ತಿಪಟೂರು: ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳು ಬೆಳವಣಿಗೆ ಹೊಂದಬೇಕಾದರೆ ಪ್ರೋತ್ಸಾಹ ನೀಡುವ ಆಸಕ್ತ ಮನಸ್ಸುಗಳು ಮುಖ್ಯ ಎಂದು ಸಾಹಿತಿ ಹಾಗೂ ಕವಿ ಬಿ.ಆರ್ ಲಕ್ಷ್ಮಣ್ ರಾವ್ ಹೇಳಿದರು.

ನಗರದ ಹೊರವಲಯದಲ್ಲಿ ಆಯೋಜಿಸಿದ್ದ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ಬೆಳ್ಳಿಹಬ್ಬದ ಅಂಗವಾಗಿ ಗೌರವ ಸದಸ್ಯತ್ವ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲೆ, ಸಾಹಿತ್ಯ, ಸಾಮಾಜಿಕ ಕ್ಷೇತ್ರದ ಆಸಕ್ತಿ ಉಳ್ಳ ಮನಸ್ಸುಗಳಿಂದ ಪ್ರೋತ್ಸಾಹ ಸಾಧ್ಯವಾಗುತ್ತದೆ. ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ಕಲೆ ಸಾಹಿತ್ಯ ಸೇವೆಯ ಮೂಲಕ ಇಪ್ಪತ್ತೈದು ವಸಂತ ಪೂರೈಸಿರುವುದು ಶ್ಲಾಘನೀಯ ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ, ಸಂಘಸಂಸ್ಥೆಗಳ ಹುಟ್ಟುಹಾಕುವುದಕ್ಕಿಂತ ಅವುಗಳನ್ನು ಸಾಮಾಜಿಕವಾಗಿ ಬೆಳೆಸುವ ಕೆಲಸ ಮಾಡುವುದು ಮುಖ್ಯ. ಸಂಘ ಉತ್ತಮದಾರಿಯಲ್ಲಿ ಸಾಗಿ ಬೆಳ್ಳಿಹಬ್ಬ ಆಚರಿಸುತ್ತಿದೆ. ಇನ್ನೂ ಹೆಚ್ಚಿನ ಸಾಮಾಜಿಕ ಸೇವೆ ಮಾಡಲಿ ಎಂದರು.

ವೆಂಕಟನಾರಾಯಣ್, ತಹಶೀಲ್ದಾರ್ ಮೋಹನ್ ಕುಮಾರ್, ಇಒ ಸುದರ್ಶನ್, ಜಗನ್ನಾಥ್, ಟಿಎಸ್ ನಾಗರಾಜ ಶೆಟ್ಟಿ, ಎಚ್.ಸಿ ನಾಗರಾಜ್, ಲಿಂಗಪ್ಪ, ಎನ್.ಬಾನುಪ್ರಶಾಂತ್, ಕೆ.ಎನ್ ರೇಣುಕಯ್ಯ, ಉದಯರವಿ, ಕೆ.ಎಂ ರಾಜಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-17-500781766

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.