ಸುಂಟಿಕೊಪ್ಪ: ಸೌರಮಾನ ಯುಗಾದಿ ಸಂದರ್ಭದಲ್ಲಿ ಹೊಸ ವರ್ಷವನ್ನು ಸ್ಚಾಗತಿಸುವ ಹಬ್ಬವನ್ನು ಮಲಯಾಳಿ ಭಾಷಿಗರು ವಿಶು ಎಂಬುದಾಗಿ ಆಚರಿಸಿಕೊಂಡರೆ, ತುಳು ಭಾಷಿಗರು ಬಿಸು ಪರ್ಬ ಎಂಬುದಾಗಿ ಬುಧವಾರ ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ.

ಹಬ್ಬದಲ್ಲಿ ಇಲ್ಲಿನ ಮಲಯಾಳಿ ಭಾಷಿಗರು ಅಕ್ಕಪಕ್ಕದ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ಹೊಸ ವಸ್ತ್ರ ಧರಿಸಿ ದೇವರಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಸುಂಟಿಕೊಪ್ಪದಲ್ಲಿ ನೆಲೆಸಿರುವ ಕೇರಳಿಗರು ತಮ್ಮ ಮನೆ ಮತ್ತು ಅಯ್ಯಪ್ಪ ಹಾಗೂ ಮುತ್ತಪ್ಪ ದೇವಾಲಯದಲ್ಲಿ ಕಣಿ ಇಟ್ಟು ಶ್ರದ್ಧೆಯಿಂದ, ಸಡಗರದಿಂದ ಪೂಜೆ ಸಲ್ಲಿಸುವುದರ ಮೂಲಕ ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ.

ಬುಧವಾರ ಮುಂಜಾನೆ ಬೇಗನೆ ಎದ್ದು ವಿಶು ಕಣಿಯನ್ನಿಟ್ಟು ಅದರಲ್ಲಿ ವಿವಿಧ ತರಹದ ತರಕಾರಿಗಳು, ತೆಂಗಿನಕಾಯಿ, ಅಕ್ಕಿ, ಹಣ್ಣು, ವಿವಿಧ ರೀತಿಯ ತಿಂಡಿ ತಿನಿಸುಗಳನ್ನು, ಆಭರಣ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ದೇವರಲ್ಲಿ ಸುಖ, ಸಮೃದ್ದಿ ದೊರಕಲಿ ಎಂದು ಪ್ರಾರ್ಥಿಸುತ್ತಾರೆ. ಹಬ್ಬದ ಅಂಗವಾಗಿ ಮನೆಗೆ ಬಂದ ಸ್ನೇಹಿತರು, ಬಂಧು–ಬಳಗದವರಿಗೆ, ಅತಿಥಿಗಳಿಗೆ ಅನ್ನ, ಸಾಂಬರು, ಪಚ್ಚಡಿ, ಕಿಚ್ಚಡಿ, ಕಾಳನ್, ಅವೆಲ್, ಉಣ್ಣಿಯಪ್ಪ, ಓಲನ್, ಪಾಯಸ, ತುಪ್ಪ, ಚಿಪ್ಸ್ ಸೇರಿದಂತೆ ಹತ್ತು ಹಲವು ತಿಂಡಿ ತಿನಿಸುಗಳನ್ನು ಮಾಡಿ ಉಣ ಬಡಿಸಿ ಸಂಭ್ರಮಿಸುತ್ತಾರೆ.

ಕೇರಳಿಗರು ಮತ್ತು ತುಳು ಭಾಷಿಗರು ಹೊಸ ಬಟ್ಟೆ ಧರಿಸಿದರಲ್ಲದೇ ಮನೆಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ದೀಪ ಹಚ್ಚಿ ಬಂದವರನ್ನು ಸ್ಚಾಗತಿಸಿ ಮನೆಗೆ ಬರ ಮಾಡಿಕೊಳ್ಳುತ್ತಾರೆ. ಈಗಾಗಲೇ ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಸಿಕ್ಕಿದರಿಂದ ಕೇರಳ, ದಕ್ಷಿಣ ಕನ್ನಡ ಜಿಲ್ಲೆಯ ನೆಂಟರಿಷ್ಟರು, ಸ್ನೇಹಿತರು ಈಗಾಗಲೇ ಇಲ್ಲಿಗೆ ಆಗಮಿಸಿ ಹಬ್ಬದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

ಕೇರಳಿಗರು ಮತ್ತು ತುಳುವರು ಬುಧವಾರ ನಡೆಯುವ ಹಬ್ಬಕ್ಕೆ ಮಂಗಳವಾರ ಕೊನೆಯ ಸಿದ್ಧತೆಯಲ್ಲಿ ತೊಡಗಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-51-1769550648

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.