯ ಇತ್ತೀಚೆಗೆ ಪ್ರಾಕೃತ ಭಾಷೆಯ ಅಧ್ಯಯನದಲ್ಲಿ ತೊಡಗುತ್ತಿರುವುದು ಆಶಾದಾಯಕವಾದ ವಿಷಯ. ಕರ್ನಾಟಕದಲ್ಲೇ ಪ್ರಾಕೃತ ವಿಶ್ವವಿದ್ಯಾಲಯದ ರೂಪಿಸಲು ಯೋಜನೆ ಮಾಡಲಾಗುತ್ತಿದೆ’ ಎಂದರು.

ಇಂಗ್ಲಿಷ್ ಮಾಧ್ಯಮ ಪದಕ ವಿಜೇತರು: ಪ್ರಾಕೃತ ಡಿಪ್ಲೊಮಾ ತರಗತಿಯ ಸುವರ್ಣ ಪದಕವನ್ನು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ಜಿನ್ಸಿ ಥೋಮಸ್, ರಜತ ಪದಕವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನ ಮನ್ವಿಕಾ ಕೆ., ಕಂಚಿನ ಪದಕವನ್ನು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ಶೈಲಾ ಕಾಮತ್ ಪಡೆದರು.

ಇವರಿಗೆ ಪದಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳು, ಮೂರು ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಅಂಕಪಟ್ಡಿ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎ.ಸಿ.ವಿದ್ಯಾಧರ್ ಮಾತನಾಡಿದರು. ನಿರ್ದೇಶಕ ರಮೇಶ್ ಶಿರಹಟ್ಟಿ ಶಾಸ್ತ್ರೀ, ಕುಲಸಚಿವ ಲೋಕಕುಮಾರ್ ಎನ್., ರಾಜೇಂದ್ರ ಪಾಟೀಲ್ ಶಾಸ್ತ್ರಿ ಟ್ರಸ್ಟಿ ಅಜಿತ್ ಬಳಗಾರ್, ವೃಷಭ್ ಕುಮಾರ್ ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-36-226673891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.