ಸುಂಟಿಕೊಪ್ಪ (ಮಡಿಕೇರಿ): ಹಚ್ಚ ಹಸಿರ ಕಾನನಗಳು, ಕಾಫಿ ತೋಟಗಳು, ಆಕಾಶ ಚುಂಬಿಸುವ ಮರಗಳು, ಹಸಿರನ್ನೇ ಹೊದ್ದ ಗುಡ್ಡಗಳಿಂದ ಆವೃತವಾದ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಗುರುವಾರ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗುವ ಮೂಲಕ ಕನ್ನಡದ ಕಹಳೆ ಮೊಳಗಿತು.

ಗಿಜಿಗುಡುತ್ತಿದ್ದ ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲೇ ಇರುವ ಎಸ್.ಆರ್.ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಜನಪ್ರತಿನಿಧಿಗಳ ಗೈರು ಹಾಜರಿಯಲ್ಲಿ ಸಮ್ಮೇಳನ ಉದ್ಘಾಟನೆಗೊಂಡಿತು.

ಬೆಳಿಗ್ಗೆ 8 ಗಂಟೆಗೆ ಆರಂಭವಾದ ವೈವಿಧ್ಯಮಯವಾದ ಕಾರ್ಯಕ್ರಮಗಳು ರಾತ್ರಿಯಾದರೂ ಮುಂದುವರಿಯಿತು. ವಿಚಾರಗೋಷ್ಠಿ, ಕನ್ನಡ ಗೀತಗಾಯನ, ಕನ್ನಡ ಪುಸ್ತಕಗಳ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳು ವೇದಿಕೆಯಲ್ಲಿ ಪ್ರದರ್ಶನಗೊಂಡವು. ಇಳಿಸಂಜೆಯ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನದ ಮೆರುಗನ್ನು ಇಮ್ಮಡಿಸಿದವು.

ಸುಂಟಿಕೊಪ್ಪದ ಸಾಧಕರ ಹೆಸರಿನಲ್ಲಿ 17 ದ್ವಾರಗಳು, ಕನ್ನಡ ಧ್ವಜಗಳು, ಕನ್ನಡ ತೋರಣಗಳು, ಕನ್ನಡ ಪುಸ್ತಕ ಮಳಿಗೆಗಳು ಗ್ರಾಮದಲ್ಲಿ ಕನ್ನಡಮಯ ವಾತಾವರಣ ಸೃಷ್ಟಿಸಿದವು.

ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ನಾಡಗೀತೆ ಹಾಡಿ ಮುಗಿಯುವಷ್ಟರಲ್ಲಿ ಕಲಾವಿದ ಸತೀಶ ಅವರ ಕುಂಚದಲ್ಲಿ ಕಲಾಕೃತಿಯೊಂದು ಅರಳಿ, ಚಕಿತಗೊಳಿಸಿತು. ಕುಶಾಲನಗರದ ನಂಜುಂಡಸ್ವಾಮಿ ಮತ್ತು ತಂಡದವರು ರೈತಗೀತೆಗೆ ರೂಪಕವೊಂದನ್ನು ವೇದಿಕೆಯಲ್ಲಿ ಸೃಷ್ಟಿಸಿ ಗಮನ ಸೆಳೆದರು.

ಸಮ್ಮೇಳನದ ವೇದಿಕೆಯಲ್ಲಿ ಸಾಹಿತಿಗಳಾದ ಇ.ಸುಲೇಮಾನ್ ರಚಿಸಿದ ‘ರಾಗವಿಲ್ಲದ ಕವಿತೆ’, ಎಚ್.ಮಂಜುನಾಥ್ ಅವರ ‘ಮನುಷ್ಯತ್ವದ ಸಾರ’, ಜಯಪ್ರಕಾಶ್ ಪುತ್ತೂರು ಅವರ ‘ವ್ಯಕ್ತಿತ್ವ ವಿಕಸನದ ವಿಚಾರ ಧಾರೆ’ ಡಾ.ಬೆಸೂರು ಮೋಹನ್ ಪಾಳೆಗಾರ್ ಅವರ ‘ಸ್ವಾತಂತ್ರ್ಯ ಕ್ರಾಂತಿಯ ಕಿಡಿ’, ಗಣೇಶ ಶರ್ಮ ಅವರ ‘ಮಕ್ಕಳ ಕಥೆ’, ಹೇಮಂತ್ ಪಾರೇರ ಅವರ ‘ಶಕುನದ ಹಕ್ಕಿ’, ಲಾವಣ್ಯ ಮೋಹನ್ ಅವರ ‘ಛಾಯಾ ಕೃತಿಗಳು’ ಹಾಗೂ ಜಯಲಕ್ಷ್ಮೀ ಅವರು ‘ಮನದ ಮಡಿಲೊಳಗೆ’ ಪುಸ್ತಕಗಳು ಸಾಲುಸಾಲಾಗಿ ಲೋಕಾರ್ಪಣೆಗೊಂಡವು.

ಮುಖಂಡರಾದ ವಿಶಾಲ್ ಶಿವಪ್ಪ, ಸಭಾಸ್ಟಿನ್, ಮುನೀರ್ ಅಹಮದ್, ರೇವತಿ ರಮೇಶ್, ಜಲಜಾ ಶೇಖರ್, ವಾಸುರೈ, ಕಡ್ಲೇರ ತುಳಸಿ ಮೋಹನ್, ಅಂಬೆಕಲ್ಲು ನವೀನ್, ಪರಮೇಶ್, ಕೆ.ಎಸ್.ನಾಗೇಶ್, ದಯಾಚಂಗಪ್ಪ, ನಿಜಾಮುದ್ದೀನ್, ನಾಸೀರ್, ಎ.ಲೋಕೇಶ್ ಕುಮಾರ್,ಸುನಿತಾ ಗಿರೀಶ್, ಅನಿಲ್ ಕುಮಾರ್, ವಿ.ಜಿ.ಲೋಕೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-902832501

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.