ತೀರ್ಥಹಳ್ಳಿ: ‘ಬದುಕು ನಿರ್ವಹಣೆಗೆ ಹಣ ಮುಖ್ಯ. ಪ್ರಚಲಿತ ಸನ್ನಿವೇಶದಲ್ಲಿ ಕಲೆ ನಂಬಿ ಬದುಕು ಕಟ್ಟಿಕೊಳ್ಳುವುದು ಕಷ್ಟ. ಈಗ ವೃತ್ತಿಪರ ಕಲಾವಿದರಾಗಿ ಗುರುತಿಸಿಕೊಳ್ಳುವುದೂ ಅಸಾಧ್ಯ’ ಎಂದು ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ, ವ್ಯಂಗ್ಯಚಿತ್ರ ಕಲಾವಿದರ ಬಳಗದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವ್ಯಂಗ್ಯಚಿತ್ರ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಜನರ ಯೋಚನಾ ಮನೋಭಾವ ಬದಲಾಗುತ್ತಿದೆ. ಪ್ರಚಲಿತ ವಿಷಯಕ್ಕೆ ಸಂಬಂಧಿಸಿದಂತೆ ರಚಿಸಿದ ಚಿತ್ರಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆಸಕ್ತಿಯಿಂದ ಚಿತ್ರಗಳನ್ನು ವಿಮರ್ಶಿಸುವ ಗುಣ ಉಳಿಸಿಕೊಳ್ಳುತ್ತಿಲ್ಲ. ಟೀಕೆಗಳನ್ನು ಎತ್ತಿ ತೋರಿಸುವ ಮೂಲಕ ನೈಜತೆ ಮರೆಮಾಚುವ ಪ್ರಯತ್ನ ನಡೆಯುತ್ತಿದೆ’ ಎಂದು ಬೇಸರಿಸಿದರು.

‘ಕಾಲೇಜು ದಿನಗಳಲ್ಲಿ ಪ್ರಕಾಶ್ ಕ್ಯಾರಿಕೇಚರ್ ಬರೆಯುವಾಗ ನಮಗೆಲ್ಲ ಆಶ್ಚರ್ಯ ಎನಿಸುತ್ತಿತ್ತು. ಸಾಮಾನ್ಯವಾಗಿ ಮಹಿಳೆಯರು, ಮಕ್ಕಳ ಮುಖ ಭಾವದ ಗೆರೆಗಳು ಕಡಿಮೆಯಾಗಿರುತ್ತವೆ. ಎಲ್ಲರಿಗೂ ಕಾರ್ಟೂನ್ ರಚಿಸುವುದು ಕಷ್ಟವಾದರೆ ಅದನ್ನು ಲೀಲಾಜಾಲವಾಗಿ ಬರೆಯುತ್ತಿದ್ದರು. ಪತ್ರಿಕೆಗಳು ವ್ಯಂಗ್ಯಚಿತ್ರವನ್ನು ಪ್ರಕಟಿಸದೇ ಹೋಗಿದ್ದರೆ ನಾವ್ಯಾರು ಬೆಳೆಯುತ್ತಿರಲಿಲ್ಲ’ ಎಂದು ವ್ಯಂಗ್ಯಚಿತ್ರ ಕಲಾವಿದ, ನಿವೃತ್ತ ಪ್ರಾಧ್ಯಾಪಕ ನಟರಾಜ್ ಅರಳಸುರಳಿ ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ವ್ಯಂಗ್ಯಚಿತ್ರಕಾರ ರಾಂಚಂದ್ರ ಕೊಪ್ಪಲು, ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-42-1892035224

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.