ಸುಬ್ರಹ್ಮಣ್ಯ: ಯುವಕರು ಧಾರ್ಮಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಅಂತರ್ಗತವಾಗಿರುವ ದ್ವೇಷ ಭಾವನೆಯನ್ನು ತೊಡೆದು ಹಾಕಬೇಕು. ನಿರ್ಮಲ ಮನಸ್ಸಿನಿಂದ ನಮ್ಮೊಳಗಿರುವ ಶತ್ರುತ್ವದ ಭಾವನೆ ದೂರವಾಗಿ ಬದುಕು ಉನ್ನತವಾಗುತ್ತದೆ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.

ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲಿತದ ಉತ್ಸವಗಳು ಭಗವಂತನಿಗೆ ಪ್ರಿಯವಾಗಿದ್ದು, ಆಧುನಿಕ ಯುಗದಲ್ಲಿ ಮಕ್ಕಳು ಧಾರ್ಮಿಕ ಕಾರ್ಯಕ್ರಮದತ್ತ ಆಕರ್ಷಿತರಾಗಬೇಕು. ಈ ಮೂಲಕ ನಮ್ಮ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಸಿದ್ಧರಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಭಗವಂತನು ನಾನಾ ಅವತಾರಗಳನ್ನು ಎತ್ತಿದ್ದಾನೆ. ಪ್ರತಿ ಅವತಾರಕ್ಕೂ ವಿಶೇಷ ಅರ್ಥವಿದೆ. ಧರ್ಮ ರಕ್ಷಣೆಗಾಗಿ ಮತ್ತು ದುಷ್ಟ ನಿಗ್ರಹಕ್ಕಾಗಿ ದೇವರು ವಿವಿಧ ಅವತಾರ ತಾಳಿದ್ದಾನೆ. ಇದರಲ್ಲಿ ಅತ್ಯಂತ ಅಮೂಲ್ಯವಾದುದು ನರಸಿಂಹಾವತಾರವಾಗಿದೆ. ಎಡನೀರು ಮಠ ಮತ್ತು ಸುಬ್ರಹ್ಮಣ್ಯ ಮಠದ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಕಾರ್ಯಕ್ರಮದ ಹೇಳಿದರು.

ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯೀಸ, ಕಲಾವಿದ ಕೆ.ಯಜ್ಞೇಶ್ ಆಚಾರ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-29-22841554

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.